ಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕ್ಷಣದಲ್ಲೇ ನಿವಾರಿಸುವ ಮನೆಮದ್ದು ಇದನ್ನು ಕುಡಿದಲ್ಲಿ ಗ್ಯಾಸ್ಟ್ರಿಕ್ ಸುಳಿಯುವುದೇ ಇಲ್ಲ.

ನಮಸ್ಕಾರ ಪ್ರಿಯ ಓದುಗರೇ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕ್ಷಣದಲ್ಲೇ ನಿವಾರಿಸುವ ಮನೆಮದ್ದು ಇದನ್ನು ಕುಡಿದಲ್ಲಿ ಗ್ಯಾಸ್ಟ್ರಿಕ್ ಸುಳಿಯುವುದೇ ಇಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಇತ್ತೀಚಿನ ದಿನಗಳಲ್ಲಿ ನೂರಕ್ಕೆ 40 ರಷ್ಟು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಹೇಗೆ ಬರುತ್ತದೆ ಅನ್ನೋದಕ್ಕೆ ನಿರ್ದಿಷ್ಟವಾದ ಕಾರಣವಿಲ್ಲ. ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ರೆ, ಆಹಾರದಲ್ಲಿ ಹೆಚ್ಚಿನ ಖಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಹೀಗೆ ಹಲವು ಕಾರಣಗಳಿಂದ ಗ್ಯಾಸ್ಟ್ರಿಕ್ ಬರುವ ಸಾಧ್ಯತೆ ಹೆಚ್ಚು.

ಕೆಲವೊಮ್ಮೆ ಗ್ಯಾಸ್ಟ್ರಿಕ್ ಆದ್ರೆ ತುಂಬಾನೇ ಹೊಟ್ಟೆ ನೋವಾಗುತ್ತದೆ ಹಾಗೂ ಎದೆ ಉರಿ, ಹುಳಿ ತೇಗು ಇತ್ಯಾದಿ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಗ್ಯಾಸ್ಟ್ರಿಕ್ ಅನ್ನೋ ಸಮಸ್ಯೆಗೆ ಕೆಲವರು ಪ್ರತಿದಿನ ಔಷದಿ ಮಾತ್ರೆಗಳನ್ನು ತಗೆದುಕೊಳ್ಳುತ್ತಾರೆ. ಆದ್ರೆ ಇದು ಕ್ಷಣಿಕ ನೋವು ನಿವಾರಿಸಬಹುದು. ಮುಂದಿನ ದಿನಗಳಲ್ಲಿ ಇದರ ಅಡ್ಡ ಪರಿಣಾಮಗಳು ದೇಹದ ಮೇಲೆ ಪ್ರಭಾವ ಬೀರುತ್ತದೆ.

ಹಾಗಾಗಿ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ನುಂಗುವ ಬದಲು ಮನೆಯಲ್ಲಿಯೇ ಈ ನೈಸರ್ಗಿಕ ಮನೆ ಮ’ದ್ದನ್ನು ತಯಾರಿಸಿ ಸೇವನೆ ಮಾಡುವುದು ಅತಿ ಉತ್ತಮವಾದದ್ದು. ಮನೆಮದ್ದನ್ನು ಹೇಗೆ ತಯಾರಿಸಿಕೊಳ್ಳಬಹುದು ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬೇಕು ಅನ್ನೋದನ್ನ ಮುಂದೆ ನೋಡಿ. ಆತ್ಮೀಯ ಓದುಗರೇ ಈ ಮನೆಮದ್ದನ್ನು ಬಳಸಲು ಹಸಿ ಶುಂಠಿ ಬೇಕಾಗುತ್ತದೆ.

ಮೊದಲು ಒಂದು ತುಂಡು ಹಸಿ ಶುಂಠಿಯನ್ನು ಶುದ್ಧವಾದ ನೀರಿನಿಂದ ತೊಳೆದು ನಂತರ ಶುಂಠಿಯನ್ನು ಜಜ್ಜಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸಲ್ಪ ನೀರನ್ನು ಹಾಕಿ ಚನ್ನಾಗಿ ಕುದಿಸಿ. ಕುದಿಸಿದ ನೀರನ್ನು ಸೋಸಿಕೊಂಡು ಒಂದು ಗ್ಲಾಸ್ ನಲ್ಲಿ ಹಾಕಿಕೊಳ್ಳಿ ನಂತರ ಉಗುರು ಬೆಚ್ಚಗೆ ಇರುವ ಸಂದರ್ಭದಲ್ಲಿ ಸೇವನೆ ಮಾಡಿ.

ಒಂದು ವೇಳೆ ಹಾಗೆ ಸೇವನೆ ಮಾಡಲು ಆಗದೆ ಇದ್ರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರಸಿ ಕೂಡ ಸೇವನೆ ಮಾಡಿಕೊಳ್ಳಬಹುದು. ಈ ಮನೆಮದ್ದು ಹೊಟ್ಟೆಯನ್ನು ಕ್ಲಿನ್ ಮಾಡುವಂತೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ದೆ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *