ಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಈ ಬೇಸಿಗೆಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ಅ’ಗ್ನಿ ಟೀ.

ಈ ಬೇಸಿಗೆಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ಅ’ಗ್ನಿ ಟೀ. ಬೇಸಿಗೆಯ ಕಾಲದಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟ. ತಾಪಮಾನವು ಹೆಚ್ಚಾಗುವುದರೊಂದಿಗೆ, ಬೇಸಿಗೆಯ ಶಾಖವನ್ನು ದೂರವಿರಿಸಲು ಆಹಾರ ಮತ್ತು ಫಿಟ್ನೆಸ್ ದಿನಚರಿಯಲ್ಲಿ ಕೆಲವು ಕಾಲೋಚಿತ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ.

ಹಾಗೆ ಮಾಡಲು ಹಲವು ಮಾರ್ಗಗಳಿವೆ, ನೀರಿನಾಂಶ ಇರುವ ಆಹಾರಗಳನ್ನು ಸೇವಿಸುವುದು, ಹಗುರವಾದ ಆಹಾರವನ್ನು ಸೇವಿಸಸುವುದು ಇತ್ಯಾದಿ. ಇದರ ಜೊತೆಗೆ ನೀವು ಸೂಕ್ತವಾದ ಗಿಡಮೂಲಿಕೆ ಔಷಧಿಗಳನ್ನು ಸಹ ಆರಿಸಿಕೊಳ್ಳಬಹುದು. ಆಯುರ್ವೇದದ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವ ಮೂಲಕ ಬೇಸಿಗೆಯ ದಿನಗಳನ್ನು ಕಳೆಯಬಹುದು.

ಅಂತಹ ಒಂದು ಡಿಟಾಕ್ಸ್ ಪಾನೀಯವೇ ಆಯುರ್ವೇದಿಕ್ ಅಗ್ನಿ ಟೀ. ಇದನ್ನ ತಯಾರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ. ಈ ಆಯುರ್ವೇದಿಕ್ ಅಗ್ನಿ ಟೀ ಯ ಪ್ರಯೋಜನಗಳೇನು : ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಅನಗತ್ಯ ಮತ್ತು ಸಂಗ್ರಹವಾದ ವಿಷತ್ವವನ್ನು ತೊಡೆದುಹಾಕಲು ಅವು ಸಹಾಯ ಮಾಡುತ್ತವೆ.

ನಿಮ್ಮ ದೇಹವನ್ನು ಸಮತೋಲನ ರೀತಿಯಲ್ಲಿ ಇಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಕಾಗುವ ಪದಾರ್ಥಗಳು: 1 ಎಳನೀರು, ಕೆಂಪುಮೆಣಸು -½, 1 ಇಂಚು ಶುಂಠಿ, 1-2 ಚಮಚ – ಕಲ್ಲು ಉಪ್ಪು, 2 ಚಮಚ – ಬೆಲ್ಲ.

ತಯಾರಿಸುವ ವಿಧಾನ: ೧. ಮೇಲಿನ ಎಲ್ಲಾ ಪದಾರ್ಥಗಳನ್ನು 20 ನಿಮಿಷಗಳ ಕಾಲ ಕುದಿಸಿ. ೨. ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆ ರಸವನ್ನು ಹಿಂಡಿ (ನಿಂಬೆ ರಸವನ್ನು ಕುದಿಸಬೇಡಿ). ೩. ಪಾನೀಯವನ್ನು ಥರ್ಮೋಸ್ನಲ್ಲಿ ಹಾಕಿಡಿ. ಇದರಿಂದ ಅದು ಬೆಚ್ಚಗಿರುತ್ತದೆ ಮತ್ತು ದಿನವಿಡೀ ಸಿಪ್ ಮಾಡಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

Leave a Reply

Your email address will not be published. Required fields are marked *