ಖಾಲಿ ಹೊಟ್ಟೆಗೆ ಚಹಾ ಸೇವಿಸುವುದರಿಂದಾಗುವ ಪರಿಣಾಮ ತಿಳಿದರೆ ನೀವು ಹೆದರುತ್ತೀರ.
ಖಾಲಿ ಹೊಟ್ಟೆಗೆ ಚಹಾ ಸೇವಿಸುವುದರಿಂದಾಗುವ ಪರಿಣಾಮಗಳು. ಹೆಚ್ಚಿನ ವ್ಯಕ್ತಿಗಳು ತಮ್ಮ ದಿನವನ್ನು ಖಾಲಿ ಹೊಟ್ಟೆಗೆ ಚಹಾ ಕುಡಿಯುವುದರೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ವಿಷಯವು ಅನೇಕ ಸಂಶೋಧನೆಗಳಲ್ಲಿ ಬಹಿರಂಗಗೊಂಡಿದೆ.
ಖಾಲಿ ಹೊಟ್ಟೆಗೆ ಚಹಾ ಸೇವಿಸಿದರೆ, ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ಹೊಟ್ಟೆ ನೋವುಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಖಾಲಿ ಹೊಟ್ಟೆಯ ಚಹಾದೊಂದಿಗೆ ನಿಮ್ಮ ದಿನವನ್ನು ಆರಂಭಿಸಬೇಡಿ. ಇದರಿಂದಾಗುವ ಪರಿಣಾಮಗಳು:
ಚಹಾದಲ್ಲಿ ಥಿಯೋಫಿಲಾಯನ್ ಹೆಸರಿನ ರಸಾಯನ ಇರುತ್ತದೆ, ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆ ಚಹಾ ಸೇವನೆಯಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ. ಬೆಳಿಗ್ಗೆ ಮೊದಲು ಚಹಾ ಕುಡಿಯುವುದರಿಂದ ಅದು ಇತರೆ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ.
ನಿಮ್ಮ ದಿನವನ್ನು ಸಾದಾ ನೀರು ಸೇವನೆಯಿಂದ ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುವಿರಿ. ಆರೋಗ್ಯಕರ ಬೆಳಗ್ಗೆಯಿಂದ ನಿಮ್ಮ ದಿನವನ್ನು ಆರಂಭಿಸಿ. ಬೆಳಿಗ್ಗೆ ಬಿಸಿ ಕಪ್ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದಕ್ಕಿಂತ ಕುಡಿಯುವ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಇದು ನಿಮಗೆ ಪರಿಹಾರ ನೀಡಲಿದೆ.
ಬೆಳಗ್ಗೆ ಎದ್ದಾಗ ನೀರಿಲ್ಲದೆ ಎಂಟು ಗಂಟೆಗಳ ಕಾಲ ಶರೀರ ಡಿ ಹೈಡ್ರೇಟ್ ಆಗಿರುತ್ತದೆ. ಹೀಗಾಗಿ ಬೆಳಗ್ಗೆ ಒಂದು ವೇಳೆ ನೀವು ನೀರಿನ ಬದಲು ಖಾಲಿ ಹೊಟ್ಟೆ ಚಹಾ ಸೇವಿಸಿದರೆ, ಇದರಿಂದ ನಿರ್ಜಲೀಕರಣ ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದ ಖಂಡಗಳಲ್ಲಿ ಸೆಳೆತ ಉಂಟಾಗುತ್ತದೆ.
ಹಲವು ವರ್ಷಗಳ ಈ ರೂಢಿ ತ್ಯಜಿಸುವುದು ಸ್ವಲ್ಪ ಕಷ್ಟ. ಆದರೆ ನಿಶ್ಚಿತವಾಗಿ ಅದು ಅಸಂಭವ ಅಲ್ಲ. ಆದರೆ ಒಂದು ವೇಳೆ ನೀವು ವ್ಯಾಯಾಮ ಮಾಡುವವರಾಗಿದ್ದರೆ, ಒಂದು ಮುಷ್ಠಿ ನಟ್ಸ್ ಹಾಗೂ ಬೀಜ ಅಥವಾ ಹಣ್ಣು ಸೇವಿಸಬಹುದು.