ಬೆಂಗಳೂರು-ಮಂಗಳೂರು-ಕಾರವಾರ ರೈಲು ವೇಳಾಪಟ್ಟಿ ಇಲ್ಲಿದೆ ನೋಡಿ.
ಬೆಂಗಳೂರು- ಮಂಗಳೂರು- ಕಾರವಾರ ರೈಲು ವೇಳಾಪಟ್ಟಿ ಇಲ್ಲಿದೆ ನೋಡಿ. ಈ ಮಾಹಿತಿಯಿಂದ ಎಷ್ಟೋ ಜನರಿಗೆ ಬಹಳ ಸಹಾಯವಾಗುವುದು.
* 06557 ನಂಬರ್ ರೈಲು ಏಪ್ರಿಲ್ 13ರಿಂದ ಮಂಗಳವಾರ, ಗುರುವಾರ, ಭಾನುವಾರ ಸಂಚಾರ ನಡೆಸಲಿದೆ. ಯಶವಂತಪುರದಿಂದ ಬೆಳಗ್ಗೆ 7 ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್ನನ್ನು ಸಂಜೆ 5 ಗಂಟೆಗೆ ತಲುಪಲಿದೆ.
* 06578 ನಂಬರ್ ರೈಲು ಮಂಗಳೂರು ಜಂಕ್ಷನ್ನಿಂದ ಬೆಳಗ್ಗೆ 11.30 ಕ್ಕೆ ಹೊರಡಲಿದೆ. ರಾತ್ರಿ 8.20 ಕ್ಕೆ ಯಶವಂತಪುರ ತಲುಪಲಿದೆ. ಏಪ್ರಿಲ್ 12ರಿಂದ ಬುಧವಾರ, ಶುಕ್ರವಾರ ಮತ್ತು ಸೋಮವಾರ ರೈಲು ಸಂಚಾರ ನಡೆಸಲಿದೆ.
* 06539 ನಂಬರ್ ರೈಲು ಯಶವಂತಪುರದಿಂದ ಬೆಳಗ್ಗೆ 7 ಕ್ಕೆ ಹೊರಟು, ಸಂಜೆ 5 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಏಪ್ರಿಲ್ 17ರಿಂದ ಶನಿವಾರ ಈ ರೈಲು ಸಂಚಾರ ನಡೆಸಲಿದೆ.
* 06540 ನಂಬರ್ ರೈಲು ಮಂಗಳೂರು ಜಂಕ್ಷನ್ನಿಂದ ಬೆಳಗ್ಗೆ 9.15 ಕ್ಕೆ ಹೊರಡಲಿದ್ದು, ರಾತ್ರಿ 8.05ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಏಪ್ರಿಲ್ 18ರಿಂದ ಭಾನುವಾರ ಈ ರೈಲು ಓಡಲಿದೆ.
* 06211 ರೈಲು ಯಶವಂತಪುರದಿಂದ ಬೆಳಗ್ಗೆ 7 ಕ್ಕೆ ಹೊರಡಲಿದ್ದು ಕಾರವಾರಕ್ಕೆ ರಾತ್ರಿ 8.55 ಕ್ಕೆ ತಲುಪಲಿದೆ. ಏಪ್ರಿಲ್ 12 ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ರೈಲು ಸಂಚಾರ ನಡೆಸಲಿದೆ.
* 06212 ರೈಲು ಕಾರವಾರದಿಂದ ಬೆಳಗ್ಗೆ 5.30 ಕ್ಕೆ ಹೊರಡಲಿದ್ದು, ರಾತ್ರಿ 8.20 ಕ್ಕೆ ಯಶವಂತಪುರ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಈ ರೈಲು ಏಪ್ರಿಲ್ 13ರಿಂದ ಸಂಚಾರ ನಡೆಸಲಿದೆ.
ಈ ಮಾಹಿತಿಯುನ್ನು ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಈ ಮಾಹಿತಿಯಿಂದ ಎಷ್ಟೋ ಜನರಿಗೆ ಬಹಳ ಸಹಾಯವಾಗುವುದು. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.