ಕೆಲವರಿಗೆ ಡ’ಯಾಬಿಟಿಸ್ ಬಂದಿದ್ದು ತಿಳಿಯುವುದೇ ಇಲ್ಲ, ನಿಮಗೆ ಶುಗರ್ ಕಾ’ಯಿಲೆ ಇದೆಯಾ ಎಂದು ಇಲ್ಲೇ ಪರೀಕ್ಷಿಸಿ.
ಕೆಲವರಿಗೆ ಡಯಾಬಿಟಿಸ್ ಬಂದಿದ್ದು ತಿಳಿಯುವುದೇ ಇಲ್ಲ, ನಿಮಗೆ ಶುಗರ್ ಕಾ’ಯಿಲೆ ಇದೆಯಾ ಎಂದು ಇಲ್ಲೇ ಪರೀಕ್ಷಿಸಿ. ಇಲ್ಲಿದೆ ಲಕ್ಷಣಗಳು.
ಇತ್ತೀಚಿಗಂತೂ ಸಣ್ಣ ಮಕ್ಕಳಲ್ಲಿಯೂ ಡಯಾಬಿಟಿಸ್ ಕಾಮನ್ ಆಗಿ ಹೋಗಿದೆ. ದೇಹದಲ್ಲಿ ಒಂದು ಬಾರಿ ಡಯಾಬಿಟಿಸ್ ಆಗಿಬಿಟ್ಟರೆ ಮತ್ತೆ ಯಾವುದೂ ನಾರ್ಮಲ್ ಆಗಿ ಇರುವುದಿಲ್ಲ.
ಸಿಹಿ ತಿನ್ನುವ ಹಾಗಿಲ್ಲ, ಸಿಹಿ ಅಷ್ಟೆ ಅಲ್ಲ, ಇಷ್ಟ ಇರೋ ಇನ್ಯಾವುದನ್ನೂ ತಿನ್ನೋಕಾಗಲ್ಲ. ಸಣ್ಣ ಪುಟ್ಟ ಸಮಸ್ಯೆ ಬಂದರೂ ದೇಹ ತಡೆದುಕೊಳ್ಳುವುದಿಲ್ಲ. ಇನ್ನು ಕೆಲವರಿಗೆ ತಮಗೆ ಶುಗರ್ ಅನ್ನೋ ವಿಷಯವೇ ತಿಳಿಯೋದಕ್ಕೆ ಲೇಟ್ ಆಗಿ ಬಿಡುತ್ತದೆ. ಶುಗರ್ ಬರೋಕು ಮುನ್ನ ಏನೆಲ್ಲಾ ಲಕ್ಷಣಗಳು ಕಾಣತ್ತೆ ಗೊತ್ತಾ.
ತುಂಬಾ ಹಸಿವು: ಇನ್ನೇನು ನಿಮಗೆ ಶುಗರ್ ಬರಲಿದೆ ಎಂದಾಗ ಸಿಕ್ಕಾಪಟ್ಟೆ ಹಸಿವಾಗುತ್ತದೆ. ಜೊತೆಗೆ ಸುಸ್ತು ಕೂಡ. ಎಷ್ಟು ತಿಂದರೂ ಸಾಕಾಗುವುದೇ ಇಲ್ಲ. ಮೂತ್ರ ವಿಸರ್ಜನೆ: ರಾತ್ರಿ ಹಗಲು ಎಲ್ಲಾ ಸಮಯದಲ್ಲೂ ಅತಿ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತೀರಿ. ಜೊತೆಗೆ ನೀರು ಬೇಕು ಎಂದು ತುಂಬಾ ಅನಿಸುತ್ತದೆ. ನೀರು ಹೆಚ್ಚು ಕುಡಿದಷ್ಟು ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಮಾಮೂಲಿ.
ಬಾಯಿ ಒಣಗುತ್ತದೆ: ಈಗಿನ್ನು ನೀರು ಕುಡಿದೆ ಆದರೂ ಬಾಯಿ ಒಣಗಿದೆ ಎನಿಸುತ್ತದೆ. ಜೊತೆಗೆ ಮೈ ಕೈ ಕೆರೆತ ಬರುತ್ತದೆ. ಇರಿಟೇಟ್ ಆಗುತ್ತದೆ. ತುಂಬಾ ಮೂತ್ರ ವಿಸರ್ಜನೆಯಿಂದ ದೇಹದಲ್ಲಿ ನೀರಿಲ್ಲದೆ ಈ ಸಮಸ್ಯೆ ಬರುತ್ತದೆ. ಕಣ್ಣಿನ ಸಮಸ್ಯೆ: ಚೆನ್ನಾಗಿಯೇ ಇದ್ದ ನಿಮ್ಮಕಣ್ಣು ಇದ್ದಕ್ಕಿದ್ದಂತೆ ಬ್ಲರ್ ಆಯ್ತು ಎನಿಸುತ್ತದೆ. ಇದು ಕಣ್ಣಿನ ಸಮಸ್ಯೆ ಅಲ್ಲ. ಡಯಾಬಿಟಿಸ್ ನದ್ದು.
ಇದ್ದಕ್ಕಿದ್ದಂತೆ ತೂಕ ಇಳಿಕೆ: ವೇಟ್ ಲಾಸ್ ಮಾಡಬೇಕು ಎಂದು ನೀವು ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಆದರೆ ಶುಗರ್ ಕಾಯಿಲೆ ಬಂದರೆ ಅದಾಗೇ ತೂಕ ಇಳಿಕೆಯಾಗುತ್ತದೆ. ಏಕೆ ಹೀಗಾಯ್ತು ಎಂದು ನಿಮಗೆ ತಿಳಿಯುವುದೇ ಇಲ್ಲ. ಗಾಯ ವಾಸಿಯಾಗುವುದಿಲ್ಲ: ಅಡುಗೆ ಮನೆಯಲ್ಲಿ ನೀವು ಮಾಡಿಕೊಂಡ ಸಣ್ಣ ಕಟ್ ಕೂಡ ಭಯಂಕರ ನೋವು ಕೊಡುತ್ತದೆ.
ಮಾಮೂಲಿ ಸಮಯದಲ್ಲಿ ಒಂದೇ ದಿನದಲ್ಲಿ ವಾಸಿಯಾಗುತ್ತಿದ್ದ ಗಾಯ ಈಗ ಏನು ಮಾಡಿದರೂ ನಿಧಾನವಾಗಿ ವಾಸಿಯಾಗುತ್ತದೆ. ಗಾಯ,ಹುಣ್ಣು ಪೇಪರ್ ಕಟ್ ಕೂಡ ವಾಸಿಯಾಗೋದು ನಿಧಾನ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.