ಫಾರ್ಮ್ ಹೌಸ್ ಜೊತೆಗೆ ನಂದಿತಾ ಪಡೆದಿರುವ ಸಂಭಾವನೆ ಕೇಳಿದರೆ ಬೆಚ್ಚಿಬೀಳ್ತಿರಾ. ಸರಿಗಮಪ ಕಾರ್ಯಕ್ರಮದ ಎಲ್ಲರ ಸಂಭಾವನೆ ರಿವೀಲ್.
ಇಡೀ ದೇಶದಾದ್ಯಂತ ಪ್ರತಿ ಭಾಷೆಗಳಲ್ಲೂ ಹಲವಾರು ಸುದ್ದಿವಾಹಿನಿಗಳ ಜೊತೆಗೆ ಮನರಂಜನೆ ವಾಹಿನಿಗಳು ಇರುತ್ತವೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಹೆಸರಿನಲ್ಲಿ, ವಿವಿಧ ಟಿವಿ ವಾಹಿನಿಗಳಲ್ಲಿ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆರ್ಯಾ ಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಸೇರಿದಂತೆ ಆ ಕಾರ್ಯಕ್ರಮದ ನಿರೂಪಕರು ಹಾಗೂ ತೀರ್ಪುಗಾರರಿಗೆ ಆಕರ್ಷಕ ಪೇಮೆಂಟ್ ಕೂಡ ಇರುತ್ತದೆ.
ನಮ್ಮ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಎಂದರೆ ಅದು ಕಲರ್ಸ್ ಕನ್ನಡದ ಬಿಗ್ ಬಾಸ್, ಜೀ ಕನ್ನಡದ ಸರಿಗಮಪ ಚಾಂಪಿಯನ್ಶಿಪ್, ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಹೀಗೆ ಹತ್ತು ಹಲವಾರು ಜನಪ್ರಿಯ ಕಾರ್ಯಕ್ರಮಗಳು ಒಂದಿಲ್ಲೊಂದು ದಿನ ಬರುತ್ತಲೇ ಇರುತ್ತವೆ. ನಮ್ಮ ಕನ್ನಡ ವಾಹಿನಿಗಳು ಯಾವುದೇ ಹಿಂದಿ ವಾಹಿನಿಗೂ ಕಡಿಮೆ ಇಲ್ಲ. ಕನ್ನಡ ವಾಹಿನಿಗಳು ಕೂಡ ನಿರೂಪಕರಿಗೆ ಸ್ಪರ್ಧಿಗಳಿಗೆ ಹಾಗೂ ತೀರ್ಪುಗಾರರಿಗೆ ಅತ್ಯಾಕರ್ಷಕ ಹಣದ ಪ್ಯಾಕೇಜ್ ನೀಡುತ್ತವೆ.
ಇದೇ ರೀತಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳು, ತೀರ್ಪುಗಾರರು, ನಿರೂಪಕರು ಹಾಗೂ ಮೆಂಟರ್ ಗಳಿಗೆ ದೊರೆಯುವ ಸಂಭಾವನೆ ಎಷ್ಟು ಎಂದು ಇಂದು ನಿಮಗೆ ಮಾಹಿತಿ ಕೊಡುತ್ತೇವೆ. ಸುಮಾರು 10 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸರಿಗಮಪ ರಿಯಾಲಿಟಿ ಶೋ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡುತ್ತಿರುವ ಅನುಶ್ರೀ ಅವರು 110000 ದಿಂದ 120000 ವರೆಗೆ ಪೇಮೆಂಟ್ ಪಡೆಯುತ್ತಾರೆ.
ಈ ಕಾರ್ಯಕ್ರಮದ ಸ್ಪರ್ಧಿಗಳಿಗೂ ಸಹ ಈ ಬಾರಿ ಅತ್ಯಾಕರ್ಷಕ ಸಂಭಾವನೆಯನ್ನು ನೀಡಲಾಗುತ್ತಿತ್ತು. ಸ್ಪರ್ಧಿಗಳಿಗೆ ಒಂದು ಎಪಿಸೋಡ್ ಗೆ ಒಂದು ಸಾವಿರದಿಂದ ಹಿಡಿದು 7500 ರೂಪಾಯಿಗಳವರೆಗೂ ಅವರ ಪಾಪ್ಯುಲಾರಿಟಿ ಗೆ ತಕ್ಕಂತೆ ಸಂಭಾವನೆಯನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಅಂಕಿತ ಕುಂಡು, ಶ್ರೀಹರ್ಷ ಮತ್ತು ಇನ್ನಿತರರು ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ಮೆಂಟರ್ ಗಳ ವಿಚಾರಕ್ಕೆ ಬರುವುದಾದರೆ ಇಂದು ನಾಗರಾಜ್ ಹಾಗೂ ಲಕ್ಷ್ಮಿ ನಾಗರಾಜ್ ಅವರಿಗೆ ತಲಾ 70 ರಿಂದ 75 ಸಾವಿರ ರೂಪಾಯಿಗಳನ್ನು ಒಂದು ದಿನದ ಶೂಟಿಂಗ್ಗೆ ನೀಡಲಾಗುತ್ತಿದೆ. ಖ್ಯಾತ ಗಾಯಕ ಹೇಮಂತ್ ಅವರಿಗೆ 75000 ಗಳನ್ನು ನೀಡಲಾಗುತ್ತಿದೆ. ಗಾಯಕಿ ಅನುರಾಧಾ ಭಟ್ ಅವರಿಗೆ 70000 ನೀಡಲಾಗುತ್ತದೆ.
ಹಾಗೂ ಖ್ಯಾತ ಗಾಯಕ ಸುಚೇತನ್ ರಂಗಸ್ವಾಮಿ ಅವರಿಗೂ ಸಹ 75 ರಿಂದ 80 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅತಿಹೆಚ್ಚು ಸಂಭಾವನೆಯನ್ನು ಒಂದುದಿನದ ಚಿತ್ರೀಕರಣಕ್ಕೆ ಪಡೆಯುತ್ತಿದ್ದ ಗಾಯಕಿ ನಂದಿತಾ ರವರು ಎಂದು ತಿಳಿದುಬಂದಿದೆ. ಅವರಿಗೆ ಸರಿ ಸುಮಾರು 85 ರಿಂದ 90 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು ಎಂಬ ಮಾಹಿತಿ ದೊರಕಿದೆ.
ಇನ್ನು ತೀರ್ಪುಗಾರರ ವಿಚಾರಕ್ಕೆ ಬರುವುದಾದರೆ ಆಸ್ಕರ್ ವಿಜೇತ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಒಂದು ದಿನದ ಶೂಟಿಂಗ್ಗೆ 160000 ರೂಪಾಯಿಗಳನ್ನು ನೀಡಲಾಗುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ 175000 ರೂಪಾಯಿಗಳನ್ನು ನೀಡಲಾಗುತ್ತಿದೆ. ಹಾಗೂ ಕಾರ್ಯಕ್ರಮದ ಮಹಾ ಗುರುಗಳೆಂದು ಖ್ಯಾತರಾಗಿರುವ ನಾದಬ್ರಹ್ಮ ಹಂಸಲೇಖ ಅವರಿಗೆ 250000 ರೂಪಾಯಿಗಳ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರಕಿದೆ.
ಮೂಲಗಳ ಪ್ರಕಾರ ಈ ಬಾರಿಯ ಸರಿಗಮಪ ಕಾರ್ಯಕ್ರಮವು ಅತಿ ಹೆಚ್ಚು ಬಜೆಟ್ ನಲ್ಲಿ ತಯಾರಾಗಿತ್ತು. ಕೇವಲ ತೀರ್ಪುಗಾರರಿಗೆ ಅಷ್ಟೇ ಅಲ್ಲದೆ ಅಲ್ಲಿರುವ ಜ್ಯೂರಿ ಗಳಿಗೂ ಸರಿಸುಮಾರು 5 ಸಾವಿರದಿಂದ 15 ಸಾವಿರ ರೂಪಾಯಿವರೆಗೂ ಒಂದು ದಿನದ ಚಿತ್ರೀಕರಣಕ್ಕೆ ಸಂಭಾವನೆ ನೀಡಲಾಗುತ್ತಿತ್ತು ಎಂಬ ಮಾಹಿತಿ ದೊರಕಿದೆ. ಇಷ್ಟೇ ಅಲ್ಲದೆ ಈ ಬಾರಿ ಎಲ್ಲ ತೀರ್ಪುಗಾರರಿಗೆ ನಿರೂಪಕರಿಗೆ ಗಾಯಕರಿಗೆ ಹಾಗೂ ಮೆಂಟರ್ ಗಳಿಗೆ ಪ್ರತ್ಯೇಕ ಡಿಸೈನರುಗಳು ಪ್ರತ್ಯೇಕ ಜ್ಯುವೆಲ್ಲರಿ ಡಿಸೈನರ್ ಗಳು ಹಾಗೂ ಕ್ಯಾರವ್ಯಾನ್ ಗಳನ್ನು ನೀಡಲಾಗಿತ್ತು ಎಂಬ ಮಾಹಿತಿ ದೊರಕಿದೆ.
ಮೊದಮೊದಲು ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸರಿಗಮಪ ಶೋ ನಂತರ ಮೊದಲು ನಡೆಯುತ್ತಿದ್ದ ಸ್ಥಳ ಅಂದರೆ ಅಬ್ಬಯ್ಯ ನಾಯ್ಡು ಸ್ಟುಡಿಯೋ ಗೆ ಸ್ಥಳಾಂತರವಾಯಿತು ಎಂಬ ಮಾಹಿತಿ ದೊರಕಿದೆ. ಕೊಟ್ಟರೆ ಒಂದು ಅಭೂತಪೂರ್ವ ರಿಯಾಲಿಟಿ ಶೋ ಖ್ಯಾತ ಗಾಯಕಿ ನಂದಿತಾ ಅವರ ತಂಡದ ಗೆಲುವಿನ ಮೂಲಕ ಮುಕ್ತಾಯಗೊಂಡಿದೆ.
ವಿಜೇತರಾದ ಮೊದಲ ತಂಡಕ್ಕೆ ಅಶ್ವಸೂರ್ಯ ಸಂಸ್ಥೆಯಿಂದ 30 ಲಕ್ಷ ರೂಪಾಯಿ ಬೆಲೆಬಾಳುವ ಫಾರ್ಮ್ ಹೌಸ್ ಅನ್ನು ಮದ್ದೂರಿನ ಬಳಿ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ದ್ವಿತೀಯ ಸ್ಥಾನ ಗಳಿಸಿದ ಅನುರಾಧ ಭಟ್ ಅವರ ತಂಡಕ್ಕೆ 20 ಲಕ್ಷ ರೂಪಾಯಿ ನಗದು ದೊರಕಿದೆ. ಹಾಗೂ ಕಾರ್ಯಕ್ರಮದ ಗಾಯಕರಾದ ಶ್ರೀ ಹರ್ಷ ಅವರಿಗೆ ವಿಶೇಷ ಬಹುಮಾನ ದೊರೆತಿದ್ದು ಅವರಿಗೆ ಕಾರನ್ನು ನೀಡಲಾಗಿದೆ. ಹಾಗೂ ಎಂಟರ್ಟೈನರ್ ಆಫ್ ದ ಶೋ ಅನ್ನು ಕಂಬದ ರಂಗಯ್ಯ ಅವರಿಗೆ ನೀಡಲಾಗಿದೆ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ. ಮತ್ತಷ್ಟು ಮಾಹಿತಿಗೆ ನೀವು ಎಂದಿನಂತೆ ಸುದ್ದಿ ಗುರು ವೆಬ್ ಸೈಟನ್ನು ಹಾಗೂ ಕರ್ನಾಟಕದ ಖ’ತರ್ನಾಕ್ ಮಂದಿ ಪುಟವನ್ನು ಫಾಲೋ ಮಾಡಿ.