Featuredಸಿನಿಮಾ ಮಾಹಿತಿಸುದ್ದಿ

ಮೇಘನಾ ರಾಜ್ ಅವರ ತೀರ್ಪುಗಾರಿಕೆಯ ಭಾರಿ ಸಂಭಾವನೆ ರಿವೀಲ್. ಜೀವನವೇ ಸೆಟಲ್ ಆಗುವ ಸಂಭಾವನೆ ಇದು.

ಕನ್ನಡ ಚಲನಚಿತ್ರದಲ್ಲಿ ಖ್ಯಾತ ಹೆಸರು ಮಾಡಿದ ನಟಿ ಎಂದರೆ ಅದು ನಮ್ಮ ನಿಮ್ಮೆಲ್ಲರ ಪ್ರೀತಿಯ ಮೇಘನಾ ಚಿರಂಜೀವಿ ಸರ್ಜಾ ಅವರು. ಜೋಕುಮಾರಸ್ವಾಮಿ ಚಿತ್ರದಲ್ಲಿ ತಮ್ಮ ತಂದೆ ಸುಂದರ್ ರಾಜ್ ಅವರ ಜೊತೆ ಪ್ರಪ್ರಥಮ ಬಾರಿಗೆ ನಟಿಸಿದ ಮೇಘನಾರಾಜ್ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಮೇಘನಾರಾಜ್ ಅವರು ತಮ್ಮ ನೈಜ ಸೌಂದರ್ಯದಿಂದ ಖ್ಯಾತರಾಗಿದ್ದಾರೆ. ತಮಿಳಿನ ಕೃಷ್ಣಲೀಲೈ ಚಿತ್ರದಲ್ಲಿ ಪ್ರಪ್ರಥಮವಾಗಿ ನಟಿಸಲು ಒಪ್ಪಿಕೊಂಡ ಮೇಘನಾರಾಜ್, ನಂತರ ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಅತಿ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೆ ಮಲಯಾಳಂ ಚಿತ್ರದ ನಟನೆಗೆ ಫಿಲಂ ಫೇರ್ ಅವಾರ್ಡ್ ಗಳು ಕೂಡ ಮಲಯಾಳಂ ಚಿತ್ರರಂಗದಲ್ಲಿ ಆಯ್ಕೆಯಾಗಿದ್ದ ಬಹುಬೇಡಿಕೆಯ ನಟಿ ಮೇಘನಾ ರಾಜ್. ಹಾಗೆಯೇ ಕನ್ನಡದಲ್ಲಿಯೂ ಕೂಡ ಇರುವುದೆಲ್ಲವ ಬಿಟ್ಟು ಚಲನಚಿತ್ರದ ನಟನೆಗೆ ಫಿಲಂಫೇರ್ ಅವಾರ್ಡ್ ಗೆ ನಾಮಿನೇಟ್ ಆಗಿದ್ದ ನಟಿ ನಮ್ಮೆಲ್ಲರ ಪ್ರೀತಿಯ ಮೇಘನಾರಾಜ್.

ಆದರೆ ದುರಂತವೆಂಬಂತೆ ಮೇಘನಾ ಕೆಲ ತಿಂಗಳುಗಳ ಹಿಂದೆ ಖ್ಯಾತ ನಟ ಹಾಗೂ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಅವರ ಇಡೀ ಕುಟುಂಬ ಮೈದುನ ಎಲ್ಲರ ಬೆಂಬಲದಿಂದ ಅವರು ಮತ್ತೊಮ್ಮೆ ಎದ್ದುನಿಂತರು. ಅಷ್ಟೇ ಅಲ್ಲದೆ ಈಗ ಕೆಲವು ಜಾಹೀರಾತುಗಳಲ್ಲಿ ಹಾಗೂ ಮುಂಬರುವ ಚಿತ್ರಗಳಲ್ಲಿಯೂ ನಟಿಸುವ ಸೂಚನೆಗಳು ಕಾಣುತ್ತಿವೆ.

ಇತ್ತೀಚೆಗೆ ಕಲರ್ಸ್ ಕನ್ನಡದ ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಬಂದಿರುವ ಮೇಘನಾ ರಾಜ್ ಅವರು ಅತ್ಯಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಮೇಘನಾ ಅವರಿಗೆ ವಿಶೇಷ ವಸ್ತ್ರವಿನ್ಯಾಸ ಕರನ್ನು ಹಾಗೂ ಆಭರಣ ವಿನ್ಯಾಸ ಕರನ್ನು ನೀಡಲಾಗಿದೆ. ಜೊತೆಗೆ ಅವರಿಗೆ 170000 ದಿಂದ 180000 ವರೆಗೆ ಒಂದು ದಿನದ ಚಿತ್ರೀಕರಣಕ್ಕೆ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರಕಿದೆ.

ಅದೇನೇ ಆಗಲಿ ಪ್ರೀತಿಯ ಪತಿಯ ಅಗಲಿಕೆಯ ನಂತರ ಕಂಗಾಲಾಗಿದ್ದ ಮೇಘನಾರಾಜ್ ಅವರಿಗೆ ಈ ಒಂದು ಕಾರ್ಯಕ್ರಮವು ಒಂದು ರೀತಿಯಲ್ಲಿ ಆಸರೆಯಾಗಿದೆ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಮುದ್ದುಕಂದ ರಾಯನ್ ರಾಜ್ ಸರ್ಜಾ ಆಗಮನದಿಂದ ನನ್ನ ಬದುಕಿಗೆ ಹೊಸ ಅರ್ಥ ಬಂದಿದೆ ಎಂದು ಹೇಳುವ ಮೇಘನಾ ನಾನು ಜೀವನ ನಡೆಸುತ್ತಿರುವುದು ಅವನಿಗಾಗಿ ಎಂದು ಕೂಡ ಹೇಳುತ್ತಾರೆ.

ಇದೇ ತರದ ಮತ್ತಷ್ಟು ಮಾಹಿತಿಗಳಿಗೆ, ವಿಶೇಷ ಸುದ್ದಿಗಳಿಗೆ ಹಾಗೂ ಆಕರ್ಷಕ ನ್ಯೂಸ್ ಅನ್ನು ಪಡೆದುಕೊಳ್ಳಲು ತಪ್ಪದೆ ಸುದ್ದಿ ಗುರು ಪುಟವನ್ನು ಆಗಾಗ ನೋಡುತ್ತಿರಿ. ಹಾಗೆ ಮರೆಯದೆ ಕರ್ನಾಟಕದ ಕ’ತರ್ನಾಕ್ ಮಂದಿ ಪುಟವನ್ನು ಕೂಡ ಫಾಲೋ ಮಾಡಿ.

Leave a Reply

Your email address will not be published. Required fields are marked *