ಝೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರವರ ಸಂಬಳವೆಷ್ಟು ಎಂದು ಬಲ್ಲಿರಾ. ಸಿಕ್ತು ಖಚಿತ ಮಾಹಿತಿ.
ಜಗತ್ತಿನಲ್ಲಿ ಪ್ರತಿಯೊಂದು ಹುದ್ದೆಗೂ ಅದರದೇ ಆದ ಬೆಲೆ, ಸ್ಥಾನಮಾನ ಇದ್ದೇ ಇರುತ್ತದೆ. ಹಾಗೆಯೇ ಮಾಡುವ ಕೆಲಸಕ್ಕೆ ತಕ್ಕಂತೆ ಅದರ ಪ್ರತಿಫಲವಾಗಿ ಸಂಭಾವನೆಯು ದೊರೆಯುತ್ತದೆ. ಆ ಸಂಭಾವನೆಯಿಂದ ಆ ವ್ಯಕ್ತಿಯ ಜೀವನಕ್ಕೆ ಸಹಾಯವಾಗುವಂತಹ ಒಂದು ನಿಯತ್ತಾದ ಬೆಲೆ ದೊರೆತಾಗ ಮಾತ್ರ ಆ ವ್ಯಕ್ತಿಗೆ ತಾನು ಮಾಡುತ್ತಿರುವ ಕೆಲಸದಲ್ಲಿ ಸಮಾಧಾನವಿರುತ್ತದೆ.
ಆದರೆ ಈ ಪ್ರಪಂಚದಲ್ಲಿ ಕೋಟ್ಯಂತರ ಜನರು ತಾವು ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡುವುದಕ್ಕಿಂತ ಕ’ಷ್ಟಪಟ್ಟು ಮಾಡುವವರೇ ಹೆಚ್ಚು. ಅಂತದ್ದರಲ್ಲಿ ತಮಗೆ ಇಷ್ಟವಾದ ಕೆಲಸಗಳನ್ನು ಮಾಡಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಎಷ್ಟೋ ಜನರಿಗೆ ಟಿವಿ ವಾಹಿನಿಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಟಿವಿ ವಾಹಿನಿಗೆ ಸೇರಿಕೊಳ್ಳುವುದು ಹೇಗೆ ಎಂಬ ದಾರಿ ತಿಳಿದಿರುವುದಿಲ್ಲ. ಅಂತೆಯೇ ಸೈಕಲ್ ಹೊಡೆದು ಸೇರಿಕೊಂಡ ಮೇಲೆ ಅಲ್ಲಿನ ಕೆಲಸ ಕಲಿಯುವುದಕ್ಕೂ ಸರಿ ಸುಮಾರು ಐದರಿಂದ ಎಂಟು ತಿಂಗಳುಗಳ ಕಾಲ ಹಿಡಿಯುತ್ತದೆ.
ಹುಣಸೂರಿನಿಂದ ಬಂದ ಸಾಮಾನ್ಯ ಬಾಲಕ ರಾಘವೇಂದ್ರ ಅವರು ನಂತರ ಟಿವಿ ಮಾಧ್ಯಮದಲ್ಲಿ ಹೆಮ್ಮರವಾಗಿ ಬೆಳೆದಿದ್ದು ನಿಮಗೆಲ್ಲಾ ಗೊತ್ತಾಗಿದೆ. ಮೊದಲು ಕಲರ್ಸ್ ಕನ್ನಡ, ಸುವರ್ಣ ವಾಹಿನಿ ಹೀಗೆ ವಿವಿಧ ಚಾನೆಲ್ಗಳಲ್ಲಿ ಕೆಲಸ ಮಾಡಿದ ರಾಘವೇಂದ್ರ ಹುಣಸೂರು ಅವರು, ನಂತರ ನೆಲೆಯೂರಿದ್ದು ಜೀ ಕನ್ನಡ ವಾಹಿನಿಯಲ್ಲಿ. ಸುಮಾರು ಐದಾರು ವರ್ಷಗಳಿಂದ ಝೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರು ಅವರು ಸತತ ಪ್ರಯತ್ನದಿಂದ ವಾಹಿನಿಯನ್ನು ನಂಬರ್ ಒನ್ ಸ್ಥಾನಕ್ಕೆ ತಂದು ಕೂರಿಸಿದ್ದಾರೆ.
ಮಾಡುವ ಒಂದೊಂದು ಕೆಲಸದಲ್ಲಿ ವಿಶೇಷತೆ ಇರಬೇಕು ಎಂದು ಬಯಸುವ ರಾಘವೇಂದ್ರ ಹುಣಸೂರು ಅವರು ಪ್ರತಿಯೊಂದು ಕಾರ್ಯಕ್ರಮದ ರೂಪುರೇಷಗಳನ್ನು ತಾವೇ ಹಾಕುತ್ತಾರೆ. ಅಷ್ಟೇ ಅಲ್ಲದೆ ಕಾರ್ಯಕ್ರಮದ ಪ್ರತಿ ಹಂತದಲ್ಲಿಯೂ ಆ ಕಾರ್ಯಕ್ರಮದ ತಂಡದ ಜೊತೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತಾರೆ. ಇಷ್ಟೆಲ್ಲಾ ಶ್ರಮ ವಹಿಸುವ ಹಾಗೂ ಒಂದು ದೊಡ್ಡ ವಾಹಿನಿಯನ್ನು ಮುನ್ನಡೆಸುವ ಜವಾಬ್ದಾರಿ ವಾಹಿನಿಯ ಬಿಸಿನೆಸ್ ಹೆಡ್ ಅವರ ತಲೆಯ ಮೇಲೆ ಇರುತ್ತದೆ.
ಪ್ರತಿದಿನವೂ ಕೆಲಸ ಮಾಡುವ ಎಲ್ಲ ವಾಹಿನಿಯ ಕೆಲಸಗಾರರಿಗೂ ಅಷ್ಟೇ ಮಾ’ನಸಿಕ ಒ’ತ್ತಡ ಇದ್ದೇ ಇರುತ್ತದೆ. ಆದರೆ ವಾಹಿನಿಯ ಬಿಜಿನೆಸ್ ಹೆಡ್ ಎಲ್ಲರಿಗಿಂತಲೂ ಹೆಚ್ಚಿನ ಒ’ತ್ತಡವನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ ಇಷ್ಟು ದೊಡ್ಡ ಹುದ್ದೆಗೆ ದೊರೆಯುವ ಸಂಬಳವೆಷ್ಟು ಎಂಬ ಕುತೂಹಲ ಖಂಡಿತವಾಗಿಯೂ ನಿಮಗೆ ಇದ್ದೇ ಇರುತ್ತದೆ.
ಹೌದು, ಟಿವಿ ವಾಹಿನಿಗಳು ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ನಡೆಯುತ್ತಿರುತ್ತವೆ. ಪ್ರತಿಯೊಂದು ರಿಯಾಲಿಟಿ ಶೋ, ಪ್ರತಿಯೊಂದು ಧಾರವಾಹಿ ಲಕ್ಷ ಹಾಗೂ ಕೋಟಿಗಳ ಬಜೆಟ್ನಲ್ಲಿ ನಡೆಯುತ್ತದೆ. ಇದೆಲ್ಲದರ ಸೂತ್ರಧಾರರ ಆಗಿರುವ ವಾಹಿನಿಯ ಬಿಸಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರು ರವರಿಗೆ ತಿಂಗಳಿಗೆ 7.30 ಲಕ್ಷ ರೂಪಾಯಿ ಸಂಬಳ ದೊರೆಯುತ್ತದೆ ಎಂಬ ಮಾಹಿತಿ ಹೊರಬಂದಿದೆ.
ತಿಂಗಳಿಗೆ 7:30 ಲಕ್ಷ ರೂಪಾಯಿ ಎಂದು ಅಂದಾಜಿಸಿದ್ರೆ ವರ್ಷಕ್ಕೆ 90 ಲಕ್ಷ ರೂಪಾಯಿಗಳು ಆಗುತ್ತವೆ. ಅದೇನೇ ಇರಲಿ ಒಂದು ಅತ್ಯುನ್ನತ ಕಾರ್ಯಕ್ರಮ ಮಾಡಲು ವಾಹಿನಿಯ ಎಲ್ಲ ಕೆಲಸಗಾರರ ಮೇಲು ಅಷ್ಟೇ ಮಾ’ನಸಿಕ ಒತ್ತ’ಡ ಇದ್ದೇ ಇರುತ್ತದೆ. ರಾಘವೇಂದ್ರ ಹುಣಸೂರ್ ಅವರವರಿಗೆ ಮತ್ತೊಮ್ಮೆ ಅಭಿನಂದಿಸುತ್ತ ಅವರ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಬರಲಿ ಎಂದು ಹಾರೈಸೋಣ.
ಇದೇ ತರದ ಮತ್ತಷ್ಟು ಆಕರ್ಷಕ ಸುದ್ದಿಗಳಿಗೆ ನಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳನ್ನು ಫಾಲೋ ಮಾಡಿ. ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.