Featuredರಾಜ್ಯ ಸುದ್ದಿಸಿನಿಮಾ ಮಾಹಿತಿಸುದ್ದಿ

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಸಂಪೂರ್ಣ ಕಾನ್ಸೆಪ್ಟ್ ಚೇಂಜ್. ಹೊರಬಿತ್ತು ಅಧಿಕೃತ ಮಾಹಿತಿ. ಬಿಗ್ ಬಜೆಟ್ ಎಷ್ಟು ನೋಡಿ.

ಭಾರತೀಯ ಕಿರುತೆರೆ ರಂಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಟಿವಿ ಕಾರ್ಯಕ್ರಮವೆಂದರೆ ಅದು ಬಿಗ್ ಬಾಸ್. ಮೊದಮೊದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲಭಾಷೆಯ ವಾಹಿನಿಗಳಲ್ಲಿ ನಡೆಯುತ್ತಿದ್ದ ಬಿಗ್ಬಾಸ್ ಕಾರ್ಯಕ್ರಮವನ್ನು ಭಾರತಕ್ಕೆ ತಂದಿದ್ದು ವಾಯಾಕಾಂ 18 ಸಂಸ್ಥೆ. ಈ ಬಿಗ್ ಬಾಸ್ ಕಾರ್ಯಕ್ರಮವು ಮೊದಲು ಶುರುವಾಗಿದ್ದು ಹಿಂದಿಯ ಕಲರ್ಸ್ ವಾಹಿನಿಯಲ್ಲಿ.

ಈ ಒಂದು ಟಿವಿ ಕಾರ್ಯಕ್ರಮದಲ್ಲಿ 20ರಿಂದ 30 ಕ್ಯಾತ ಸೆಲೆಬ್ರಿಟಿಗಳು ಈ ಮನೆಯೊಳಗೆ 98 ದಿನ ಇರುತ್ತಾರೆ. ಅವರು ನೈಜತೆಯ ಅನಾವರಣ ಒಂದು ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತದೆ. ಅಷ್ಟೇ ಅಲ್ಲದೆ ತೆರೆಯ ಮುಂದೆ ತನ್ನ ನೆಚ್ಚಿನ ನಟ ಹೇಗಿರುತ್ತಾನೆ ಎಂದು ನೋಡಿರುವ ಸಾಮಾನ್ಯ ಜನತೆಗೆ ತೆರೆಯ ಹಿಂದೆ ಅವರ ನೆಚ್ಚಿನ ನಟ ಯಾವ ರೀತಿ ವರ್ತಿಸುತ್ತಾನೆ ಎಂಬ ನೈಜತೆಯ ಅನಾವರಣ ಆಗುತ್ತದೆ.

ಹಿಂದಿಯಲ್ಲಿ ಈಗಾಗಲೇ 15 ಕಂತುಗಳನ್ನು ಪೂರ್ಣಗೊಳಿಸಿರುವ ಬಿಗ್ಬಾಸ್ ಕಾರ್ಯಕ್ರಮವು 16ನೇ ಕಂತಿನತ್ತ ದಾಪುಗಾಲಿನಲ್ಲಿ ನಡೆಯುತ್ತಿದೆ. ಹಿಂದಿಯಲ್ಲಿ ಈ ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಾರೆ. ಇನ್ನು ನಮ್ಮ ಕನ್ನಡದ ವಿಚಾರಕ್ಕೆ ಬರುವುದಾದರೆ ಮೊದಲಿನಿಂದಲೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆದರೆ ನಡುವೆ ಒಮ್ಮೆ ಮಾತ್ರ ಅದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಯಿತು.

ನಂತರ ಮತ್ತೊಮ್ಮೆ ಅದು ಕಲರ್ಸ್ ಕನ್ನಡ ವಾಹಿನಿಗೆ ಮರಳಿ ಅಂದಿನಿಂದ ಇಂದಿನವರೆಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸತತವಾಗಿ ಈ ಕಾರ್ಯಕ್ರಮವನ್ನು ಕನ್ನಡದ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾದ ಕರ್ನಾಟಕದ ಬಾದ್ಶಾ ಕಿಚ್ಚ ಸುದೀಪ್ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಬರೋಬ್ಬರಿ 20 ಕೋಟಿ ಸಂಭವನೆಯನ್ನು ಈ ಕಾರ್ಯಕ್ರಮಕ್ಕೆ ಪಡೆಯುತ್ತಾರೆ ಎಂಬ ಖಚಿತ ಮಾಹಿತಿ ದೊರಕಿದೆ.

ಹಾಗಿದ್ದ ಮೇಲೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಏನೇನು ವಿಶೇಷತೆ ಇರಲಿದೆ ಎಂಬ ಒಂದು ಸಣ್ಣ ಝಲಕ್ ಅನ್ನು ನಾವು ನಿಮಗೆ ಇಂದು ನೀಡುತ್ತಿದ್ದೇವೆ. ಹೌದು ಪ್ರತಿ ಬಾರಿಯಂತೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವು ಸಾಮಾನ್ಯವಾಗಿರುವುದಿಲ್ಲ. ಹೊಸ ಹೊಸ ವಿಶೇಷತೆಗಳೊಂದಿಗೆ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮವು, ಒಂದು ಹೊಸ ಕಾನ್ಸೆಪ್ಟ್ ಜೊತೆಗೆ ಹೊರಬರುತ್ತಿದೆ. ಆ ಕಾನ್ಸೆಪ್ಟ್ ಏನು ಎಂದು ನಾವು ಇಂದು ನಿಮಗೆ ತಿಳಿಸುತ್ತೇವೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವು ಸ್ವರ್ಗ ಮತ್ತು ನರಕ ಎಂಬ ಎರಡು ಕಾನ್ಸೆಪ್ಟ್ ಗಳ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತಷ್ಟು ಮನರಂಜನೆ ನೀಡಲು ಭವ್ಯವಾದ ಸೆಟ್ ತಯಾರಾಗುತ್ತಿದೆ. ಈ ಒಂದು ಕಾನ್ಸೆಪ್ಟ್ ನ ಪ್ರಕಾರ ಸ್ಪರ್ಧಿಗಳು ಆ ವಾರದ ಟಾಸ್ಕ್ ಗೆದ್ದರೆ ಸ್ವರ್ಗದಲ್ಲಿ ಇರುತ್ತಾರೆ ಹಾಗೂ ಸೋತ ಸ್ಪರ್ಧಿಗಳು ನರಕದ ಮನೆಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲದೆ ಎಲ್ಲ ಸ್ಪರ್ಧಿಗಳಿಗೂ ಸ್ವರ್ಗ ಮತ್ತು ನರಕದಲ್ಲಿ ಹಾಕುವ ಬಟ್ಟೆಗಳನ್ನು ನೀಡಲಾಗುತ್ತದೆಯಂತೆ. ಅಷ್ಟೇ ಅಲ್ಲದೆ ಹೊಸ ಹೊಸ ಆಕರ್ಷಕ ಟಾಸ್ಕ್ ಗಳನ್ನು ಕೂಡ ಕೊಡಲಾಗುತ್ತದೆ.

ಕೇವಲ ಕಲರ್ಸ್ ಕನ್ನಡ ವಾಹಿನಿ ಅಷ್ಟೇ ಅಲ್ಲದೆ, ಅವರದ್ದೇ ಸಂಸ್ಥೆಯ ವೂಟ್ ಅಪ್ಲಿಕೇಶನ್ ನಲ್ಲಿ ಕೂಡ ಈ ಒಂದು ರಿಯಾಲಿಟಿ ಶೋ ಕಾರ್ಯಕ್ರಮವು ಜನಪ್ರಿಯತೆ ಪಡೆದುಕೊಂಡಿದೆ. ಖ್ಯಾತ ನಟಿ ಪ್ರೇಮಾ, ಬಿಟಿವಿ ನಿರುಪಕಿ ದಿವ್ಯ ವಸಂತ, ಹರಿಪ್ರಿಯ, ಸುಧಾರಾಣಿ, ಅಭಿಜಿತ್, ಖ್ಯಾತ ಹಿನ್ನೆಲೆ ಗಾಯಕಿ ನಂದಿತಾ, ಖ್ಯಾತ ಹಿನ್ನೆಲೆ ಗಾಯಕ ಹೇಮಂತ್, ನಟ ಪ್ರೇಮ್, ಹೀಗೆ ಹತ್ತು ಹಲವಾರು ಹೆಸರುಗಳು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುತ್ತಿರುವ ಸುದ್ದಿ ಬಹಳ ಗಟ್ಟಿಯಾಗಿಯೇ ಬರುತ್ತಿದೆ.

ಏನೇ ಆಗಲಿ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುವ ಈ ಕಾರ್ಯಕ್ರಮವನ್ನು ಪ್ರತಿಬಾರಿಯೂ ವೀಕ್ಷಕರು ತಪ್ಪದೇ ನೋಡುತ್ತಾರೆ. ತನ್ನ ನೆಚ್ಚಿನ ನಟ ನಟಿಯರು ನಿಜಜೀವನದಲ್ಲಿ ಹೇಗಿರುತ್ತಾರೆ ಎಂಬ ವಿಷಯವನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಕೊಟ್ಟರೆ ಒಂದು ಒಳ್ಳೆ ಎಂಟರ್ಟೈನ್ಮೆಂಟ್ ನೊಂದಿಗೆ ಈ ಕಾರ್ಯಕ್ರಮವು ಜನಮಾನಸದಲ್ಲಿ ಉಳಿದಿರುವುದು ವಿಶೇಷ.

Leave a Reply

Your email address will not be published. Required fields are marked *