Featuredರಾಜ್ಯ ಸುದ್ದಿಸಿನಿಮಾ ಮಾಹಿತಿಸುದ್ದಿ

ಬರ್ತಡೆಗೆ ಯಶ್ ಕೊಟ್ರು ಭರ್ಜರಿ ಗಿಫ್ಟ್. ಗಿಫ್ಟ್ ಕಂಡು ಕಣ್ಣೀರಿಟ್ಟ ರಾಧಿಕಾ. ಗಿಫ್ಟ್ ಬೆಲೆ ಎಷ್ಟು ನೋಡಿ.

ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ ರಾಧಿಕಾ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಗಳಿಸಿ ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಎಂದೇ ಖ್ಯಾತರಾದವರು. ತಮ್ಮ ಜೀವನವನ್ನು ಧಾರವಾಹಿಯಿಂದ ಶುರು ಮಾಡಿದವರು. ಕಿರುತೆರೆಯಲ್ಲಿ ಮೊದಲು ಗಮನ ಸೆಳೆದು ನಂತರ ಹಿರಿತೆರೆಗೆ ಬಂದು ಅಲ್ಲಿ ಮಿಂಚಿದ ಅದೆಷ್ಟು ಪ್ರತಿಭೆಗಳಿವೆ.

ಆ ಪೈಕಿ ರಾಧಿಕಾ ಪಂಡಿತ್ ಸಹ ಒಬ್ಬರು. ಅನೇಕ ವರ್ಷಗಳ ಹಿಂದೆ ನಂದಗೋಕುಲ ಎಂಬ ಧಾರಾವಾಹಿಯಲ್ಲಿ ನಟಿಸಿ ಗಮನಸೆಳೆದ ರಾಧಿಕಾ ಪಂಡಿತ್, ಕನ್ನಡ ಚಿತ್ರರಂಗಕ್ಕೆ ಬಂದಿದ್ದು 18ನೇ ಕ್ರಾಸ್ ಎಂಬ ಚಿತ್ರದ ಮೂಲಕ. ಆದರೆ ಮೊದಲು ಬಿಡುಗಡೆಯಾಗಿದ್ದು ಮತ್ತು ಖ್ಯಾತಿ ತಂದುಕೊಟ್ಟಿದ್ದು ಮತ್ತು ಅವರಿಗೆ ಪ್ರಶಸ್ತಿ ಮುಡಿಗೇರಿಸಿದ್ದು ಮೊಗ್ಗಿನ ಮನಸ್ಸು ಚಿತ್ರ.

ನಿರ್ದೇಶಕ ಶಶಾಂಕ್ ಅವರ ಈ ಚಿತ್ರವು ರಾಧಿಕಾಗೆ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಭದ್ರ ಬುನಾದಿ ಹಾಕಿಕೊಟ್ಟಿತೆಂದರೆ ಅಲ್ಲಿಂದ ಮುಂದಿನ ಒಂದು ದಶಕಗಳ ಕಾಲ ರಾಧಿಕಾ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿ ಮಿಂಚಿದರು. ಕೃಷ್ಣನ್ ಲವ್ ಸ್ಟೋರಿ, ಹುಡುಗರು, ಅದ್ದೂರಿ, ಕಡ್ಡಿಪುಡಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್. ರಾಧಿಕಾ, ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಯಶ್, ಧ್ರುವ ಸರ್ಜನ್ ಅಂತ ಸ್ಟಾರ್ ನಟರ ಚಿತ್ರಗಳಲ್ಲೂ ತಮ್ಮ ಅಭಿನಯದಿಂದ ಗಮನಸೆಳೆದರು.

ಸೂಕ್ಷ್ಮ ಸಂವೇದನೆಯ ನಟಿ ಎಂದೇ ಹೆಸರಾದ ರಾಧಿಕಾ ಪಂಡಿತ್ ಅವರು ಮೊಗ್ಗಿನ ಮನಸ್ಸು ಚಿತ್ರದ ಅಭಿನಯಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಹಾಗೆ ಬೇರೆ ಸಿನಿಮಾಗಳ ಅಭಿನಯಕ್ಕೆ ಹಲವು ಖಾಸಗಿ ಸಂಘ-ಸಂಸ್ಥೆಗಳ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನು 2016ರಲ್ಲಿ ಮದುವೆಯಾದ ರಾಧಿಕಾ ಅವರು ಎರಡು ಮುದ್ದಿನ ಮಕ್ಕಳ ಜೊತೆಯಲ್ಲಿ ಸುಖವಾದ ಸಾಂಸಾರಿಕ ಜೀವನವನ್ನು ಅನುಭವಿಸುತ್ತಿದ್ದಾರೆ.

ಸದ್ಯಕ್ಕೆ ಫ್ಯಾಮಿಲಿಯ ಕೆಲಸಗಳ ಜೊತೆ ಬ್ಯುಸಿಯಾಗಿರುವ ರಾಧಿಕಾ ಅವರ ಹುಟ್ಟುಹಬ್ಬ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡ ರಾಧಿಕಾ ಪಂಡಿತ್ ಅವರಿಗೆ ಯಶ್ ಅವರು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಅದ್ದೂರಿಯಾಗಿ ಕೆಲವೇ ಜನರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಯಶ್ ಅವರು ರಾಧಿಕಾ ಪಂಡಿತ್ ಅವರಿಗೆ 40 ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಹಾರವನ್ನು ನೀಡಿದ್ದಾರೆ ಎಂಬ ಮಾಹಿತಿ ದೊರಕಿದೆ. ವಿಶೇಷವಾಗಿ ವಿನ್ಯಾಸ ಮಾಡಲಾದ ಬಿಹಾರವನ್ನು ಯಶ್ ಅವರು ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಇದೇ ತರದ ಮತ್ತಷ್ಟು ಮಾಹಿತಿಗೆ ತಪ್ಪದೆ ನಮ್ಮ ಅಧಿಕೃತ ವೆ’ಬ್ಸೈಟ್ ಹಾಗೂ ಫೇಸ್ಬುಕ್ ಖಾತೆಯನ್ನು ಫಾಲೋ ಮಾಡುತ್ತಲೇ ಇರಿ.

Leave a Reply

Your email address will not be published. Required fields are marked *