ಕಲರ್ಸ್ ಕನ್ನಡಕ್ಕೆ ಅತಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿತ್ತು ಈಟಿವಿ ಕನ್ನಡ. ಪರಮೇಶ್ವರ್ ಅವರ ಸಂಬಳವೆಷ್ಟು ನೋಡಿ.

ಒಂದು ಕಾಲದಲ್ಲಿ ಸೂಪರ್ ಹಿಟ್ ಧಾರವಾಹಿಗಳನ್ನು ನೀಡುತ್ತಿದ್ದ ವಾಹಿನಿ ಎಂದರೆ ಅದು ಈಟಿವಿ ಕನ್ನಡ. ನೂರಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದ ಈ ವಾಹಿನಿಯು ಮೂಲತಹ ಹೈದರಾಬಾದ್ ನಲ್ಲಿ ಇದೆ. ರಾಮೋಜಿ ಫಿಲಂ ಸಿಟಿಯಲ್ಲಿ ಈಟಿವಿಯ ಮುಖ್ಯ ಕಚೇರಿಯಿದ್ದು, ಅಲ್ಲಿಂದಲೇ ಎಲ್ಲಾ ವಿವಿಧ ಬ್ರಾಂಚ್ ಗಳ ನಿರ್ವಹಣೆ ನಡೆಯುತ್ತದೆ.

ಆದರೆ 2015ರ ಏಪ್ರಿಲ್ 26ರಂದು ಈ ಟೀವಿ ಕನ್ನಡ ವಾಹಿನಿಯನ್ನು ವಾಯಾಕಾಂ 18 ಸಂಸ್ಥೆಯು ಅಧಿಕೃತವಾಗಿ 508 ಕೋಟಿಗೆ ಖರೀದಿ ಮಾಡಿತ್ತು. ಆಗ ಅಧಿಕೃತವಾಗಿ ಈಟಿವಿಯ ಎಲ್ಲಾ ಧಾರವಾಹಿಗಳು, ಎಲ್ಲಾ ಕಾರ್ಯಕ್ರಮಗಳು ಹಾಗೂ ಎಲ್ಲಾ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳು ಈಟಿವಿಯಿಂದ ಕಲರ್ಸ್ ಕನ್ನಡಕ್ಕೆ ಪಾದಾರ್ಪಣೆ ಗೊಂಡವು. ಆಗ ಕಲರ್ಸ್ ಕನ್ನಡದಲ್ಲಿ ಒಂದೇ ಸಂಬಂಧ ಅದೇ ಅನುಬಂಧ ಎಂಬ ಶೀರ್ಷಿಕೆಯಡಿ ಮೆಗಾ ಕಾರ್ಯಕ್ರಮವನ್ನು ಕೂಡ ಮಾಡಲಾಯಿತು.

ಅದಾದ ನಂತರ ಈ ಟಿವಿಯಲ್ಲಿ ಬರುತ್ತಿದ್ದ ಎಲ್ಲಾ ಧಾರವಾಹಿಗಳು ಕಲರ್ಸ್ ಕನ್ನಡದಲ್ಲಿ ಬರಲಿ ಶುರುವಾದವು. ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ಕುಲವಧು, ಪದ್ಮಾವತಿ, ಅಶ್ವಿನಿ ನಕ್ಷತ್ರ ಹೀಗೆ ನೂರಾರು ಧಾರವಾಹಿಗಳು ಬರಲು ಶುರುವಾದವು. ಕಲರ್ಸ್ ಕನ್ನಡ ವಾಹಿನಿಗೆ ಆಗಿನ ಕಾಲವು ಮುಟ್ಟಿದ್ದೆಲ್ಲಾ ಬಂಗಾರವೇ ಎನ್ನುವಂತೆ ಭಾಸವಾಗಿತ್ತು. ಕಲರ್ಸ್ ಕನ್ನಡದಲ್ಲಿ ಆ ನಂತರ ಶುರುವಾದ ಕಾರ್ಯಕ್ರಮವೆಂದರೆ ಬಿಗ್ ಬಾಸ್.

ಬಿಗ್ ಬಾಸ್ ಮೊದಲ ಕಂತು ಪ್ರಾರಂಭವಾಗುತ್ತಿದ್ದಂತೆ ಅತ್ಯಂತ ಹೆಚ್ಚಿನ ಜನಪ್ರಿಯತೆಗಳಿಸಿ ಕರ್ನಾಟಕದ ನಂಬರ್ ಒನ್ ರಿಯಾಲಿಟಿ ಶೋ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಇದಕ್ಕೆ ಕನ್ನಡದ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್ ಅವರು ನಿರೂಪಕರಾಗಿ ಇಂದಿನವರೆಗೂ ಅವರೇ ನಿರೂಪಣೆಯನ್ನು ನಿಭಾಯಿಸುತ್ತಿದ್ದಾರೆ.

ಅಂದಿನಿಂದ ಇಂದಿನವರೆಗೂ ಈ ಒಂದು ವಾಹಿನಿಯ ಬಿ’ಸಿನೆಸ್ ಹೆ’ಡ್ ಆದಂತಹ ಪರಮೇಶ್ವರ್ ಗುಂಡ್ಕಲ್ ಅವರು ಅತ್ಯುತ್ತಮವಾಗಿ ವಾಹಿನಿಯನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ವಾಹಿನಿಯನ್ನು ನಿರ್ವಹಿಸಲು ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಸಂಬಳವಾಗಿ ಪ್ರತಿ ತಿಂಗಳು ವಾಹಿನಿಯ ಬಿ’ಜಿನೆಸ್ ಹೆ’ಡ್ ಆದಂತಹ ಪರಮೇಶ್ವರ್ ಗುಂಡ್ಕಲ್ ಅವರಿಗೆ ನೀಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ.

ಸದಾ ಉತ್ತಮ ಕಾರ್ಯಕ್ರಮಗಳನ್ನು ಜೊತೆಗೆ ಸಭ್ಯತೆಯನ್ನು ಕಾಯ್ದುಕೊಂಡು ಬಂದಿರುವ ಕಲರ್ಸ್ ಕನ್ನಡ ವಾಹಿನಿಯ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು, ಉತ್ತಮ ಧಾರವಾಹಿಗಳನ್ನು ಸಮಾಜಕ್ಕೆ ಸಂದೇಶ ನೀಡುವ ರೀತಿಯಲ್ಲಿ ನೀಡಲಿ ಎಂಬುದೇ ನಮ್ಮೆಲ್ಲರ ಆಶಯ. ಮತ್ತಷ್ಟು ಮಾಹಿತಿಗೆ ನಮ್ಮ ಅಧಿಕೃತ ವೆಬ್ಸೈಟ್ ಅನ್ನು ಫಾಲೋ ಮಾಡುತ್ತಲೇ ಇರಿ.

Leave a Reply

Your email address will not be published.