ಈ ರೀತಿ ಮಾಡಿದರೆ ಥಟ್ ಅಂತ ನಿದ್ದೆ ಬರುತ್ತೆ.
ನಿದ್ರೆ ಎನ್ನುವುದು ಮಾನವನಿಗೆ ದೇವರು ಕೊಟ್ಟ ವರ. ನಿದ್ರೆ ಬಾರದೇ ಇರುವವರೆಗೆ ಅದರ ಮಹತ್ವವು ತಿಳಿಯುತ್ತದೆ. ಪ್ರತಿದಿನವೂ ನಾವು ಲವಲವಿಕೆಯಿಂದ ನಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕೆಂದರೆ ರಾತ್ರಿಯ ವೇಳೆಯಲ್ಲಿ ಗಾಢವಾಗಿ ನಿದ್ರೆ ಮಾಡಬೇಕು. ರಾತ್ರಿಯ ವೇಳೆಯಲ್ಲಿ ನಮ್ಮ ನಿದ್ರೆಯು ಎಷ್ಟು ಗಾಢವಾಗಿರುತ್ತದೆಯೋ ಹಗಲಿನಲ್ಲಿ ನಮ್ಮ ಕೆಲಸ ಕಾರ್ಯಗಳು ಅಷ್ಟೇ ಚುರುಕಾಗಿ ಸಾಗುತ್ತಿರುತ್ತದೆ. ಈಗಿನ ದಿನಚರಿಯಲ್ಲಿ ಬಹುತೇಕ ಜನರಿಗೆ ನಿದ್ರಾಹೀನತೆ ಕಾಡುತ್ತಿದೆ. ನಿದ್ರಾಹೀನತೆ ಎಂಬ ರೋಗವು ಬೇರೆ ರೋಗಗಳ ಹಾಗೆ ಹೆಚ್ಚು ತೊಂದರೆ ಕೊಡದಿದ್ದರೂ ಇತರ ರೋಗಗಳಿಗಿಂತಲೂ ಒಂದು ರೀತಿಯ ಭೀಕರವಾದ ರೋಗವೇ ಸರಿ.
ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ನಿದ್ರಾಹೀನತೆಯನ್ನು ನಿರ್ಮೂಲನೆ ಮಾಡಿಕೊಳ್ಳಲು ನಿದ್ರೆ ಮಾ’ತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದು ಬಹಳ ಅಪಾಯಕಾರಿ ನಿದ್ರಾಹೀನತೆಯಿಂದ ಮುಕ್ತರಾಗಲು ನಿದ್ರೆ ಮಾ’ತ್ರೆಗಳ ಮೊರೆ ಹೋಗದೆ ಕೆಲವು ನಿಯಮಗಳನ್ನು ಪ್ರತಿನಿತ್ಯ ಪಾಲಿಸಬೇಕು. ನಿದ್ರೆ ಮಾಡುವ ಮುನ್ನ ಎರಡು ಕಿಲೋಮೀಟರ್ ವೇಗವಾಗಿ ನಡೆಯಬೇಕು ದೇಹವನ್ನು ದಂಡಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು. ಯಾವುದೇ ಚಿಂತೆಗಳಿಗೆ ಒಳಗಾಗಬಾರದು. ಮಲಗುವ ಮುನ್ನ ನಿದ್ರೆ ಬರುವಂತಹ ಸಂಗೀತವನ್ನು ಕೇಳಬೇಕು. ನಿದ್ರಿಸುವ ಮುನ್ನ ಒಂದು ಗಂಟೆ ಕಾಲವಾದರೂ ಯಾವುದಾದರೂ ಅರ್ಥಗರ್ಭಿತವಾದ ಪುಸ್ತಕಗಳನ್ನು ಆಳವಾಗಿ ಓದಬೇಕು. ನಿದ್ರಿಸುವ ಮುನ್ನ ಒಂದು ಲೋಟ ಬಿಸಿ ಹಾಲನ್ನು ಕುಡಿಯಬೇಕು. ಈ ನಿಯಮಗಳನ್ನು ಪ್ರತಿದಿನ ಪಾಲಿಸಿದರೆ ನಿದ್ರಾಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಪ್ರತಿಯೊಬ್ಬ ಮಾನವನು ಪ್ರತಿದಿನ ಆರರಿಂದ-ಎಂಟು ಗಂಟೆಗಳ ಕಾಲ ನಿದ್ರಿಸಬೇಕು. ನಿದ್ರಾಹೀನತೆ ಇರುವವರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇಂತಹವರಿಗೆ ಕೋಪವು ಕೂಡ ಹೆಚ್ಚಾಗಿರುತ್ತದೆ. ನಿದ್ರಾಹೀನತೆ ಹೆಚ್ಚಾದಂತೆಲ್ಲ ಮಾನಸಿಕ ಆರೋಗ್ಯವು ಹದಗೆಡಲು ಪ್ರಾರಂಭವಾಗುತ್ತದೆ ಹಾಗೂ ಬಿ ಪಿ ರೋಗವು ಬರುತ್ತದೆ. ಮನಸು ಉಲ್ಲಾಸವನ್ನು ಕಳೆದುಕೊಳ್ಳುತ್ತದೆ, ಜೀರ್ಣಶಕ್ತಿಯು ಕಡಿಮೆಯಾಗುತ್ತದೆ, ಸೋಮಾರಿತನವೂ ಹೆಚ್ಚಾಗುತ್ತದೆ. ಕಾಫಿ, ಟೀ ಹಾಗೂ ಧೂ’ಮಪಾ’ನದಂತಹ ಕೆಟ್ಟ ಚ’ಟಗಳಿಗೆ ಒಳಗಾಗುವಂತಾಗುತ್ತದೆ. ಇವುಗಳ ಪ್ರತಿಫಲವಾಗಿ ಆರೋಗ್ಯವು ಹೆಚ್ಚು ಹದಗೆಡುತ್ತದೆ.
ನಿದ್ರಾಹೀನತೆ ರೋಗವು ನಿರ್ಮೂಲನೆ ಆಗಲು ತರಕಾರಿಗಳನ್ನು, ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಯೋಗಾಸನವನ್ನು, ವ್ಯಾಯಾಮವನ್ನು ತಪ್ಪದೇ ಪ್ರತಿದಿನವೂ ಮಾಡಬೇಕು. ಎಂತಹ ವಿಚಾರಗಳಿಗೇ ಆದರೂ, ಎಂತಹ ಕಷ್ಟಗಳು ಎದುರಾದರೂ, ಯಾವುದಕ್ಕೂ ಹೆಚ್ಚು ಚಿಂತೆಗೆ ಒಳಗಾಗದೆ ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳಬೇಕು. ನಿದ್ರಾಹೀನತೆ ಹೆಚ್ಚಿರುವ ವ್ಯಕ್ತಿಗಳು ಆ’ಧ್ಯಾತ್ಮಿಕ ವಿಚಾರಗಳ ಕಡೆಗೆ ತಮ್ಮ ಒಲವನ್ನು ಹೆಚ್ಚಿಸಿಕೊಳ್ಳಬೇಕು. ಮೊಬೈಲನ್ನು ಚಾರ್ಜ್ ಮಾಡುವುದು ಎಷ್ಟು ಮುಖ್ಯವೋ ಮನುಷ್ಯನ ದೇ’ಹಕ್ಕೆ ನಿದ್ರೆಯು ಕೂಡ ಅಷ್ಟೇ ಮುಖ್ಯ. ಮೊಬೈಲನ್ನು ಚಾರ್ಜ್ ಮಾಡದೇ ಹೋದಲ್ಲಿ ಅದು ತನ್ನ ಕಾರ್ಯಚಟುವಟಿಕೆಗಳನ್ನು ಯಾವ ರೀತಿ ನಿಲ್ಲಿಸುತ್ತದೆಯೋ, ಅದೇ ರೀತಿ ಮನುಷ್ಯನಿಗೆ ನಿದ್ರೆ ಎಂಬುದು ಇಲ್ಲದೆ ಹೋದರೆ ಒಂದು ರೀತಿ ಮಂಕು ಆವರಿಸುತ್ತದೆ. ಯಾವ ಕೆಲಸವನ್ನೂ ಮಾಡದೇ ಸೋಮಾರಿಯಂತೆ ಇರುವ ದೌರ್ಭಾಗ್ಯವು ಕೂಡ ನಿದ್ರಾಹೀನತೆಯಿಂದ ಸಂಭವಿಸುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.