ಮಹಾನಾಯಕ ಧಾರವಾಹಿಯ ಬಗ್ಗೆ ಹೊರಬಿತ್ತು ಶಾ’ಕಿಂಗ್ ಸುದ್ದಿ.
ಕೊರೋನ ದೇಶಕ್ಕೆ ಕಾಲಿಟ್ಟ ಸಂದರ್ಭದಿಂದ, ದೇಶದಾದ್ಯಂತ ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ವಾಹಿನಿಗಳ ಮೇಲೆ ಬಹಳ ದೊಡ್ಡ ಹೊಡೆತ ಬಿದ್ದಿತ್ತು. ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದ್ದರಿಂದ ಚಿತ್ರೀಕರಣ ಮಾಡಬಾರದು ಎಂಬ ಬಹಳ ಕಠಿ’ಣವಾದ ಕಾ’ಯ್ದೆಯು ಜಾರಿಗೆ ಬಂದಿತ್ತು. ಇದೇ ಕಾರಣದಿಂದಾಗಿ ಹಲವಾರು ಚಲನಚಿತ್ರಗಳು, ಹಲವಾರು ಧಾರವಾಹಿಗಳು ಮತ್ತು ಇನ್ನೂ ಹಲವಾರು ಘಟಕಗಳು ತಮ್ಮ ಚಿತ್ರೀಕರಣವನ್ನು ನಿಲ್ಲಿಸಿದ್ದವು.
ಇಂಥ ಸಮಯದಲ್ಲಿ ಮನರಂಜನೆಯ ವಾಹಿನಿಗಳು ಮುನ್ನಡೆಯಬೇಕಾದ್ದರಿಂದ ಬೇರೆ ಭಾಷೆಯ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಅದನ್ನು ವಾಹಿನಿಗಳಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬಂದವು. ಆದರೆ ಇದಕ್ಕೂ ಮುನ್ನ ಚಂದನ ವಾಹಿನಿಯು ರಾಮಾಯಣವನ್ನು ಪ್ರಸಾರ ಮಾಡಿ ಅತಿ ಹೆಚ್ಚು ರೇಟಿಂಗ್ಸ್’ಅನ್ನು ಪಡೆಯಿತು. ಇದನ್ನು ಗಮನಿಸಿದ ವಾಹಿನಿಗಳು ತಮ್ಮ ಹಿಂದಿ ಅಥವಾ ಬೇರೆ ಭಾಷೆಯ ವಾಹಿನಿಗಳಲ್ಲಿ ಈಗಾಗಲೇ ಬಂದಿರುವ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಅದನ್ನು ಪ್ರಸಾರ ಮಾಡುವ ನಿರ್ಧಾರಕ್ಕೆ ಬಂದವು. ಡಬ್ಬಿಂಗ್’ಗೆ ಕರ್ನಾಟಕದಲ್ಲಿ ವಿರೋಧವಿದ್ದರೂ ಹೇಗೋ ಡಬ್ಬಿಂಗ್ ಧಾರವಾಹಿಗಳು ಪ್ರಸಾರವಾಗುವುದಕ್ಕೆ ಶುರುವಾಯಿತು. ಸ್ಟಾರ್ ಸುವರ್ಣ’ದಲ್ಲಿ ಶುರುವಾದ ಮಹಾಭಾರತ ಧಾರವಾಹಿ ಅತ್ಯಂತ ಜನಪ್ರಿಯ ಧಾರವಾಹಿಯಾಯಿತು.
ನಂತರ ಅದೇ ವಾಹಿನಿಯ ರಾಧಾಕೃಷ್ಣ ಧಾರವಾಹಿಯ ಕೂಡ ಅತಿ ಜನಪ್ರಿಯವಾಯಿತು. ಸ್ಟಾರ್-ಸುವರ್ಣ ರೀತಿಯಲ್ಲಿ ಕಲರ್ಸ್-ಕನ್ನಡ, ಜೀ-ಕನ್ನಡ ಹಾಗೂ ಹೊಸ ದಂಗಲ್-ಕನ್ನಡ ಚಾನೆಲ್ಗಳು ಈಗ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಲು ಮುಂದಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೇ ಸಮಯದಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಜೀ-ಕನ್ನಡ ವಾಹಿನಿಯ ಮಹಾನಾಯಕ ಧಾರಾವಾಹಿ. ಇತ್ತೀಚೆಗೆ ಎಲ್ಲ ವಾಹಿನಿಗಳನ್ನು ಒಂದು ತೂಕಕ್ಕೆ ಹಾಕಿದಾಗ ಮತ್ತೊಂದು ತೂಕಕ್ಕೆ ಜೀ-ಕನ್ನಡ ವಾಹಿನಿಯ ಬರುತ್ತದೆ. ತನ್ನ ಉತ್ತಮ ಕಾರ್ಯಕ್ರಮಗಳಿಂದ ಹಾಗೂ ಉತ್ತಮ ಕಾನ್ಸೆಪ್ಟ್ ಗಳಿಂದ ಚಾನಲ್’ನ ಹಿರಿಮೆ ದಿನೇ ದಿನೇ ಉತ್ತುಂಗಕೇರುತ್ತಿದೆ.
ಇಂತಹ ಸಮಯದಲ್ಲಿ ಜೀ ವಾಹಿನಿಯು ತನ್ನ ಮತ್ತೊಂದು ಹಿಟ್ ಶೋ ಆದಂತಹ ಮಹಾನಾಯಕ ಧಾರವಾಹಿಯನ್ನು ಕನ್ನಡದ ಅವತರಣಿಕೆಗೆ ತಂದಿತು. ಪ್ರಾರಂಭದಲ್ಲಿ ಒಳ್ಳೆಯ ರೇಟಿಂಗ್ ಬರದೇ ಇದ್ದರೂ ನಂತರ ಸ್ವಲ್ಪಸ್ವಲ್ಪವೇ ನಿಧಾನವಾಗಿ ಪ್ರಖ್ಯಾತಿ ಪಡೆಯಲು ಶುರುವಾಯಿತು. ಆ ಪ್ರಖ್ಯಾತಿಯು ಎಷ್ಟರ ಮಟ್ಟಿಗೆ ಹೋಯಿತೆಂದರೆ ಜೈ ಭೀಮ್ ಅಂದರೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಪೋಸ್ಟರ್’ಗೆ ಕ್ಷೀರಾಭಿಷೇಕ ಮಾಡುವಷ್ಟು. ಕರ್ನಾಟಕದ ಮನೆಮನೆಗಳಲ್ಲೂ ಹೆಸರು ಮಾಡಿರುವ ಈ ಧಾರವಾಹಿ ಇಂದಿಗೂ ಅತ್ಯಂತ ಒಳ್ಳೆಯ ರೇಟಿಂಗ್’ನಿಂದ ಮುನ್ನುಗ್ಗುತ್ತಿದೆ.
ಆದರೆ ಇಂತಹ ಸಮಯದಲ್ಲಿ ರಾಘವೇಂದ್ರ ಹುಣಸೂರು ಅವರು ಒಂದು ಶಾ’ಕಿಂಗ್ ಸ್ಟೇಟಸ್’ಅನ್ನು ತಮ್ಮ ಇನ್ಸ್ಟಾಗ್ರಾಂ’ನಲ್ಲಿ ಹಾಕಿಕೊಂಡಿದ್ದಾರೆ. “ನನಗೆ ಹೊತ್ತಲ್ಲದ ಹೊತ್ತಿನಲ್ಲಿ ಮೆಸೇಜ್’ಗಳು ಹಾಗೂ ಕಾಲ್ಸ್’ಗಳು ಮಹಾನಾಯಕ ಧಾರವಾಹಿಯನ್ನು ನಿಲ್ಲಿಸಿ ಎಂದು ಬರುತ್ತಿವೆ. ಇದು ಸ್ವಲ್ಪ ನಮಗೆ ಹೆ’ದರಿಸುವಂತೆ ಕಂಡರೂ ನಾವು ಈ ತರದ ಹೇ’ಡಿಯ ಕೆಲಸಗಳಿಗೆಲ್ಲ ಕಿವಿಗೊಡುವುದಿಲ್ಲ. ಮಹಾನಾಯಕ ಧಾರವಾಹಿ ಮುನ್ನುಗ್ಗುತ್ತದೆ. ಇದು ನಮ್ಮ ಹೆಮ್ಮೆ ಹಾಗೂ ಇದು ನನಗೆ ವೈಯಕ್ತಿಕವಾಗಿ ಇಷ್ಟವಾದ ಧಾರಾವಾಹಿಯೂ ಕೂಡ. ಯಾರು ಈ ಧಾರಾವಾಹಿಯು ಸಮಾಜಕ್ಕೆ ಒಂದು ಪಿ’ಡುಗು ಎಂದು ಭಾವಿಸುತ್ತೀರೋ ಗಮನವಿಟ್ಟುಕೊಳ್ಳಿ, ವಾಸ್ತವದಲ್ಲಿ ನೀವೇ ಈ ಸಮಾಜಕ್ಕೆ ಒಂದು ಪಿ’ಡುಗು ಬೇಗ ಹುಷಾರಾಗಿ, ಜೈ ಭೀಮ್” ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.