ಬಿಗ್ ಬಾಸ್ ಸೀಸನ್ 8 ಯಾವಾಗ ಗೊತ್ತಾ. ಇಲ್ಲಿದೆ ನಿಖರ ಮಾಹಿತಿ.
ಭಾರತದ ಕಿರುತೆರೆಯಲ್ಲಿ ಅತ್ಯಂತ ಹೆಸರು ಮಾಡಿರುವ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಈ ಬಿಗ್ ಬಾಸ್, ಕನ್ನಡದಲ್ಲಿ ಈಗಾಗಲೇ 7 ಆವೃತ್ತಿಗಳನ್ನು ಮುಗಿಸಿದೆ. ಪ್ರತಿ ಆವೃತ್ತಿಯಲ್ಲೂ ಒಂದಲ್ಲಾ ಒಂದು ವಿಶೇಷತೆಗಳನ್ನು ಅಳವಡಿಸುವ ಕಲರ್ಸ್ ಕನ್ನಡ ವಾಹಿನಿ ಈ ಬಾರಿಯೂ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ. ಪ್ರಪ್ರಥಮವಾಗಿ ಈಟಿವಿ ಕನ್ನಡದಲ್ಲಿ ಶುರುವಾದ ಬಿಗ್ ಬಾಸ್ ಸೀಸನ್ 1 ಆದ ನಂತರದ ವರ್ಷಗಳಲ್ಲಿ ಸ್ಟಾರ್-ಸುವರ್ಣದಲ್ಲಿ ಪ್ರಸಾರವಾಗಿ ಮತ್ತೆ ಕಲರ್ಸ್ ಕನ್ನಡ ವಾಹಿನಿಗೆ ಹಿಂದಿರುಗಿ ಬಂತು. ಮೊದಲನೇ ದಿನ ಮನೆಗೆ ಎಂಟ್ರಿ ಕೊಡುವ 15 ಕಂಟೆಸ್ಟೆಂಟ್’ಗಳು ಯಾರು ಎಂಬ ಕುತೂಹಲ ಇಡೀ ಕರುನಾಡಿಗೆ ಇರುತ್ತಿತ್ತು.
ಮೊದಮೊದಲ ದಿನಗಳಲ್ಲಿ ಜಯರಾಮ್ ಕಾರ್ತಿಕ್, ಅಕುಲ್ ಬಾಲಾಜಿ, ಶ್ವೇತಾ, ಅನುಶ್ರೀ, ಶೃತಿ ಮತ್ತು ಹತ್ತು ಹಲವಾರು ಹೆಸರಾಂತ ಸೆಲೆಬ್ರಿಟಿಗಳು ಈ ರಿಯಾಲಿಟಿ ಶೋಗೆ ಬಂದು ಹೋಗಿದ್ದಾರೆ. ಅಷ್ಟೇ ಅಲ್ಲ, ವಾರದ ಎರಡು ದಿನಗಳಲ್ಲಿ ವಾರದ ಕಥೆ ಕಿಚ್ಚನ ಜೊತೆ ಹಾಗೂ ಸೂಪರ್ ಸಾಟರ್ಡೆ ವಿತ್ ಸುದೀಪ್ ಎಂಬ ಹೆಸರಿನೊಂದಿಗೆ ಹಲವಾರು ಸೀಸನ್’ಗಳಲ್ಲಿ ಹಲವಾರು ಎಪಿಸೋಡ್’ಗಳು ಬಂದಿವೆ. ಪ್ರತಿಯೊಂದು ಎಪಿಸೋಡ್’ನಲ್ಲಿ ವಿಭಿನ್ನತೆಯನ್ನು ಮೆರೆದಿರುವ ಸುದೀಪ್ ಅವರು ಮುಂಬರುವ ಬಿಗ್-ಬಾಸ್ ಸೀಸನ್ ಎಂಟನೇ ಆವೃತ್ತಿಗೂ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಮೊದಲೆಲ್ಲಾ ಪುಣೆಯ ಲೋನಾವಾಲಾದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಶೂಟಿಂಗ್ ನಂತರ ಬಿಡದಿಯ ಇನೋವೆಟಿವ್ ಫಿಲಂಸಿಟಿಗೆ ಸ್ಥಳಾಂತರವಾಯಿತು.
ಇನೋವೆಟಿವ್ ಫಿಲಂಸಿಟಿಯಲ್ಲಿ ಬಿಗ್ ಬಾಸ್ ಮನೆಗಾಗಿ ಪ್ರತ್ಯೇಕ ಜಾಗವನ್ನು ಬಿಟ್ಟುಕೊಟ್ಟ ಫಿಲಂಸಿಟಿ ತಂಡ, ಪ್ರತೀ ಎಪಿಸೋಡ್’ನ ಶೂಟಿಂಗ್’ಗಳ ಸಮಯದಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಿ ಇಂದಿನವರೆಗೂ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಈ ಬಾರಿಯೂ ಆದಷ್ಟು ಬೇಗನೆ ಬಿಗ್ ಬಾಸ್ ಸೀಸನ್ 8 ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾಗಬೇಕಿತ್ತು ಆದರೆ ದೇಶಾದ್ಯಂತ ಹರಡಿರುವ ಕರೋನ ವೈ’ರಸ್’ನಿಂದ ಕೊಂಚ ವಿಳಂಬವಾಗುತ್ತಿವೆ. ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಇದೇ ವರ್ಷದ ಡಿಸೆಂಬರ್ನಲ್ಲಿ ಪ್ರಾರಂಭವಾಗುವ ಎಲ್ಲ ಸಾಧ್ಯತೆಗಳು ಇವೆ.
ಇದಕ್ಕಾಗಿ ಈಗಾಗಲೇ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ ಮತ್ತೊಂದು ಹೊಸ ಮನೆ ಸಿದ್ಧವಾಗುತ್ತಿರುವ ಮಾಹಿತಿಯು ದೊರಕಿದೆ. ಡಿಸೆಂಬರ್ ವೇಳೆಗೆ ಈ ಕೋ’ರೋನ ಸಂಕಷ್ಟವೆಲ್ಲ ಮುಗಿದು ಮತ್ತೊಮ್ಮೆ ಪ್ರತಿವರ್ಷದಂತೆ ಬಿಗ್ ಬಾಸ್ ಸೀಸನ್ 8ರ ಮನರಂಜನೆ ಕನ್ನಡಿಗರಿಗೆ ದೊರೆಯುವುದೇ ಎಂದು ಕಾದು ನೋಡಬೇಕು. ಸಾಕಷ್ಟು ಹೆಸರಾಂತ ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂಬ ಗಾಳಿ ಸುದ್ದಿ ಹರಡಿದೆ, ಆದರೆ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರಿಂದ ಯಾವುದೇ ರೀತಿಯ ಮಾಹಿತಿ ಹೊರಬಿದ್ದಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.