ಲಾಕ್ಡೌನ್ ನಂತರ ಸಲ್ಮಾನ್ ಖಾನ್ ಬಿಗ್ ಬಾಸ್ ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ನೋಡಿ.
ವಿದೇಶದಲ್ಲಿ ಪ್ರಪ್ರಥಮವಾಗಿ ಶುರುವಾದ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮವು ನಿಧಾನವಾಗಿ ಭಾರತಕ್ಕೂ ಕಾಲಿಟ್ಟಿತು. ಮೊದಲನೇದಾಗಿ ಹಿಂದಿ ಕಲರ್ಸ್ ಟಿ.ವಿ.ಯಲ್ಲಿ ಪ್ರಸಾರವಾಗಲು ಶುರುವಾದ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಬಾಲಿವುಡ್ನ ದಿಗ್ಗಜರಾದ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡುವುದಕ್ಕೆ ಪ್ರಾರಂಭ ಮಾಡಿದರು. ಮೊದಲಿಗೆ ಸಂಭಾವನೆಗಳನ್ನು ಕಡಿಮೆ ಪಡೆದುಕೊಳ್ಳುತ್ತಿದ್ದ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಕೆಲವು ವರ್ಷಗಳ ಅಂತರದಲ್ಲಿ ತಮ್ಮ ಸಂಭಾವನೆಯನ್ನು ಬಹಳಷ್ಟು ಹೆಚ್ಚಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಈ ರಿಯಾಲಿಟಿ ಶೋ ಅತ್ಯಂತ ಹೆಚ್ಚು ಹಣವನ್ನು ತನ್ನಲ್ಲಿ ಹೂಡಿಕೆ ಮಾಡಿಕೊಂಡು ಭಾರತದ ಟೆಲಿ ಪರದೆಯಲ್ಲಿ ಬರುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಪ್ರತಿದಿನಕ್ಕೆ ಅಥವಾ ಪ್ರತಿ ವಾರಕ್ಕೆ ನೀಡಲಾಗುತ್ತದೆ. ಸಾಮಾನ್ಯವಾಗಿ ಬಿಗ್ ಬಾಸ್ ಹಿಂದಿ ಕಾರ್ಯಕ್ರಮವು ಪುಣೆಯಲ್ಲಿರುವ ಲೋನಾವಾಲಾದಲ್ಲಿ ಚಿತ್ರೀಕರಣವಾಗುತ್ತದೆ. ಸಲ್ಮಾನ್ ಅವರು ತಮ್ಮದೇ ಆದ ಪ್ರೈವೇಟ್ ಹೆಲಿಕಾಪ್ಟರ್ನಲ್ಲಿ ಬಂದು ಶೂಟಿಂಗ್ನಲ್ಲಿ ಭಾಗವಹಿಸುತ್ತಾರೆ. ಸುಮಾರು 550 ಕ್ಕಿಂತಲೂ ಹೆಚ್ಚು ಸಿಬ್ಬಂದಿ ವರ್ಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಗಲಿರುಳೆನ್ನದೆ ಶ್ರಮವಹಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದವು.
ಕನ್ನಡದಂತೆಯೇ ಬಿಗ್ಬಾಸ್ ಹಿಂದಿ ಕಾರ್ಯಕ್ರಮದಲ್ಲಿಯೂ 98 ದಿನ ಸ್ಪರ್ಧಿಗಳು ಮನೆಯಲ್ಲಿರುತ್ತಾರೆ, ಜೊತೆಗೆ ವಿವಿಧ ಸುಲಭವಾದ ಮತ್ತು ಕಠಿಣವಾದ ಟಾಸ್ಕ್ ಗಳನ್ನು ಪ್ರತಿನಿತ್ಯ ಮಾಡುತ್ತಾ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುತ್ತಾರೆ. ಅವರು ಸಾಮರ್ಥ್ಯದ ಜೊತೆಗೆ ದೈಹಿಕ-ಮಾನಸಿಕ ಸಂವೇ’ದನೆಗಳನ್ನು ಈ ಕಾರ್ಯಕ್ರಮದಲ್ಲಿ ಹೊರಹಾಕುತ್ತಾರೆ. ಅಷ್ಟೇ ಅಲ್ಲದೆ ಅತಿ ಹೆಚ್ಚು ಗಾಸಿ’ಪ್ ಹಾಗೂ ಗಲಾ’ಟೆಗಳು ಇದೇ ಕಾರ್ಯಕ್ರಮದಲ್ಲಿ ಆಗಿರುವುದು ಗಮನಕ್ಕೆ ಬಂದಿದೆ, ಸಿನಿಮಾರಂಗ, ಕ್ರೀಡೆ ಮತ್ತು ಹಲವಾರು ವಿವಿಧ ಕ್ಷೇತ್ರಗಳಲ್ಲಿಯ ಹೆಸರಾಂತ ಕಲಾವಿದರು ಹಾಗೂ ಹೆಸರಾಂತ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ.
ಕೆಲವು ಸ್ಪರ್ಧಿಗಳಿಗೆ, ವಿಜೇತರಿಗೆ ಬಹುಮಾನದ ಹಣಕ್ಕಿಂತ ಹೆಚ್ಚು ಹಣವನ್ನು ಅವರ ಒಂದು ವಾರದ ಕಾರ್ಯಕ್ರಮದ ಭಾಗವಹಿಸುವಿಕೆಗೆ ನೀಡಿರುವ ಉದಾಹರಣೆಗಳು ಸಾಕಷ್ಟಿವೆ. ಒಂದು ದಿನಕ್ಕೆ 25 ಸಾವಿರದಿಂದ ಎರಡು ಲಕ್ಷದವರೆಗೆ ಪಡೆಯುವ ಸ್ಪರ್ಧಿಗಳು ಬಂದು ಹೋಗಿದ್ದಾರೆ. ಬಿಗ್ ಬಾಸ್ ಒಂದು ರಿಯಾಲಿಟಿ ಶೋ ಆಗಿರದೆ ಅಲ್ಲಿನ ಸ್ಪರ್ಧಿಗಳ ನೈಜ ಮುಖವಾಡವನ್ನು ಕಳ’ಚುವ ರಿಯಾಲಿಟಿ ಶೋ ಆಗಿರುವುದರಿಂದ ಇದು ಭಾರತದ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹೆಸರಾಂತ ಗಾಯಕರು, ಹೆಸರಾಂತ ನಟರು, ಉದ್ಯಮಿಗಳು ಹಾಗೂ ಗಾಸಿ’ಪ್ ಗಳಲ್ಲಿ ಭಾಗಿಯಾಗಿರುವ ನಟ-ನಟಿಯರು, ಸ್ವಾಮೀಜಿಗಳು ಹೀಗೆ ಹಲವಾರು ಕ್ಷೇತ್ರದ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಬರುತ್ತಾರೆ.
ಪ್ರತಿವರ್ಷ ಬಿಗ್ ಬಾಸ್ ಸೀಸನ್ ಗೆ ಸಲ್ಮಾನ್ ಖಾನ್ ಅವರು ಕೋಟ್ಯಂತರ ರೂಪಾಯಿಯನ್ನು ಪಡೆದುಕೊಳ್ಳುತ್ತಾರೆ ಅದೇ ರೀತಿಯಲ್ಲಿ ಈ ವರ್ಷ ಬಿಗ್ ಬಾಸ್ ಸೀಸನ್ 14 ಕ್ಕೆ ಸಲ್ಮಾನ್ ಖಾನ್ ಅವರು 450 ಸಂಭಾವನೆಯನ್ನು ಪಡೆಯುತ್ತಾರೆ, ಅಂದರೆ ಒಂದು ದಿನಕ್ಕೆ ಸರಿಸುಮಾರು ಇಪ್ಪತ್ತು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.