ಡಿ-ಬಾಸ್ ರ ಜೈ ಶ್ರೀ ರಾಮ ಹಾಡಿಗೆ ಜಯಕಾರ ಹಾಕಿದ್ದು ಇವರೇ.
ಕನ್ನಡ ಚಿತ್ರರಂಗದ ಹೆಸರಾಂತ ನಟರಲ್ಲಿ ದರ್ಶನ್ ತೂಗುದೀಪ್ ಸಹ ಒಬ್ಬರು. ಡಿ-ಬಾಸ್ ಅಂತಲೆ ಕರುನಾಡಲ್ಲಿ ಫೇಮಸ್ ಆಗಿರುವ ದರ್ಶನ್ ಅವರು ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಫ್ಯಾನ್ ಅಂದ್ರೆ ಅದು ದರ್ಶನ್ ಅವರ ಫ್ಯಾನ್ ಹಾಗೆ ಇರಬೇಕು ಅನ್ನೋ ಮಾತಿದೆ. ಕೇವಲ ಫ್ಯಾನಿಸಂ ಮಾತ್ರವೇ ಅಲ್ಲದೇ ಅವರ ಹುಟ್ಟುಹಬ್ಬದ ಸಂದರ್ಭದಲ್ಲೆಲ್ಲ ಹಲವಾರು ದಾನಧರ್ಮಗಳನ್ನು ಅವರ ಫ್ಯಾನ್ಸ್ ಮಾಡಿದ್ದಾರೆ.
ದರ್ಶನ್ ಅವರ ಫಿಲಂ ರಿಲೀಸ್ ಗೆ ರೆಡಿಯಾಗುತ್ತಿದೆ ಅಂದರೆ ಕರುನಾಡಿನಲ್ಲಿ ಒಂದು ರೀತಿಯ ಹವಾ ಕ್ರಿಯೆಟ್ ಆಗಿರುತ್ತೆ. ಐಷಾರಾಮಿ ಕಾರುಗಳ ಪ್ರಿಯಾ ಆಗಿರುವ ದರ್ಶನ್ ತಮ್ಮ ಕಾರ್ ಕಲೆಕ್ಷನ್’ಗಳನ್ನು ಯಾವಾಗಲೂ ನೋಡುತ್ತಾ, ಓಡಿಸುತ್ತಾ ಖುಷಿಪಡುತ್ತಾರೆ. ಅಷ್ಟೇ ಅಲ್ಲ ಒಂದು ಕೈಯಲ್ಲಿ ನೀಡಿದ ದಾನ ಮತ್ತೊಂದು ಕೈಗೆ ಗೊತ್ತಾಗಬಾರದು ಅನ್ನುವಹಾಗೆ ದರ್ಶನ್ ಅವರು ಗು’ಪ್ತವಾಗಿಯೇ ದಾನಧರ್ಮಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ಬೇರೆಲ್ಲಾ ನಟರಿಗೆ ಹೋಲಿಸಿದಾಗ ದರ್ಶನ್ ಅವರ ಅಭಿಮಾನಿಗಳು ಒಂದು ತೂಕ ಹೆಚ್ಚೇ ಎಂದು ಹೇಳಬಹುದು.
ಈ ವರ್ಷ ದರ್ಶನ್ ಅಭಿನಯದ ರಾಬರ್ಟ್ ಚಿ’ತ್ರವು ತೆರೆಕಾಣುವ ಸಾಧ್ಯತೆಗಳಿವೆ. ಈ ರಾಬರ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು. ಕಿಶೋರ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಅವರೇ ಪ್ರೊಡ್ಯೂಸ್ ಮಾಡಿರುವ ಈ ಚಿತ್ರ ಉಮಾಪತಿ ಚಿತ್ರ ಪ್ರೊಡಕ್ಷನ್’ನಲ್ಲಿ ಹೊರಬರುತ್ತಿದೆ. ಈ ಚಿತ್ರದ ಎಲ್ಲಾ ಹಾಡುಗಳು ಈಗಾಗಲೆ ಪ್ರೇಕ್ಷಕರ ಮನದಲ್ಲಿ ಹುಚ್ಚೆಬ್ಬಿಸಿದೆ. ಹಾಗೆಯೇ ಇದರಲ್ಲಿ ಬಂದಿರುವ ಜೈಶ್ರೀರಾಮ್ ಹಾಡು ಈಗ ಕರ್ನಾಟಕದ ಮನೆಮನೆಗಳಲ್ಲಿ ಎಲ್ಲ ಸಮಾರಂಭಗಳಲ್ಲಿ ಕೇಳಲು ಸಿಗುತ್ತಿದೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ಎಂದು ಶುರುವಾಗುವ ಈ ಹಾಡನ್ನು ಶಂಕರ್ ಮಹದೇವನ್ ಅವರು ಹಾಡಿದ್ದಾರೆ. ಅನಿರುದ್ಧ ಶಾಸ್ತ್ರಿಯವರು ವೋಕಲ್ ಅರೇಂಜ್ಮೆಂಟ್ ಮಾಡಿರುವ ಈ ಹಾಡಿಗೆ ಕನ್ನಡದ ಹೆಸರಾಂತ 20 ಜನ ಮುಂಬರುವ ಗಾಯಕರು ಹಾಡಿದ್ದಾರೆ. ಮಧ್ವೇಶ್ ಭರದ್ವಾಜ್, ಮನೋಜವಂ ಆತ್ರೇಯ, ನಿಖಿಲ್ ಪಾರ್ಥಸಾರಥಿ, ಪೃಥ್ವಿರಾಜ್, ಸಚಿನ್ ಶಿವರುದ್ರಪ್ಪ, ವರುಣ್ ರಾಮಚಂದ್ರ, ಸುಪ್ರೀತ್ ಪಾಲ್ಗುಣ, ಅಶ್ವಿನ್ ಶರ್ಮ, ಗಣೇಶ್ ಕಾರಂತ್, ದಾಮೋದರ್ ನಾಯಕ್, ಮನೋಜ್ ಶರ್ಮ, ಗೋವಿಂದ್, ಸಚಿನ್ ಅರಬಳ್ಳಿ, ಪ್ರತಾಪ ಭಟ್, ಪ್ರಜ್ವಲ್ ಬಿಜಿಯವರು ಈ ಹಾಡನ್ನು ಹಾಡಿದ್ದಾರೆ. ಚಿತ್ರದ ವಿಡಿಯೋವನ್ನು ಸುಧಾಕರ್ ರಾಜ್ ಅವರು ಚಿತ್ರೀಕರಿಸಿದ್ದಾರೆ. ನೂರು ಜನರು ನಟಿಸಿರುವ ಕ್ಲಿಪ್ಸ್’ಗಳಿಗೆ 20 ಜನರು ಧ್ವನಿಯನ್ನು ನೀಡಿದ್ದಾರೆ. ಇದನ್ನು ನೋಡಿದಾಗ ನೂರಾರು ಜನರು ಹೇಳುವಂತೆ ಭಾಸವಾಗುತ್ತದೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯರವರು ಕಂಪೋಸ್ ಮಾಡಿರುವ ಈ ಗೀತೆಗೆ ಇಷ್ಟೊಂದು ಜನ ಸಾ’ಕ್ಷಿಯಾಗಿರುವುದು ಇದೇ ಮೊದಲು ಎನ್ನಬಹುದು. ಅರ್ಜುನ್ ಜನ್ಯರವರು ಹೇಳುವ ಪ್ರಕಾರ ಈ ಹಾಡಿನ ಟ’ಮಟೆ ಶಬ್ದವನ್ನು ರೆಕಾರ್ಡ್ ಮಾಡುವಾಗ ಇಡೀ ಸ್ಟು’ಡಿಯೋದಲ್ಲಿ ಯಾರೂ ನಿಂತುಕೊಳ್ಳಲಾಗದಷ್ಟು ಶಬ್ದವು ಬರುತ್ತಿತ್ತು. ಆದರೂ ಕಲಾವಿದರು ಎ’ದೆಗುಂದದೆ ಅತ್ಯುತ್ತಮವಾಗಿ ನುಡಿಸಿದ್ದರಿಂದ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಇದಕ್ಕೆ ಪ್ರತಿಯೊಬ್ಬರೂ ಕಾರಣ ಎಂದು ಅರ್ಜುನ್ ಜನ್ಯರವರು ಹಾಡಿನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಈ ನೃತ್ಯದಲ್ಲಿನ ಸ್ಟೆಪ್’ಗಳು ಎಲ್ಲೆಡೆ ಫೇಮಸ್ ಆಗಿವೆ. ಈಚೆಗಷ್ಟೇ ರಾಮಜ’ನ್ಮಭೂ’ಮಿಯು ಹಿಂ’ದುಗಳ ಪಾಲಾದ ಸಮಯದಲ್ಲಿ ಈ ಹಾಡು ಎಲ್ಲೆಡೆ ರಾರಾಜಿಸಿತ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.