ಸಿನಿಮಾ ಮಾಹಿತಿಸುದ್ದಿ

ಕಲರ್ಸ್ ಕನ್ನಡದ ಮನೆದೇವ್ರು ಜಾನಕಿ ಈಗ ಎಲ್ಲಿ ಹೋದ್ರು. ಏನು ಮಾಡ್ತಿದ್ದಾರೆ ಗೊತ್ತಾ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮನೆದೇವರು ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಅತ್ಯಂತ ಹೆಚ್ಚಿನ ರೇಟಿಂಗ್ ಪಡೆಯುತ್ತಿದ್ದ ಧಾರವಾಹಿ ಮನೆದೇವ್ರು. ಈ ಧಾರವಾಹಿಯಲ್ಲಿ ಬರುತ್ತಿದ್ದ ಎಲ್ಲ ಪಾತ್ರಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಮನೆದೇವರು ಖ್ಯಾತಿಯ ಧಾರವಾಹಿಯಲ್ಲಿ ನಟಿಸುತ್ತಿದ್ದ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ನಿಮಗೆಲ್ಲರಿಗೂ ಖಂಡಿತ ಇರುತ್ತೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಮಧುಬಾಲ ಎಂಬ ಧಾರವಾಹಿಯಲ್ಲಿ ಸಾನಿಯಾ ಎಂಬ ನೆ’ಗೆಟಿವ್ ಪಾತ್ರಕ್ಕೆ ನಟನೆಯ ಜೀ’ವತುಂಬಿದ್ದರು ಅರ್ಚನಾ. ನಂತರ ಮನೆದೇವ್ರು ಧಾರವಾಹಿಯಲ್ಲಿ ಪ್ರಮುಖ ನಾಯಕಿಯ ಪಾತ್ರದಲ್ಲಿ ಜಾನಕಿ ಎಂದು ಎಲ್ಲರ ಮನೆ-ಮನಗಳಲ್ಲಿ ಮಾತಾಗಿದ್ದರು. ಆ ದಿನಗಳು ಖ್ಯಾತಿಯ ಚೇತನ್ ಅವರ ಜೊತೆ ಅರ್ಚನಾ ಅವರು ನೂರೊಂದು ನೆನಪು ಸಿನಿಮಾದಲ್ಲಿಯೂ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದರು.

ಮೈಸೂರಿನ ಈ ಚೆ’ಲುವೆ ತನ್ನ ವೃತ್ತಿಗೋಸ್ಕರ ಬೆಂಗಳೂರಿಗೆ ಬಂದು ನೆಲೆಸಿದ್ದರು. ಅರ್ಚನಾ ಅವರ ಪತಿ ವಿಘ್ನೇಶ್ ಅವರು ಹುಟ್ಟಿದ್ದು ಜರ್ಮನಿಯಲ್ಲಿ. ಆದರೆ ಅವರ ತಂದೆ-ತಾಯಿ ಎಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ನ್ಯೂಯಾರ್ಕ್’ನಲ್ಲಿರುವ ಅರ್ಚನಾ ಅವರು ಈಗ ಖಾಸಗಿ ಕಂಪನಿಯೊಂದರಲ್ಲಿ ಹೆಚ್.ಆರ್. ಆಗಿ ಕೆಲಸ ಮಾಡುತ್ತಿದ್ದಾರೆ. 2013 ರಲ್ಲಿ ಮಿಸ್ ಕರ್ನಾಟಕ ಕಾಂಟೆಸ್ಟ್ ಅನ್ನು ಗೆದ್ದರು. ಆಗ ಇದು ಒಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದು ಎಲ್ಲರಿಗೂ ಗೊತ್ತಿದೆ. ಇವರ ನಡಿಗೆ ಮತ್ತು ಸೌಂದರ್ಯವನ್ನು ಕಂಡ ಹಯವದನ ಅವರು ಮುಂಬರುವ ಧಾರಾವಾಹಿಯೊಂದರಲ್ಲಿ ಒಂದು ಪಾತ್ರವನ್ನು ಮಾಡಲು ಕೇಳಿದರಂತೆ.

ಆಗಲೇ ನೆಗೆ’ಟಿವ್ ಶೇಡ್ ಮಾಡೋದಕ್ಕೆ ಜನರು ಬಯ್ಯುತ್ತಾರೆ ಎಂದಾದರೂ ಪರವಾಗಿಲ್ಲ ನಾನು ಇದನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ನಟಿಸುತ್ತೇನೆ ಎಂದು ಮಧುಬಾಲ ಧಾರವಾಹಿಯಲ್ಲಿ ನಟನೆ ಪ್ರಾರಂಭಿಸಿದರು. ಇದಾದನಂತರ ಮನೆದೇವ್ರು ಮತ್ತು ಮತ್ತೆರಡು ತಮಿಳು ಸೀರಿಯಲ್’ಗಳಲ್ಲಿ ನಟಿಸಿದ್ದರು. ನಂತರ ಮೊದಲೇ ತಮ್ಮ ತಾಯಿಗೆ ನಾನು ಅರೆಂಜ್ ಮ್ಯಾರೇಜ್ ಆಗುತ್ತೇನೆ ನನಗೆ ಗಂಡು ಹುಡುಕಿ ಎಂದು ಹೇಳಿದ್ದ ಅರ್ಚನಾ ಅವರಿಗೆ ಮ್ಯಾಟ್ರಿ’ಮೋನಿ ವೆಬ್ಸೈಟ್ನಿಂದ ಮೇಲಿಂದ ಮೇಲೆ ಹಲವಾರು ಆಫರ್’ಗಳು ಬರುತ್ತಿದ್ದವಂತೆ. ಆಗಲೇ ತಮ್ಮ ಜೀವನದ ಸಂಗಾತಿಯಾಗಿ ವಿಜ್ಞೇಶ್ ಅವರನ್ನು ಆರಿಸಿದ ಅರ್ಚನ. ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ನ್ಯೂಯಾರ್ಕ್ನಲ್ಲಿ ಕಳೆಯಲು ನಿರ್ಧರಿಸಿದರು.

ನ್ಯೂಯಾರ್ಕಿಗೆ ಬಂದ ನಂತರ ಆರು ತಿಂಗಳುಗಳ ಕಾಲ ಮನೆಯಲ್ಲೇ ಅಡುಗೆ ಮಾಡುತ್ತಾ, ಕೆಲಸ ಹುಡುಕುತ್ತಾ ಸಮಯ ಕಳೆದರು. ಸದಾ ಶೂಟಿಂಗ್ ಮತ್ತು ಇತರೆ ಕಾರ್ಯಗಳಲ್ಲಿ ಬಿಜಿಯಾಗಿದ್ದ ಅವರಿಗೆ ಆರು ತಿಂಗಳುಗಳ ಕಾಲ ಕೆಲಸವಿಲ್ಲದೆ ಮನೆಯಲ್ಲಿ ಕೂರುವುದು ತುಂಬಾ ಕ’ಷ್ಟ ಹಾಗೂ ಬೇ’ಜಾರು ತರಿಸುತ್ತಿತ್ತು. ಆದರೆ ಅರ್ಚನಾ ಅವರು ನಟನ ರಂಗಕ್ಕೆ ಬರುವ ಮೊದಲು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಂದ ಮಾಡೆಲಿಂಗ್ ಕ್ಷೇತ್ರಕ್ಕೆ, ಅಲ್ಲಿಂದ ನಂತರ ಕಿರುತೆರೆಗೆ, ನಂತರ ಹಿರಿತೆರೆಗೆ ಹೀಗೆ ಪ್ರತಿಯೊಂದು ಹಂತದಲ್ಲೂ ತನ್ನ ಕಲೆಯನ್ನು ಪ್ರದರ್ಶಿಸುತ್ತಾ ಜನರ ಮೆಚ್ಚುಗೆಗೆ ಪಾತ್ರರಾದರು.

ನ್ಯೂಯಾರ್ಕಿಗೆ ಬಂದ ಆರಂಭದಲ್ಲಿ ಅವರಿಗೆ ಯಾರು ಹೆಚ್ಚು ಸ್ನೇಹಿತರು ಇಲ್ಲದಿದ್ದರಿಂದ ಅವರು ಯಾವಾಗಲೂ ಒಬ್ಬಂಟಿಯಾಗಿಯೇ ಇರುತ್ತಿದ್ದರು. ತದನಂತರ ಎನ್.ಜಿ.ಓ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಶುರು ಮಾಡಿದರು. ಹಾಗೆಯೇ ತಮ್ಮ ಪತಿಯ ಸ್ನೇಹಿತರ ಜೊತೆಗೆ ಬೆರೆತು ಒಟ್ಟಾಗಿ ಕೆಲಸ ಮಾಡುವಾಗ ಸಹಾಯವಾಗುತ್ತೆ ಅಂದುಕೊಂಡ ಅರ್ಚನಾ ನ್ಯೂಯಾರ್ಕಿನ ಇಂಗ್ಲೀಷ್ ಉಚ್ಚಾರಣೆ ಬರುವುದಿಲ್ಲ ಎಂಬ ಮನಸ್ಸಿನಲ್ಲಿತ್ತು. ನಂತರ ಕಂಪನಿಯವರು ಇಂಗ್ಲಿಷ್ ಭಾಷೆ ನಿಮಗೆ ಬಂದರೆ ಸಾಕು ಅದೇ ರೀತಿಯ ಆಕ್ಸೆಂಟ್ ನಿಮಗೆ ಬರಲೇ ಬೇಕು ಎಂದೇನಿಲ್ಲ ಎಂದು ಹೇಳಿದರು. ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡುತ್ತಿದ್ದರಿಂದ ಅರ್ಚನ ಅವರಿಗೆ ಈ ಕೆಲಸ ಅಷ್ಟು ಕಷ್ಟವಾಗಲಿಲ್ಲ.

ಭಾರತದಲ್ಲಿರುವ ಸ್ವಾತಂ’ತ್ರ್ಯ ಹಾಗೂ ವೈಭೋಗದಿಂದ ಬದುಕುವ ಹ’ಕ್ಕು ಅಷ್ಟು ಸುಲಭವಾಗಿ ನ್ಯೂಯಾರ್ಕ್’ನಲ್ಲಿ ಸಿಗುವುದಿಲ್ಲ. ಭಾರತದಲ್ಲಿ ಎಲ್ಲವೂ ಸ್ವಲ್ಪ ಕೈಗೆಟುಕುವ ದರದಲ್ಲಿ ಸಿಕ್ಕರೂ ನ್ಯೂಯಾರ್ಕ್ ಸಿಟಿಯಲ್ಲಿ ಎಲ್ಲವೂ ದುಬಾರಿ. ಇಲ್ಲಿ ಮನೆಬಾಡಿಗೆ ಕಟ್ಟುವುದು ಕೂಡ ಬಹಳ ಕ’ಷ್ಟ. ಮನೆಗೆಲಸಕ್ಕೆ ಜನರನ್ನು ಇಟ್ಟುಕೊಳ್ಳುವುದಂತೂ ಕನಸಿನ ಮಾತು. ಕಾರ್ ಏನಾದರೂ ಇಟ್ಟುಕೊಂಡರೆ ಅದಕ್ಕೆ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಹೀಗೆ ನೂರಾರು ಸಮಸ್ಯೆಗಳು ಇಲ್ಲಿವೆ. ಒಟ್ಟಿನಲ್ಲಿ ಭಾರತಕ್ಕೆ ಕಂಪೇರ್ ಮಾಡಿಕೊಂಡರೆ ನ್ಯೂಯಾರ್ಕ್’ನ ಜೀ’ವನಶೈಲಿ ಅಷ್ಟು ಸುಲಭವಲ್ಲ ಇಲ್ಲಿ ನಾವು ಸ್ವಾವಲಂ’ಬಿಯಾಗಿ ಬದುಕಬೇಕು ಎಂದು ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಹೇಳುತ್ತಾರೆ.

ವಿದೇಶಕ್ಕೆ ಹೋದರೂ ನಾನು ಭಾರತದಲ್ಲಿ ಹೇಗಿದ್ದೆನೋ ಹಾಗೆಯೇ ಇದ್ದೇನೆ. ಭಾರತದಲ್ಲಿ ನಾವು ಆಚರಿಸುವ ಹಬ್ಬ ಹರಿದಿನಗಳು ಇಲ್ಲಿ ಅಷ್ಟು ಸುಲಭವಾಗಿ ಆಚರಿಸಿಕೊಂಡು ಹೋಗಲು ಸಾ’ಧ್ಯವಿಲ್ಲ. ನಮ್ಮ ಮನೆಯ ಕಡೆ ಮದುವೆಯಾದ ಐದು ವರ್ಷಗಳು ಮಂಗಳಗೌರಿ ವ್ರತವನ್ನು ಮಾಡಬೇಕು ಎಂಬ ಪ್ರತೀತಿ ಇದೆ. ಆದರೆ ನ್ಯೂಯಾರ್ಕ್’ನಲ್ಲಿ ಒಂದು ಮೊಳ ಹೂವು, ಒಂದು ಕಾಯಿ ಸಿಗುವುದು ಕಷ್ಟ. ಪ್ರತಿಯೊಂದನ್ನು ಇಂಡಿಯನ್ ಸ್ಟೋರ್’ಗೆ ಹೋಗಿ ತರಬೇಕು. ಅದರಲ್ಲಿ ನಾವು ಇಲ್ಲಿ ವ್ರತವನ್ನು ಮಾಡಬೇಕು. ಹಾಗಾಗಿ ಎಲ್ಲಾ ಹಬ್ಬಗಳಿಗೂ ನಾನು ಬೇಕಾಗುವ ಸಾಮಗ್ರಿಗಳನ್ನು ಭಾರತದಿಂದಲೇ ತಂದಿಟ್ಟುಕೊಂಡಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಸಂಪ್ರದಾಯವನ್ನು ಬೆಳೆಸುವ ಪ್ರಯತ್ನ ಮಾಡುತ್ತೇನೆ. ಸಾಧ್ಯವಾದಾಗ ಅಥವಾ ರಜಾ ಸಿಕ್ಕಿದಾಗ ಭಾರತಕ್ಕೆ ಓಡಿ ಬರುತ್ತವೆ.

ಬಿಗ್’ಬಾಸ್ ಅರ್ಚನಾ ಅವರ ಫೇವರೆಟ್ ರಿಯಾಲಿಟಿ ಶೋ. ಹಾಗಾಗಿ ಅವರು ಬಿಗ್ ಬಾಸ್’ಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಧಾರವಾಹಿ ಹಾಗೂ ಸಿನಿಮಾದಲ್ಲಿ ನಟನೆ ಮುಂದುವರಿಸುವ ಆಸೆ ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಮನೆಯಲ್ಲಿ ಸಂಪೂರ್ಣ ಬೆಂಬಲವಿದ್ದರೂ ಈಗಿರುವ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಂದು ನಟನೆಯನ್ನು ಮುಂದುವರಿಸುವುದು ಕೊಂಚ ಕಷ್ಟ. ಆದರೂ ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಭಾರತಕ್ಕೆ ವಾಪಸ್ಸು ಬಂದು ನನ್ನ ಸಿನಿಮಾರಂಗದ ಹಾಗೂ ಕಿರುತೆರೆಯ ಪಯಣವನ್ನು ಮುಂದುವರೆಸುವ ಅ’ಭಿಲಾಷೆ ಇದೆ ಎಂದು ಅರ್ಚನಾ ಅವರು ಹೇಳುತ್ತಾರೆ.

Leave a Reply

Your email address will not be published. Required fields are marked *