ಹೀಗೆ ಮಾಡಿ. ಬಾಯಿ ವಾಸನೆ, ಹುಣ್ಣು, ಬಾಯಾರಿಕೆ ಥ’ಟ್ ಅಂತ ಕಡಿಮೆಯಾಗುತ್ತದೆ.
ಬಾಯಿಯ ದು’ರ್ವಾಸನೆ ನಮ್ಮನ್ನು ಅನೇಕ ಬಾರಿ ಮು’ಜುಗರಕ್ಕೆ ತ’ಳ್ಳುತ್ತದೆ. ಹಲ್ಲು ಮತ್ತು ಬಾಯಿಯ ಅಸ್ವ’ಚ್ಛತೆಯ ಕಾರಣದಿಂದಾಗಿ ಬಾಯಿವಾಸನೆ ಬರುತ್ತಿರುತ್ತದೆ. ಸುಮಾರು ದಿನಗಳ ಕಾಲ ಹಲ್ಲಿನ ಅಸ್ವಚ್ಛತೆಯನ್ನು ಹಾಗೆ ಬಿಡುವುದರಿಂದ ಕೊನೆಗೆ ದುರ್ವಾ’ಸನೆ ಪ್ರಾರಂಭವಾಗಿ ನಮ್ಮನ್ನು ಸಂಕಟಕ್ಕೆ ತಳ್ಳುತ್ತದೆ. ಬಾಯ ದುರ್ವಾ’ಸನೆಯನ್ನು ತಡೆಯಲು ಜಾಯಿಕಾಯಿ, ಏಲಕ್ಕಿಯ ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಬಾಯಿಯ ದುರ್ವಾ’ಸನೆ ಕ್ರಮೇಣ ದೂರವಾಗುತ್ತದೆ.
ದಂತವೈ’ದ್ಯರನ್ನು ಭೇಟಿ ನೀಡಿ ಅವರ ಸಲಹೆಯ ಮೇರೆಗೆ ಔ’ಷಧಿಗಳನ್ನು ತೆಗೆದುಕೊಳ್ಳಬೇಕು. ಪುದೀನಾ ಎಲೆಗಳನ್ನು ಅಗೆಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಅಗೆಯುವುದರಿಂದ ಬಾಯಲ್ಲಿ ಬರುವ ದುರ್ವಾಸನೆ ಕಡಿಮೆಯಾಗುತ್ತದೆ. ಹಸಿಶುಂಠಿ, ಉಪ್ಪು, ಲವಂಗವನ್ನು ಪೇಸ್ಟ್ ಮಾಡಿಕೊಂಡು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ನಾಲಿಗೆಯ ರುಚಿಯು ಸಹ ಹೆಚ್ಚುತ್ತದೆ.
ಶ್ರೀಗಂಧವನ್ನು ಚೆನ್ನಾಗಿ ತೇಯ್ದು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಗೊಟಾಯಿಸಬೇಕು. ಹೀಗೆ ಗೊಟಾಯಿಸಿದ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುವುದರಿಂದ ಬಾಯಿಯ ದುರ್ಗಂ’ಧ ದೂರವಾಗುತ್ತದೆ. ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಪ್ರಮಾಣದಲ್ಲಿ ಸೋಂಪಿನ ಕಾಳನ್ನು ಬಾಯಿಗೆ ಹಾಕಿಕೊಂಡು ಅಗಿಯಬೇಕು. ಆಗ ಬಾಯಿ ವಾ’ಸನೆ ಕಡಿಮೆಯಾಗುತ್ತದೆ. ನಾವು ಗಮನಿಸಬೇಕಾದ ಅಂಶವೇನೆಂದರೆ ಬಾಯ ದುರ್ಗಂ’ಧವನ್ನು ನಿವಾರಿಸಲು ಸೋಂಪು, ಏಲಕ್ಕಿ, ಜಾಕಾಯಿ ಮುಂತಾದ ಪದಾರ್ಥಗಳಲ್ಲಿ ಔಷ’ಧೀಯ ಗುಣಗಳು ಇರುವುದರಿಂದ ಇವನ್ನು ಬಳಸಿದರೆ ದುರ್ಗಂ’ಧ ದೂರವಾಗುತ್ತದೆ.
ಬಾಯಾರಿಕೆ ಹಾಗೂ ಬಾಯಿಹು’ಣ್ಣಿನ ಸಮ’ಸ್ಯೆಗಳಿಗೆ ಇಲ್ಲಿದೆ ಪರಿಹಾರ :
ಕೆಲವರಿಗೆ ಅತಿಯಾದ ಬಾಯಾರಿಕೆ ಕಾ’ಡುತ್ತಿರುತ್ತದೆ, ಹಾಗೆಯೇ ಬಾಯಿಹುಣ್ಣು ಸಹ ಉಪಟ’ಳವನ್ನು ನೀಡುತ್ತಿರುತ್ತದೆ. ಬಾಯಾರಿಕೆಯಿಂದ ನ’ರಳುತ್ತಿರುವವರು ಬಿ’ಸಿ ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಕಾಯಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ.
ಏಲಕ್ಕಿಯನ್ನು ಅಗಿಯುವುದರಿಂದಲೂ ಬಾಯಾರಿಕೆ ನಿವಾರಣೆಯಾಗುತ್ತದೆ. ಬಳಲಿಕೆಯಿಂದ ಬಾಯಾರಿಕೆ ಹೆಚ್ಚಾಗುತ್ತದೆ, ಹೀಗಿರುವುದರಿಂದ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಸೇಬು ಮತ್ತು ನಿಂಬೆ ಹಣ್ಣನ್ನು ಹೋಳುಗಳನ್ನಾಗಿ ಮಾಡಿಕೊಂಡು ಕು’ದಿಯುವ ನೀರಿಗೆ ಬೆರೆಸಿ ಸ್ವಲ್ಪ ಸಮಯ ಬಿಟ್ಟು ನೀರನ್ನು ಶೋಧಿಸಿಕೊಳ್ಳಬೇಕು. ನಂತರ ಸಕ್ಕರೆ ಬೆರೆಸಿ ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಾಗುತ್ತದೆ.
ಅರ್ಧ ಚಮಚ ಕಾಳು ಮೆಣಸನ್ನು ಹು’ರಿದು ಪುಡಿ ಮಾಡಿಕೊಳ್ಳಬೇಕು ಪುಡಿಯನ್ನು ಕು’ದಿಯುವ ನೀರಿಗೆ ಹಾಕಿ ಕು’ದಿಸಿ ಕೆಳಗಿಳಿಸಬೇಕು ತಣ್ಣಗಾದ ನಂತರ ಕು’ಡಿದರೆ ಬಾಯಾರಿಕೆ ದೂರವಾಗುತ್ತದೆ. ಕೊತ್ತಂಬರಿಬೀಜ, ಜೀರಿಗೆಯನ್ನು ಸಮಪ್ರಮಾಣದಲ್ಲಿ ಕುಟ್ಟಿ ನೀರಿಗೆ ಬೆರೆಸಿ ಕಷಾಯವನ್ನು ತಯಾರಿಸಿ. ಹೀಗೆ ತಯಾರಿಸಿದ ಕಷಾಯವನ್ನು ತಣ್ಣಗೆ ಮಾಡಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ. ಒಂದು ಲೋಟ ಬಿ’ಸಿನೀರಿಗೆ ನಿಂಬೆಹಣ್ಣಿನ ರಸವನ್ನು ಹಿಂ’ಡಿ ಸಕ್ಕರೆಯನ್ನು ಸೇರಿಸಿ ಪಾಕವನ್ನು ತಯಾರಿಸಿಕೊಳ್ಳಬೇಕು. ಇದನ್ನು ಕುಡಿದರೆ ಬಾಯಾರಿಕೆ ದೂರವಾಗುತ್ತದೆ.
ದಾಳಿಂಬೆ ಹೂವಿನ ಕಷಾಯವನ್ನು ತಯಾರಿಸಿ ದಿನವೂ ಅದರಲ್ಲಿ ಬಾಯಿಯನ್ನು ಮು’ಕ್ಕಳಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಜಾಜಿ ಗಿಡದ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಬಾಯಿಹುಣ್ಣು ದೂರಾಗುತ್ತದೆ. ಬಸಳೆ ಸೊಪ್ಪನ್ನು ಉಪ್ಪಿನ ಜೊತೆ ಅ’ಗಿಯುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಗಸಗಸೆ ಪಾಯಸ ಅಥವಾ ಒಣಕೊಬ್ಬರಿಯ ಜೊತೆ ಸ್ವಲ್ಪ ಹುರಿದ ಗಸಗಸೆ, ಬೆಲ್ಲವನ್ನು ಸೇರಿಸಿ ಅಗಿಯುವುದರಿಂದ ಬಾಯಿಯ ಹುಣ್ಣು ದೂರವಾಗುತ್ತದೆ. ಬಾಯಿಯ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪವನ್ನು ಸವರುವುದರಿಂದ ಬೇಗನೆ ವಾಸಿಯಾಗುತ್ತದೆ.
ನಾವು ಗಮನಿಸಬೇಕಾದ ಅಂಶವೇನೆಂದರೆ ಬಾಯಾರಿಕೆ ಬರಲು ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿರುವುದು. ನೀರನ್ನು ಹೆಚ್ಚಾಗಿ ಸೇವಿಸಬೇಕು. ಜೇನುತುಪ್ಪ ಗಸಗಸೆ ಒಣಕೊಬ್ಬರಿಯಲ್ಲಿ ಔ’ಷಧೀಯ ಗುಣಗಳು ಇರುತ್ತವೆ. ಇವುಗಳು ಬಾಯಿಯ ಹುಣ್ಣನ್ನು ದೂರಮಾಡುತ್ತವೆ. ಬಾಳೆಹಣ್ಣು, ಪಪ್ಪಾಯಿಯನ್ನು ಸೇವಿಸುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಹಾಗೂ ಅವುಗಳಲ್ಲಿರುವ ಜೀವಸತ್ವಗಳು ರೋಗ ಬರದಂತೆ ತಡೆಯಬಲ್ಲವು ಹಾಗೂ ದೇಹಕ್ಕೆ ರಕ್ಷಣೆ ಕೊಡುತ್ತದೆ.