ಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಈ ಮೂರು ತಪ್ಪುಗಳನ್ನು ಮಾಡಿದರೆ ಕೂದಲು ಉದುರುವುದು ಎಂದಿಗೂ ನಿಲ್ಲುವುದಿಲ್ಲ.

ಇಂದಿನ ನಮ್ಮ ಜೀವನಶೈಲಿಯಲ್ಲಿ ಹದಿಹ’ರೆಯದವರಿಗೆ ಮಾತ್ರವಲ್ಲದೆ ಎಲ್ಲ ವಯಸ್ಸಿನವರಿಗೂ ಕೂದಲುದುರುವ ಸಮಸ್ಯೆ ತುಂಬಾ ಕಾಡುತ್ತಿರುತ್ತದೆ. ಕೂದಲಿನಲ್ಲಿ ಅತಿಯಾದ ಹೊಟ್ಟು ಇರುವುದರಿಂದ ಕೂದಲು ಉದುರುವ ಸಾಧ್ಯತೆ ಹೆಚ್ಚು. ಸರಿಯಾದ ಆರೈಕೆ, ಪೋಷಣೆ ಇಲ್ಲದೆ ಇರುವುದರಿಂದ ಕೂದಲು ಉದುರುತ್ತದೆ. ಈ ಸಮಸ್ಯೆಯಿಂದ ಪಾರಾಗಲು ನಾವು ಹಲವಾರು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತೇವೆ. ಆದರೆ ಅಂತಹ ತಪ್ಪನ್ನು ಎಂದಿಗೂ ಮಾಡಬಾರದು.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಹೀಗೆ ಮಾಡಿದರೆ ಕೂದಲು ಉದುರುವುದನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು. ವಾರಕ್ಕೆ ಎರಡು ಬಾರಿಯಾದರೂ ಕೂದಲನ್ನು ತೊಳೆಯಬೇಕು. ವಾರದಲ್ಲಿ ಎರಡು ಬಾರಿಯಾದರೂ ತಲೆಸ್ನಾನ ಮಾಡಬೇಕು. ಕೂದಲಿಗೆ ರಾ’ಸಾಯನಿಕ ವಸ್ತುಗಳಿಂದ ತಯಾರಿಸಿದ ಶಾಂಪೂಗಳನ್ನು ಉಪಯೋಗಿಸಲೇಬಾರದು. ಇದರಿಂದ ಕೂದಲು ಉದುರುವ ಸ’ಮಸ್ಯೆ ಹೆಚ್ಚಾಗುತ್ತದೆ. ಮೊದಲಿಗೆ ತುಂಬಾ ಸೊಂಪಾಗಿ ಬೆಳೆಯುತ್ತದೆ ಎನಿಸಿದರೂ ನಂತರದ ಸಮಯದಲ್ಲಿ ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ.

ಮೊದಲನೆಯದಾಗಿ : ಒದ್ದೆ ಕೂದಲನ್ನು ಎಂದಿಗೂ ಬಾಚಬೇಡಿ. ಒದ್ದೆ ಕೂದಲನ್ನು ಬಾಚುವುದರಿಂದ ಹೊಟ್ಟು ಉಂಟಾಗುತ್ತದೆ ಹೊಟ್ಟಿನಿಂದ ಕೂದಲು ಉದುರುತ್ತದೆ, ಹೀಗೆಯೇ ಇನ್ನೂ ಹಲವಾರು ಸಮಸ್ಯೆಗಳು ಕಾಡುತ್ತವೆ. ಇಂದಿನ ಕಾಲದಲ್ಲಿ ಬಿಳಿ ಕೂದಲಿನ ಸಮಸ್ಯೆ ಅತಿಯಾಗಿ ಚಿಕ್ಕ ವಯಸ್ಸಿನವರನ್ನು ಸಹ ಕಾ’ಡುತ್ತದೆ. ಇದಕ್ಕೆ ಪರಿಹಾರವೇನೆಂದರೆ ಕೊಬ್ಬರಿ ಎಣ್ಣೆಗೆ ಮೆಂತ್ಯ ಬೆರೆಸಿ ಚೆನ್ನಾಗಿ ಕಾಯಿಸಿ ಇಟ್ಟುಕೊಳ್ಳಬೇಕು. ನಂತರ ಪ್ರತಿದಿನ ಕೂದಲಿಗೆ ಮೆಂತೆ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.

ದಂಟಿನ ಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ. ದಂಟಿನ ಸೊಪ್ಪಿನಿಂದ ನಮ್ಮ ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ. ದಂಟಿನ ಸೊಪ್ಪಿನ ರ’ಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ನಾವು ತಾಂಬೂಲವಾಗಿ ಸೇವಿಸುವ ವೀಳ್ಯದೆಲೆಯನ್ನು ಕೂಡ ಬಳಸಿ ನಮ್ಮ ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು. ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿಎಣ್ಣೆ ಬೆರೆಸಿ ಸ್ವಲ್ಪ ಕಾ’ಯಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದಿಲ್ಲ.

ಎರೆಡನೇಯದಾಗಿ : ಕೂದಲು ಉದುರುವಿಕೆಯ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಸು’ಡುವ ನೀರಿನಲ್ಲಿ ತಲೆಸ್ನಾನ ಮಾಡುವುದು. ತಲೆ ಸ್ನಾನ ಮಾಡುವಾಗ ತಣ್ಣೀರಿನಲ್ಲಿ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಯನ್ನು ತೊಳೆದರೆ ಕೂದಲು ಉದುರುವುದಿಲ್ಲ. ಮೆಂತ್ಯೆಕಾಳನ್ನು ಬಳಸಿ ಕೂದಲು ರೇಷ್ಮೆಯಂತೆ ನುಣುಪಾಗಿರಬಹುದು. ಮೆಂತ್ಯೆಯನ್ನು ಹಾಲಿನಲ್ಲಿ ನೆನೆಸಿ ಮರುದಿನ ನನಗೆ ರುಬ್ಬಿ ಕೂದಲಿಗೆ ಹಚ್ಚಬೇಕು ಹಾಗೆ ಮಾಡುವುದರಿಂದ ಕೂದಲು ರೇಷ್ಮೆಯಂತೆ ನುಣುಪಾಗುತ್ತದೆ.

ಮುರನೆಯದಾಗಿ : ಪದೇ ಪದೇ ಶ್ಯಾಂಪೂವನ್ನು ಬದಲಿಸಬೇಡಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ಹೆಚ್ಚಾಗಿ ತಲೆ ಬು’ರುಡೆ ಕಾಣಿಸಲು ಶುರುವಾಗುತ್ತದೆ. ದಾಸವಾಳದ ಎಲೆಗಳು ನಮ್ಮ ಕೂದಲಿನ ಮೇಲೆ ಚಮ’ತ್ಕಾರವನ್ನು ಮಾಡುತ್ತದೆ ಎನ್ನಬಹುದು. ದಾಸವಾಳದ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲಿಗೆ ಅವ’ಶ್ಯಕವಿರುವ ಪೋಷಕಾಂಶಗಳನ್ನು ನೀಡದಿದ್ದರೆ ಕೂದಲು ಉದುರುವ ಸಮಸ್ಯೆ ಹೆಚ್ಚು. ಈ ಪೋಷಕಾಂಶಗಳನ್ನು ನಾವು ತಿನ್ನುವ ಹಣ್ಣು-ತರಕಾರಿ, ಸೊಪ್ಪುಗಳಿಂದ, ತಲೆಗೆ ಹಚ್ಚುವ ಎ’ಣ್ಣೆಗಳಿಂದ, ಹಾಗೂ ತಲೆಗೆ ಹಚ್ಚುವ ನೈಸರ್ಗಿಕ ಪ್ಯಾಕ್’ಗಳಿಂದ ಪಡೆಯಬಹುದು.

Leave a Reply

Your email address will not be published. Required fields are marked *