ಚಂದ್ರಚಕೋರಿ ನಾಯಕಿಯ ಹೆಸರೇನು, ಈಗೇನು ಮಾಡ್ತಿದ್ದಾರೆ. ವಿಡಿಯೋ ಸಮೇತ ನೋಡಿ.
ಆಹಾ ಜುಮ್ತಕ ಜು’ಮ್ ಜು’ಮ್ ಎಂದು ಫೇಮಸ್ ಆಗಿದ್ದ ಈ ಹಾಡು ಚನ್ನಾಂಬಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರೀಕರಣವಾದ ಸೂಪರ್ ಹಿಟ್ ಸಿನಿಮಾ ಚಂದ್ರಚಕೋರಿಯದ್ದು. ಇದರಲ್ಲಿ ದ್ವಿತೀಯ ನಾಯಕಿಯ ಪಾತ್ರದಲ್ಲಿ ಮಿಂಚಿದ್ದ ಆ ನಟಿ ಈಗ ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ, ಆಕೆಗೆ ಎಷ್ಟು ವರ್ಷ ವಯಸ್ಸು, ಎಂದೆಲ್ಲ ನಿಮ್ಮಲ್ಲಿ ಪ್ರಶ್ನೆ ಇರಬಹುದು. ಅವರ ಬಗ್ಗೆ ಸಂಪೂರ್ಣ ಡೀಟೇಲ್ಸ್ ನಿಮಗೆ ಇಂದು ನಾವು ಕೊಡುತ್ತೇವೆ.
ಪುಟ್ಟರಾಜು ಪಾತ್ರದಲ್ಲಿ ಮಿಂಚಿದ್ದ ಶ್ರೀಮುರುಳಿ, ಮೊದಲ ಬಾರಿಗೆ ಒಬ್ಬ ಮೂಗನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಸೇವಂತಿ ಪಾತ್ರದ ನಾಯಕನಟಿಯು ಮ’ರಣ ಹೊಂದಿದ ನಂತರ ಪುಟ್ಟರಾಜು ಮೌ’ನಿಯಾಗುತ್ತಾನೆ. ನಂತರ ಬರುವ ದ್ವಿತೀಯ ನಾಯಕಿ ಅವನ ಮನಸ್ಸನ್ನು ಬದಲಿಸಿ ಅವನನ್ನು ವಿವಾಹವಾಗುತ್ತಾಳೆ. ಎಸ್ ನಾರಾಯಣ್ ನಿರ್ದೇಶನದ, ಶ್ರೀಮತಿ ಅನಿತಾ ಕುಮಾರಸ್ವಾಮಿ ಹಾಗೂ ಎಚ್ ಡಿ ಕುಮಾರಸ್ವಾಮಿಯವರ ನಿರ್ಮಾಣದ ಈ ಚಿತ್ರ ತನ್ನ ಸಂಪೂರ್ಣ ಹಕ್ಕನ್ನು ಕಸ್ತೂರಿ ವಾಹಿನಿಗೆ ಹಸ್ತಾಂತರಿಸಿದೆ.
ಎಷ್ಟು ಜನ, ಈ ಚಿತ್ರದಲ್ಲಿ ದ್ವಿತೀಯ ಪಾತ್ರದಲ್ಲಿ ಅಭಿನಯಿಸಿರುವ ನಾಯಕಿ ಎಸ್ ನಾರಾಯಣ್ ಅವರ ಸಹೋದರನ ಮಗಳು ಎಂದೆಲ್ಲಾ ಹೊರಡಿಸಿದ್ದರು. ಆದರೆ, ಈ ನಾಯಕಿಯೂ ಮೂಲತಹ ಮುಂಬೈ ಬೆಡಗಿ. ಈಕೆಯ ಹೆಸರು ಪ್ರಿಯ ಪೆರೆರ. 5.6 ಅಡಿ ಎತ್ತರವಿರುವ ಈ ಬೆಳಗಿ ಹುಟ್ಟಿದ್ದು ಬೆಳೆದಿದ್ದು ಎಲ್ಲ ಮುಂಬೈ ನಗರದಲ್ಲಿ. ಮುಂಬೈನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾಭ್ಯಾಸ ಮಾಡಿದ್ದಾರೆ. ಕನ್ನಡದ ಚಂದ್ರಚಕೋರಿ ಅಷ್ಟೇ ಅಲ್ಲ ತೆಲುಗಿನ ಮಿರೋ ಏವರು ಕೋಟೇಶ್ವರುಡು ಚಿತ್ರದಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಪ್ರಸ್ತುತ ಮುಂಬೈ ನಗರದಲ್ಲಿ ನೃತ್ಯ ಪಟುವಾಗಿರುವ ಈಕೆ ವಿದ್ಯಾಭ್ಯಾಸದ ಜೊತೆಗೆ ನೃತ್ಯವನ್ನು ಹೇಳಿಕೊಳ್ಳುತ್ತಾರೆ. ಜೊತೆಗೆ ಈಕೆ ಸಾವಯವ ಬೆಣ್ಣೆಯ ಅಂಗಡಿಯನ್ನು ಕೂಡ ಇಟ್ಟುಕೊಂಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಪ್ರಿಯ ಪರೆರ ಛಾಬ್ರಿಯಾ ಎಂದು ಅಕೌಂಟ್ ಹೊಂದಿರುವ ಈಕೆ ತನ್ನ ನೃತ್ಯಕಲೆಯನ್ನು ವಿಡಿಯೋ ಮಾಡಿ ಆಗಾಗ ಹರಿಬಿಡುತ್ತಾರೆ. ಇತ್ತೀಚೆಗೆ ಚಂದ್ರ ಚಕೋರಿಯ ‘ಆಹಾ ಜುಮ್ ತಕ ಜು’ಮ್ ಜು’ಮ್’ ಹಾಡಿಗೆ ನೃತ್ಯ ಮಾಡಿ ವಿಡಿಯೋ ಬಿಟ್ಟಿರುವುದು ಎಲ್ಲೆಡೆ ವೈರಲ್ ಆಗಿದೆ.