ಈ ಸಿಂಪಲ್ ಟಿಪ್ಸ್’ಗಳು ನಿಮ್ಮ ತ್ವಚೆಯ ಮೇಲೆ ಚ’ಮತ್ಕಾರ ಮಾಡಲಿವೆ.
ಸಾಮಾನ್ಯವಾಗಿ ಚ’ರ್ಮವನ್ನು 4 ವಿಧಗಳಾಗಿ ವಿಂಗಡಿಸಬಹುದು. ಶುಷ್ಕ ಚರ್ಮ, ಸಾಧಾರಣ ಚರ್ಮ, ಜಿಡ್ಡಿನ ಚರ್ಮ, ಮಿಶ್ರ ಚರ್ಮ. ಈ ಎಲ್ಲ ಚರ್ಮಗಳ ಬಗ್ಗೆ ಕೆಲವು ವಿವರಗಳನ್ನು ನಾವು ತಿಳಿದುಕೊಳ್ಳೋಣ. ಶುಷ್ಕ ಚರ್ಮ : ಶುಷ್ಕ ಚರ್ಮ ಇರುವವರ ಮುಖ ಮಂಕಾಗಿ ಕಾಣಬಹುದು. ಕಣ್ಣು, ಬಾಯಿ, ಹಣೆಗಳ ಬಳಿ ಗೆರೆಗಳು ಕೂಡ ಮೂಡುತ್ತವೆ. ಚಳಿ, ಗಾಳಿಗೆ ಒಡೆದುಕೊಂಡು ಚರ್ಮ ಬಿರುಸಾಗಿ ಕಾಣುತ್ತದೆ. ಮುಖದ ಹೊಳಪು ಕಡಿಮೆಯಾಗಿ ಅದು ಕಾಣದಾಗಿಯೂ ಹೋಗಬಹುದು. ಸಾಧಾರಣ ಚರ್ಮ : ಈ ಚರ್ಮವು ಮೃದುವಾಗಿದ್ದು ಬಿಗಿಯಾಗಿರುತ್ತದೆ. ಇದು ಬಹಳ ಶುಷ್ಕವಾಗಿಯೂ ಇರದೆ ಜಿಡ್ಡಾಗಿಯೂ ಇರದೆ ಸೂಕ್ಷ್ಮವಾಗಿರುತ್ತದೆ. ಈ ಚರ್ಮಕ್ಕೆ ಮೇಕಪ್ ಸೂಕ್ತವಾಗಿರುತ್ತದೆ.
ಜಿಡ್ಡಿನ ಚರ್ಮ : ಇಂತಹ ಚರ್ಮ ಸಹ ಹೊಳೆಯುತ್ತಿರುತ್ತದೆ. ಈ ಜಿಡ್ಡು ಹೊಳಪು ಸಾಧಾರಣವಾಗಿ ಹಣೆ, ಮೂಗು, ಕೆನ್ನೆ ಹಾಗೂ ಗಲ್ಲಗಳ ಹೆಚ್ಚಿರುತ್ತದೆ. ಕೆನ್ನೆ, ಬಾಯಿಗಳ ಬಳಿ ಪದರಗಳು ಹೆಚ್ಚಾಗಿ ಆ ಜಾಗಗಳು ಹೆಚ್ಚು ಬೆಳ್ಳಗೋ, ಕಪ್ಪಗೋ ಕಾಣಿಸಬಹುದು. ಮಿಶ್ರ ಚರ್ಮ : ಇದು ಜಿಡ್ಡು ಹಾಗೂ ಶುಷ್ಕತೆಯಿಂದ ಕೂಡಿದ ಚರ್ಮ. ಕೆನ್ನೆ, ದವಡೆ, ಹಣೆ, ಬಯಿಯ ಸುತ್ತ ಮುಂತಾದ ಜಾಗಗಳಲ್ಲಿ ಜಿಡ್ಡು ಮೂಡಬಹುದು. ಜಿಡ್ಡಿನಂಶ ಹೆಚ್ಚಾಗಿರುವ ಕಡೆ ಮೊಡವೆಗಳು, ಕಪ್ಪುಚುಕ್ಕೆಗಳು ಕಂಡುಬಂದರೆ ಶುಷ್ಕವಾಗಿರುವ ಭಾಗಗಳು ಮಂಕಾಗಿ ಕಾಣಬಹುದು.
ಇನ್ನು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು. ಯಾವುದೇ ರಾ’ಸಾಯನಿಕ ಅಂಶಗಳನ್ನು ಒಳಗೊಂಡಿರುವ ಪದಾರ್ಥಗಳನ್ನು ಬಳಸದೆ ಮನೆಯಲ್ಲಿಯೇ ನೈ’ಸರ್ಗಿಕವಾಗಿ ಸಿಗುವ ಕೆಲವು ಸೌಂದರ್ಯ ವರ್ಧಕಗಳಿಂದ ಮುಖದ ಕಾಂತಿಯನ್ನು ಹೇಗೆ ಪಡೆಯುವುದು ಎಂದು ನೋಡೋಣ. ನಿಂಬೆಹಣ್ಣಿನ ಸಿಪ್ಪೆಯಿಂದ ನಿತ್ಯವೂ ಮುಖವನ್ನು ಉಜ್ಜಿ ತೊಳೆದು’ಕೊಳ್ಳಬೇಕು. ಇದರಿಂದ ಚರ್ಮದ ಜಿಡ್ಡು ತೊ’ಲಗುತ್ತದೆ. ನಿಂಬೆ ರಸವನ್ನು ಎಣ್ಣೆಯಲ್ಲಿ ಕಲಸಿ ಮುಖ ಕೈ ಕುತ್ತಿಗೆಗೆ ಸವಾರಿ ಅರ್ಧಗಂಟೆ ಬಿಟ್ಟು ನಂತರ ತೊಳೆಯಿರಿ. ಈ ಕೆಲಸವನ್ನು ಪ್ರತಿದಿನ ರಾತ್ರಿ ಮಲಗುವಾಗ ಮಾಡಬೇಕು ಮುಖದ ಚೆಲುವು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ಸಾಧನವಾಗಿದೆ.
ರಾತ್ರಿ 4 ಬಾದಾಮಿಗಳನ್ನು ನೆನೆಯಿಡಿ. ಮರುದಿನ ಸಿಪ್ಪೆತೆಗೆದು ಅ’ರೆಯಿರಿ. ಇದಕ್ಕೆ ಒಂದರಿಂದ ಎರಡರಷ್ಟು ಕಡಲೆ ಹಿಟ್ಟು, 1 ಚಮಚ ಶುದ್ಧವಾಗಿ ಕಾ’ಯಿಸಿರುವ ಹಾಲು ಮತ್ತು ನಿಂಬೆರಸ ಸೇರಿಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕಂದುಬಣ್ಣದ ಮುಖ ಬೆಳ್ಳಗಾಗುವುದು. ಮುಖದ ಕೊಳೆ ಕಿ’ತ್ತಿ ಬರಲು ಗಟ್ಟಿ ಮೊಸರಿನಿಂದ ಮಸಾಜ್ ಮಾಡಿ. ನಿಂಬೆರಸದಲ್ಲಿ ಸೌತೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮುಖ ಬೆಳ್ಳಗಾಗುವುದು.
ಹಸಿ ಬಟಾಣಿಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ದೇಹಕ್ಕೆ ಸವರಿ. ಇದರಿಂದ ಚರ್ಮಕ್ಕೆ ಒಳ್ಳೆಯ ಬಣ್ಣ ಬರುತ್ತದೆ. ಕಮಲದ ಬೀಜಗಳನ್ನು ಹಾಲಿನಲ್ಲಿ ಸೇರಿಸಿ ಮುಖಕ್ಕೆ ಹಚ್ಚಿರಿ. ಮುಖವು ಕಾಂತಿಯಿಂದ ಹೊಳೆಯುತ್ತದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಬೇಯಿಸಿರಿ . ಈ ನೀರಿನಿಂದ ಮುಖ, ಕುತ್ತಿಗೆಯನ್ನು ತೊಳೆಯಿರಿ. ಇದರಿಂದ ಮುಖದ ಅಂದ ಹೆಚ್ಚುತ್ತದೆ. ಒಂದು ಟೀ ಚಮಚ ತುಳಸಿ ರ’ಸದೊಡನೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಮುಖದ ಕಲೆಗಳು ನಿವಾರಣೆಯಾಗುತ್ತದೆ.
ಪ್ರತಿನಿತ್ಯ ಮುಂಜಾವಿನಲ್ಲಿ ಖಾಲಿ ಹೊಟ್ಟೆಗೆ ಒಂದು ಲೋಟ ಕ್ಯಾರೆಟ್ ರ’ಸವನ್ನು ಕುಡಿಯುವುದರಿಂದ ಚರ್ಮದ ಕಲೆಗಳು ನಿವಾರಣೆಯಾಗುತ್ತದೆ. ಶರೀರದ ಚರ್ಮ ನಯವಾಗಿ ಉಳಿಯಲು ನಿತ್ಯವೂ ಸ್ನಾನ ಮಾಡುವಾಗ ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ತಿಕ್ಕಿಕೊಂಡು ನಂತರ ಸ್ನಾನ ಮಾಡಬೇಕು. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಹಾಲಿನ ಕೆನೆ, ಗಂಧ, ಕಡಲೆಹಿಟ್ಟು, ಅರಿಶಿನಪುಡಿ, ಎಲ್ಲವನ್ನೂ ಸೇರಿಸಿ ದಿನವೂ ಮುಖ-ಮೈಗಳಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಇದರಿಂದ ಮುಖವು ಕೋಮಲವಾಗಿ ಉಳಿಯುತ್ತದೆ.
ರಾತ್ರಿ ಮಲಗುವ ಮುನ್ನ ಚರ್ಮದ ಒ’ಡೆದ ಭಾಗಗಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಲಗಿರಿ. ಇದರಿಂದ ಚರ್ಮವು ಕೋಮಲವಾಗುತ್ತದೆ. ಕರಬೂಜದ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ನೀರಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿಕೊಂಡರೆ ಮುಖದ ಸುಕ್ಕುಗಳು ಮಾಯವಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.