ಕೊಬ್ಬರಿಎಣ್ಣೆ ದೀಪದ ಶ್ರೇಷ್ಠತೆ ತಿಳಿದರೆ ಶಾ’ಕ್ ಆಗ್ತೀರಾ. ಜೀವನವೇ ಬದಲಾಗುತ್ತೆ.
ಕೊಬ್ಬರಿಎಣ್ಣೆ ದೀಪದ ಶ್ರೇಷ್ಠತೆ ತಿಳಿದರೆ ಶಾ’ಕ್ ಆಗ್ತೀರಾ. ಕೊಬ್ಬರಿ ಎಣ್ಣೆಯನ್ನು ಬಳಸಿ ದೇವರಿಗೆ ದೀಪ ಹಚ್ಚಿದರೆ ಈ ಎಲ್ಲ ಲಾಭಗಳು ನಿಮಗಾಗಲಿದೆ. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ದೇವರಿಗೆ ಹಚ್ಚುತ್ತಾರೆ, ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತವೆ. ಯಾವ ಮನೆಯಲ್ಲಿ ಮನೆದೇವರಿಗೆ ಕೊಬ್ಬರಿಎಣ್ಣೆ ದೀಪವನ್ನು ಅಖಂಡ(ನಂದಾದೀಪ) ದೇವರಿಗೆ ಹಚ್ಚುತ್ತಾರೋ ಆ ಮನೆಯಲ್ಲಿ ಸಿರಿಸಂಪತ್ತು ವೃದ್ಧಿಯಾಗುತ್ತದೆ.
ಯಾರ ಮನೆಯಲ್ಲಿ ಮದುವೆಯಾಗದ ಗಂಡು-ಹೆಣ್ಣು ಮಕ್ಕಳು, ಕಾತ್ಯಾಯಿನಿ ದೇವಿಯ ಪೂಜೆಯನ್ನು ಮಾಡುವಾಗ ಕೊಬ್ಬರಿ ಎಣ್ಣೆಯ ದೀಪವನ್ನು ದೇವರಿಗೆ ಹಚ್ಚುತ್ತಾರೋ, ಆ ಮನೆಯಲ್ಲಿ ಬಹಳ ಬೇಗ ಮದುವೆ ಕಾರ್ಯಗಳು ಜರುಗುತ್ತದೆ. ಮಂಗಳವಾರ ಸುಬ್ರಹ್ಮಣ್ಯಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿದರೆ ಆ ಮನೆಯಲ್ಲಿ ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಲಭಿಸುತ್ತದೆ. ಅಶ್ವತ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ತನಿ ಎರೆದು ಶ್ರೀ ಅಶ್ವತ್ಥನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯಲ್ಲಿ ದೀಪ ಹಚ್ಚಿದರೆ ದಾಂ’ಪತ್ಯ ಜೀವನದ ಕಲಹವು ನಿವಾರಣೆಯಾಗುತ್ತದೆ.
ಯಾರಿಗೆ ಜಾತಕದಲ್ಲಿ ಕುಜ ದೋ’ಷವು ಜಾಸ್ತಿ ಇರುತ್ತದೆಯೋ ಅವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡುವ ಸಮಯದಲ್ಲಿ ಕೊಬ್ಬರಿ ಎಣ್ಣೆಯ ದೀಪವನ್ನು ದೇವರಿಗೆ ಹಚ್ಚಬೇಕು. ನಂತರ ಒಬ್ಬಟ್ಟನ್ನು ನೈವೇದ್ಯ ಮಾಡಿ ಬಾಗಿನವನ್ನು ದಾನವಾಗಿ ಕೊಟ್ಟರೆ ಕುಜ ದೋ’ಷ ನಿವಾರಣೆಯಾಗುತ್ತದೆ. ಅಶ್ವತ್ಥನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿರುವ ನಾಗರ ಕಲ್ಲಿಗೆ( ಶ್ರೀಕೃಷ್ಣ ಇರಬೇಕು) ಸಂತಾನಗೋಪಾಲಕೃಷ್ಣ ಸ್ವಾಮಿಯ ಪೂಜಾ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ವ್ರತವನ್ನು ಮಾಡಿ ಉದ್ಯಾಪನೆಯನ್ನು ಮಾಡಿದರೆ ಗಂಡು ಸಂ’ತಾನ ಫಲ ಪ್ರಾಪ್ತಿಯಾಗುತ್ತದೆ.
ಯಾವುದೇ ಹೋಮದಲ್ಲಿ ಪೂರ್ಣಾಹು’ತಿ ಸಮಯದಲ್ಲಿ ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟಸಿದ್ದಿ ನವ ನಿಧಿ ಪ್ರಾಪ್ತಿಯಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿ 48 ದಿವಸಗಳ ಮಂಡಲ ಪೂಜೆಯನ್ನು ಯಾರು ಮಾಡುತ್ತಾರೋ ಅವರಿಗೆ ಬರಬೇಕಾದ ಬಾಕಿ ಇರುವ ಹಣ ಬೇಗ ಕೈ ಸೇರುತ್ತದೆ. ಪ್ರತಿದಿನ ಮಹಾಲಕ್ಷ್ಮಿದೇವಿಗೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ಕೊಬ್ಬರಿ, ಸಕ್ಕರೆ ನೈವೇದ್ಯ ಮಾಡಿದರೆ ಶುಭಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನೆರವೇರುತ್ತವೆ.
ಬಲಮುರಿ ಗಣೇಶನಿಗೆ ವಿಧಿವಿಧಾನಗಳಿಂದ ಪೂಜೆ ಮಾಡಿ ಬೆಲ್ಲವನ್ನು ನೈವೇದ್ಯ ಅರ್ಪಿಸಿ ತನ್ನ ಪ್ರಿ’ಯತಮೆ ಅಥವಾ ಪ್ರಿ’ಯತಮನ ಜೊತೆಯಲ್ಲಿ ವಿವಾಹ ನೆರವೇರಲಿ ಎಂದು ಬೇಡಿಕೊಳ್ಳಬೇಕು. ನಂತರ ಕೊಬ್ಬರಿ ಎಣ್ಣೆಯ ದೀಪ ಹಚ್ಚಿ ರೇಷ್ಮೆ ವಸ್ತ್ರವನ್ನು ಅಥವಾ ರೇಷ್ಮೆಯ ಕಣವನ್ನು ಮದುವೆಯಾಗುವ ಸ್ತ್ರೀ ಅಥವಾ ಪುರುಷರು ಗಣೇಶನಿಗೆ ಅರ್ಪಿಸಬೇಕು. ನಂತರ ಅಶ್ವಥ ಮರ, ನಾಗರಕಲ್ಲು, ಮಾವಿನ ಮರಕ್ಕೆ ಇದನ್ನು ಕಟ್ಟಿದರೆ ಅವರ ಇಚ್ಛೆಯಂತೆ ವಿವಾಹ ಜರಗುತ್ತದೆ.
ಮನೆಯಲ್ಲಿನ ಹೆಣ್ಣುಮಕ್ಕಳ ವಿವಾಹ ಕಾರ್ಯದಲ್ಲಿ ಹಣದ ತೊಂದರೆ ಬಾರದಂತೆ ಪ್ರತಿ ಶನಿವಾರ ಮನೆಯಲ್ಲಿ ಕೊಬ್ಬರಿಎಣ್ಣೆ ದೀಪ ಬೆಳಗಿ ತುಳಸಿ ದಳದ ಹಾರವನ್ನು ದೇವರಿಗೆ ಅರ್ಪಿಸಬೇಕು. ಇದರಿಂದ ಅಜೀವ ಪರ್ಯಂತ ಹಣದ ತೊಂದರೆ ಉಂಟಾಗುವುದಿಲ್ಲ. ಕೊಬ್ಬರಿ ಎಣ್ಣೆ ದೀಪವನ್ನು ಪಿ’ತೃ ಶ್ರಾ’ದ್ಧದ ಸಮಯದಲ್ಲಿ ಮನೆ ದೇವರ ಮುಂದೆ ಅಥವಾ ವಿಷ್ಣುಪಾದದ ಮುಂದೆ ದೀಪ ಬೆಳಗಿ ಕಾರ್ಯವನ್ನು ಮಾಡಬೇಕು. ಹೀಗೆ ಮಾಡಿದವರ ಮನೆಯಲ್ಲಿ ಪಿತೃದೋ’ಷ ಮಾಯವಾಗಿ ಉನ್ನತ ಲೋಕ ಪ್ರಾಪ್ತಿಯಾಗುತ್ತದೆ.
ಕೊಬ್ಬರಿಎಣ್ಣೆ ದೀಪದ ಶ್ರೇಷ್ಠತೆಯನ್ನು ಅರಿತು ಅದರಂತೆ ಪಾಲನೆ ಮಾಡಿದರೆ ಅದರ ಸಂಪೂರ್ಣ ಫಲ ನಿಮ್ಮದಾಗಲಿದೆ. ಯಾರಿಂದಲೋ ನಿಮಗೆ ಹಣ ಬರಬೇಕಾದ ವೇಳೆಯಲ್ಲಿ ತುಂಬಾ ತೊಂದರೆ ಕೊಡುವಾಗ. ಎಷ್ಟು ಕೇಳಿದರೂ ಹಣ ಮರಳಿಸದ ವೇಳೆಯಲ್ಲಿ ಈ ಉಪಾಯವನ್ನು ಮಾಡಿರಿ. ಕೊಬ್ಬರಿ ಎಣ್ಣೆ ದೀಪ ಹಚ್ಚಿ ವೆಂಕಟೇಶ್ವರಸ್ವಾಮಿಯ ಕವಚವನ್ನು ಓದಿ ಅವಲಕ್ಕಿ, ಬೆಲ್ಲ ಹಾಲು ನೈವೇದ್ಯ ಅರ್ಪಿಸಿ, ಮಕ್ಕಳಿಗೆ ಹಾಗೂ ಹಿರಿಯರಿಗೆ ಕೊಟ್ಟರೆ ಹಣ ಕೊಡಬೇಕಾದವರು ತಾವಾಗಿಯೇ ಬಂದು ಕ್ಷಮಾಪಣೆ ಕೇಳಿ ಹಣ ಕೊಟ್ಟು ಹೋಗುತ್ತಾರೆ.
ಗೃಹಪ್ರವೇಶ, ಹೋಮಗಳ, ದೇವತೆಗಳ ಆವಾಹನೆ ಕಾಲದಲ್ಲಿ, ದೇವಸ್ಥಾನದ ದೇವರ ಆವಾಹನೆಯ ಕಾಲದಲ್ಲಿ, ಪ್ರತ್ಯಕ್ಷ ದೇವತಾ ಪೂಜಾ ಕಾಲದಲ್ಲಿ, ಯಾರು ಕೊಬ್ಬರಿಎಣ್ಣೆ ದೀಪ ಹಚ್ಚುತ್ತಾರೋ ಅವರಿಗೆ ಮತ್ತು ಅವರ ಕುಟುಂಬಕ್ಕೆ ಜನ್ಮಜನ್ಮಾಂತರದಲ್ಲಿಯೂ ದೈವೀ ಸಂಸ್ಕಾರವು ಇದ್ದೇ ಇರುತ್ತದೆ. ಹರಿದ್ವಾರದಲ್ಲಿ ಸಂಜೆಯ ವೇಳೆಯಲ್ಲಿ ಗಂಗಾ ದೀಪವನ್ನು ಕೊಬ್ಬರಿಎಣ್ಣೆ ದೀಪ ಹಚ್ಚಿ ಆರತಿ ಮಾಡಿ ನದಿಯಲ್ಲಿ ಬಿಡಬೇಕು. ಹೀಗೆ ಮಾಡಿದವರಿಗೆ ಮತ್ತು ಅವರ ಕುಟುಂಬದವರಿಗೆ ಗಂಗಾ ಸ್ನಾನ ಮಾಡಿದ ಪೂರ್ಣ ಪ್ರತಿಫಲವು ದೊರೆಯುತ್ತದೆ.
ಮನಸ್ಸಿಚ್ಛೆ ಸಿದ್ಧಿಯಾಗಲು : ಕಾಶಿ ವಿಶ್ವನಾಥನ ದೇವಸ್ಥಾನದಲ್ಲಿ ಪ್ರತಿ ಸೋಮವಾರ ರಾತ್ರಿ 7 ಗಂಟೆಯ ವೇಳೆಯಲ್ಲಿ ಕೊಬ್ಬರಿಎಣ್ಣೆ ದೀಪವನ್ನು ಹಚ್ಚಿ ಶಿವನಿಗೆ ಧೂಪಾರತಿ ಮಾಡಬೇಕು. ಹೀಗೆ ಮಾಡಿದವರಿಗೆ ಅವರ ಮನಸ್ಸಿಚ್ಛೆ ಅತಿ ಬೇಗನೆ ಸಿದ್ಧಿಯಾಗುತ್ತದೆ. ಅಣ್ಣತಮ್ಮಂದಿರಲ್ಲಿ ಇರುವ ಕಲ’ಹಗಳು ದೂರಾಗಲು : ಯಮುನೋತ್ರಿಯಲ್ಲಿ, ಯಮುನಾ ಉಗಮ ಸ್ಥಾನದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ದೇವಿಗೆ ಧೂಪಾರತಿ ಮಾಡಬೇಕು. ನಂತರ ಸುಮಂಗಲಿಯರಿಗೆ ದಾನ ಬಟ್ಟೆ ಇನ್ನಿತರ ಸ್ತ್ರೀ ಸಂಬಂಧಿ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಯಾರು ಮಾಡುತ್ತಾರೋ, ಅವರಿಗೆ ಅಣ್ಣತಮ್ಮಂದಿರಲ್ಲಿ ಇರುವ ಕಲ’ಹಗಳು ದೂರವಾಗುತ್ತದೆ ಮತ್ತು ಪ್ರೀತಿ ವಾತ್ಸಲ್ಯಗಳಿಂದ ಬಾಳುತ್ತಾರೆ.