ಆರ್.ಸಿ.ಬಿ ಪ್ಲೇಯಿಂಗ್ ಇಲೆವೆನ್ ಪಕ್ಕಾ ಇದೆ.
ಹಲೋ ಪ್ರಿಯ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ. ಇನ್ನೇನು ಅಕ್ಟೋಬರ್ 19ರಿಂದ ಕ್ರಿಕೆಟ್ ಹಬ್ಬ ಶುರುವಾಗುತ್ತಿದೆ. ಇದೇನಪ್ಪ ಕ್ರಿಕೆಟ್ ಹಬ್ಬ ಅಂತಿದ್ದೀರಾ. ಅದೇ ಕಣ್ರೀ ಕ್ರಿಕೆಟ್ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್. ಈ ಆಟವನ್ನು ದೇಶ-ವಿದೇಶದಲ್ಲಿ ವೀಕ್ಷಣೆ ಮಾಡುತ್ತಾರೆ. ಈ ಸಮಯ ಬಂದರೆ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳು ಹುಚ್ಚೆದ್ದು ಕುಣಿಯುತ್ತಾರೆ. ತನ್ನ ನೆಚ್ಚಿನ ತಂಡದ ಗೆಲುವನ್ನಾ ಸಂಭ್ರಮಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ಅಲ್ಲಿ ಬಹಳಷ್ಟು ತಂಡಗಳು ಭಾಗವಹಿಸುತ್ತವೆ.
ಒಂದಕ್ಕಿಂತ ಒಂದು ತಂಡ ಹೆಚ್ಚು ನಮಗೆ ಬ’ಲಿಷ್ಟವಾಗಿ ಕಾಣುತ್ತವೆ. ಬ್ಯಾಟಿಂಗ್ ವಿಭಾಗದಲ್ಲಿ ಒಂದು ತಂಡ ಬೆಸ್ಟ್ ಅಂತ ಅನಿಸಿದರೆ ಮತ್ತೊಂದು ತಂಡ ಕ್ಷೇತ್ರ ರ’ಕ್ಷಣೆಯಲ್ಲಿ ಮತ್ತು ಬೋಲಿಂಗ್ವಿ ಭಾಗದಲ್ಲಿ ಉತ್ತಮ ಅನಿಸುತ್ತದೆ. ತನ್ನದೇ ಆದಂತಹ ಆಲೋಚನೆಗಳನ್ನು, ಯೋಜನೆಗಳನ್ನು ರೂಪಿಸಿಕೊಂಡು ಅನೇಕ ತಂಡಗಳು ಗೆಲ್ಲುತ್ತಾ ಬಂದಿದೆ. ಆದರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕರುನಾಡಿಗರ, ಕನ್ನಡಿಗರ ನೆಚ್ಚಿನ ತಂಡವಾಗಿರುವಂತಹ ಆರ್.ಸಿ.ಬಿ ಮಾತ್ರ ಇದುವರೆಗೂ ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿಲ್ಲ.
ಇದಕ್ಕೆ ಕಾರಣಗಳು ಹುಡುಕುತ್ತಾ ಹೋದರೆ ನಕರಾ’ತ್ಮಕ ಅಂಶಗಳು, ಅನೇಕ ವೈ’ಫಲ್ಯಗಳು ಹೀಗೆ ಅನೇಕ ಕಾರಣಗಳು ಸಿಗುತ್ತವೆ. ಒಂದು ಸೀಸನ್ನಲ್ಲಿ ಬ್ಯಾಟಿಂಗ್ನಲ್ಲಿ ಎ’ಡವಿದರೆ, ಮತ್ತೊಂದು ಸೀಸನ್ ಅಲ್ಲಿ ಬೌಲಿಂಗ್ನಲ್ಲಿ ಎ’ಡವುತ್ತಿದೆ. ಬ್ಯಾಟಿಂಗ್ನಲ್ಲಿ ತಂಡ ದು’ರ್ಬಲ ಅನಿಸಿದಾಗ ವಿದೇಶಿ ಅಥವಾ ನಮ್ಮ ದೇಶದ ಅನೇಕ ಉತ್ತಮ ಬ್ಯಾಟ್ಮ್ಯಾನ್’ಗಳನ್ನ ಕರೆತಂದರು ಗೆಲುತ್ತಿಲ್ಲ. ಕಪ್ ಗೆಲ್ಲಲೇಬೇಕು ಎಂದು ತಂಡ ತನ್ನ ತೆಕ್ಕೆಗೆ ಹೊಸ ಉತ್ತಮ ಆಟಗಾರರನ್ನಾ ಹಾಕಿಕೊಳ್ಳುತ್ತಲೇ ಇದೆ.
ಆದರೆ ಅದ್ಯಾಕೋ ಗೊತ್ತಿಲ್ಲ ನಮ್ಮ ಆರ್.ಸಿ.ಬಿ ಮಾತ್ರ ಈ ವರೆಗೆ ಒಂದು ಬಾರಿಯೂ ಕೂಡ ಕಪ್ಪನ್ನು ಗೆದ್ದಿಲ್ಲ. ಇದನ್ನು ನೋಡಿದರೆ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮಾಡಿರುವುದಂತೂ ಸುಳ್ಳಲ್ಲ. ಏನೇ ಇರಲಿ ಈ ಬಾರಿ ಆದರೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲೇಬೇಕೆಂದು ಅಭಿಮಾನಿಗಳ, ಆಟಗಾರರ ಕನಸಾಗಿದೆ. ಈ ಬಾರಿ ಕೂಡ ಹ’ರಾಜು ಪ್ರಕ್ರಿಯೆ ನಡೆಯಿತು. ಉತ್ತಮ ಕ್ರಿಕೆಟ್ ಆಟಗಾರರನ್ನು ಅನೇಕ ತಂಡಗಳು ತನ್ನ ತಂಡಕ್ಕೆ ಸೇರಿಸಿಕೊಂಡೆವು.
ಅದೇ ತರ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸ ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಆ ಆಟಗಾರರ ಪೈಕಿ ನಾವು ನೋಡುವುದಾದರೆ ಆರೋನ್ ಪಿಂಚ್ ಎನ್ನುವ ಆಸ್ಟ್ರೇಲಿಯಾದ ಓಪನರ್ ಬ್ಯಾಟ್ಮ್ಯಾನ್ ಆಗಿರುವಂತಹ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇದರ ಜೊತೆಗೆ ನಮ್ಮ ಕರ್ನಾಟಕದ ದೇವದತ್ ಪಡಿಕಲ್ ಅವರನ್ನು ಕೂಡ ನಮ್ಮ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ತರ ಅಂತರಾಷ್ಟ್ರೀಯ ಸೌತ್ ಆಫ್ರಿಕಾ ತಂಡದ ಪರವಾಗಿ ಆಡುವ ಕ್ರಿಸ್ ಮೋರಿಸ್ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟರ್, ಘಾ’ತಕ ವೇಗಿ ಆಗಿರುವಂತಹ ಸೌತ್ ಆಫ್ರಿಕಾದ ಬೌಲರ್ ಡೇನ್ ಸ್ಟೈನ್ ಅವರನ್ನು ಕೂಡ ನಮ್ಮ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶ್ರೀಲಂಕಾದಲ್ಲಿ ಎಡಗೈ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಗಿರುವಂತಹ ಇಸುರು ಉದಾನ ಅವರನ್ನು ಕೂಡ ನಮ್ಮ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ತರ ನಮ್ಮ ದೇಶಿ ಕ್ರಿಕೆಟ್’ನಲ್ಲಿ ಆಡುವಂತಹ ದೇವದತ್ ಪಡಿಕಲ್, ಶೆಹಜಾದ್, ಪವನ್ ದೇಶಪಾಂಡೆ ಅವರನ್ನು ಕೂಡ ನಮ್ಮ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಒಟ್ಟಾರೆ ಈ ಬಾರಿಯಾದರೂ ಆರ್ಸಿಬಿ ಕಪ್ ಗೆಲ್ಲಲಿ ಎನ್ನುವುದು ನಮ್ಮ ಆಶಯ. ಈ ಬಾರಿಯ ಸಂ’ಭವನೀಯ ಅಂತಿಮ ಹನ್ನೊಂದರ ಬಳಗದ ಆಟಗಾರರು ಇವರೇ ನೋಡಿ. ಆರೋನ್ ಪಿಂಚ್, ದೇವದತ್ ಪಡಿಕಲ್, ವಿರಾಟ್ ಕೊಹ್ಲಿ, ಎಬಿಡಿ, ಮೋಹಿನ್ ಅಲಿ, ಶಿವಂ ದುಬೆ, ಕ್ರಿಸ್ ಮೋರಿಸ್, ಸುಂದರ್, ಉಮೇಶ್, ಸೈನಿ,ಚಹಲ್. ನೀವು ಆರ್.ಸಿ.ಬಿ ಅಭಿಮಾನಿಯಾಗಿದ್ದರೆ ಈ ಲೇಖನ ಶೇರ್ ಮಾಡಿ, ಆರ್.ಸಿ.ಬಿ ಗೆ ಸ’ಪೋರ್ಟ್ ಮಾಡಿ.