ಸಿನಿಮಾ ಮಾಹಿತಿ

ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ಉಪ್ಪಿ. ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.

ಪ್ರಿಯ ಓದುಗರೆ ನಿಮಗೆಲ್ಲರಿಗೂ ನಮಸ್ಕಾರ. ನಿಮಗೆಲ್ಲರಿಗೂ ಕೂಡ ಇಂದು ಒಂದು ಸಿಹಿಸುದ್ದಿಯನ್ನು ಹೇಳ್ತಾ ಇದೀವಿ. ಆ ಸಿಹಿ ಸುದ್ದಿ ಏನಪ್ಪಾ ಅಂತ ಅನ್ಕೊಂಡ್ರಾ. ಆ ಸಿಹಿ ಸುದ್ದಿಯನ್ನು ನೀವು ಕೇಳಿದ್ರೆ ಹೌದಾ. ಇದು ನಿಜಾನಾ. ಅಂತ ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇನಪ್ಪಾ ಅನ್ಕೊಂಡ್ರಾ. ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ಉಪ್ಪಿ. ಅದೇನಂದ್ರೆ, ಇದೇ ತಿಂಗಳು 18ನೇ ತಾರೀಕು ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನ ಇದೆ. ಇದು ಅಭಿಮಾನಿಗಳು ಎಲ್ಲರಿಗೂ ಕೂಡ ಬಹಳ ಖುಷಿಯ ಸಂಗತಿ ಅಂತ ಹೇಳಬಹುದು. ಅದರಲ್ಲೂ ಉಪೇಂದ್ರನ ಅಭಿಮಾನಿಗಳು ಅಂದರೆ ಎಲ್ಲರಿಗಿಂತ ಅವರಂತೆಯೇ ಸ್ವಲ್ಪ ಭಿನ್ನವಾಗಿರುತ್ತಾರೆ.

ಇದು ಬೇರೆನೆ ಪ್ರಶ್ನೆ ಬಿಡಿ. ಅವರ ಪ್ರತಿ ಸಿನಿಮಾದಲ್ಲೂ ಕೂಡ ಅವರದ್ದೇ ಆದ ಆಲೋಚನೆಗಳನ್ನು, ಅವರ ಸಂದೇಶಗಳನ್ನು ಎಲ್ಲರಿಗೂ ಕೂಡ ಇಷ್ಟವಾಗುವಂತೆ ಮ’ನರಂಜನಾತ್ಮಕವಾಗಿ ಮಾಡುತ್ತಾರೆ. ಅವರ ನಿರ್ದೇಶನ ಸಿನೆಮಾ ಅಂದರೂ ಸಹಾ ಅದಕ್ಕಿಂತ ಹೆಚ್ಚು ಖುಷಿಯನ್ನು ನೀಡುತ್ತದೆ. ಅವರ ನಿರ್ದೇಶನದ ಪ್ರತಿ ಸಿನಿಮಾ ಕೂಡ ವಿಶೇಷತೆಗಳನ್ನ ಸಹಜವಾಗಿ ಹೊಂದಿರುತ್ತದೆ. ಚಂದನವನದ ಅತ್ಯಂತ ಉತ್ತಮ ನಿರ್ದೇಶಕರು ನಮ್ಮ ಉಪ್ಪಿ ಅವರು ಅಂದ್ರೆ ಅತಿಶಯೋಕ್ತಿಯಾಗಲಾರದು.

ಈಗ ಅವರ ನಿರ್ದೇಶನದ ವಿಷಯ ಯಾಕೆ ಹೇಳುತ್ತಿದ್ದಾರೆ ಅಂತ ಅಂದುಕೊಂಡ್ರಾ. ಅದೇ ನೋಡಿ ಸಿಹಿಸುದ್ದಿ ಅಂತ ಹೇಳಿದ್ದು, ನಿಜ ಖಂಡಿತ ಸತ್ಯ. ಈಗ ಪ್ರಸ್ತುತ ಕಬ್ಜ, ಬುದ್ಧಿವಂತ-2 ಹೀಗೆ ಅನೇಕ ಸಿನಿಮಾಗಳಲ್ಲಿ ಸದ್ಯ ಅವರು ಕಾರ್ಯನಿರತವಾಗಿದ್ದಾರೆ. ಈಗ ಅವರದೇ ಆದಂತಹ ಪ್ರಜಾಕೀಯ ಅಂತ ಪ’ಕ್ಷ ಕಟ್ಟಿಕೊಂಡು ರಾಜಕೀಯ ಸಿದ್ದಾಂತವನ್ನು ಕೂಡ ಅವರು ಹೇಳ ಹೊರಟಿದ್ದಾರೆ. ಉಪ್ಪಿ ಅಂದ್ರೆ ವಿಶೇಷ. ಅವರ ಪ್ರಜಾಕೀಯ ಪಕ್ಷದ ಸಿದ್ದಾಂತ ಕೇಳಿಯೇ ಎಷ್ಟು ಜನ ದಂ’ಗಾಗಿ ಹೋಗಿದ್ದರು. ಇವರ ನಿರ್ದೇಶನದ ಓಂ ಸಿನಿಮಾವು ಕೂಡ ಇತ್ತೀಚೆಗಷ್ಟೇ 25ವರ್ಷಗಳ ಸಂಭ್ರಮಾಚರಣೆಯನ್ನು ಪಟ್ಟಿತ್ತು.

ಮೊನ್ನೆ ಆಷ್ಟೇ ಉಪೇಂದ್ರ ಅವರು ಫೇಸ್ಬುಕ್ ಮೂಲಕ ಲೈವ್ ಬಂದಿದ್ದರು. ಪ್ರತಿ ವರ್ಷವೂ ಕೂಡ ನೀವು ನನ್ನ ಶುಭಾಶಯವನ್ನು ಹೇಳಲಿಕ್ಕೆ, ನನ್ನ ಮನೆಗೆ ಬರ್ತಾ ಇದ್ರಿ ಆದರೆ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ನೀವೆಲ್ಲರೂ ಪ್ರತಿವರ್ಷ ನನ್ನ ಹುಟ್ಟುಹಬ್ಬಕ್ಕೆ ಮನೆ ಹತ್ತಿರ ಬಂದು ನನ್ನ ಹುಟ್ಟು ಹಬ್ಬವನ್ನು ನಿಮ್ಮ ಹುಟ್ಟುಹಬ್ಬದಂತೆ ಸಂಭ್ರಮಾಚರಣೆ ಮಾಡುತ್ತಿದ್ದೀರಿ. ಪೋಸ್ಟರ್ಗಳನ್ನು ಕಟ್ಟುತ್ತಿದ್ದೀರಿ. ಆದರೆ ಈ ಬಾರಿ ಕೋ’ರೊನಾ ಕಾರಣದಿಂದ ಸಂಭ್ರಮಾಚರಣೆ ಬೇಡ ಎಂದು ಸಂದೇಶವನ್ನು ವಿಡಿಯೋದಲ್ಲಿ ಹೇಳಿದರು.

ನಾಲ್ಕು ದಿನಗಳ ಕಾಲ ಮನೆಯಲ್ಲಿ ಇರುವುದಿಲ್ಲ. ನಾನು ಯಾವುದೋ ಒಂದು ಸ್ಥಳಕ್ಕೆ ಹೋಗುತ್ತಿದ್ದೇನೆ. ಹಾಗಾಗಿ ನೀವು ಇಲ್ಲಿಗೆ ಬಂದು ಕಾಯುವುದು ಬೇಡ. ಯಾರೆಲ್ಲಾ ಶುಭಾಶಯ ಕೋರುತ್ತಿರುವಿರೋ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ನಿಮಗೆಲ್ಲರಿಗೂ ಕೂಡ ಒಂದು ಸಿಹಿಸುದ್ದಿಯನ್ನು ಈಗ ಹೇಳ್ತೀನಿ. ನಿಮಗೆ ಏನಾದರೂ ನಾನು ನಿಮ್ಮ ಶುಭಾಶಯಗಳಿಗೆ ಪ್ರತಿಯಾಗಿ ಧನ್ಯವಾದಗಳನ್ನು ಹೇಳದಿದ್ದರೇ ಕ್ಷಮಿಸಿ. ಎಲ್ಲರಿಗೂ ಕೂಡ ಧನ್ಯವಾದಗಳನ್ನು ಈ ಮೂಲಕವೇ ಹೇಳುತ್ತೇನೆ ಎಂದರು.

ಇದರ ಜೊತೆಗೆ ಅವರು ವಿಶೇಷವಾಗಿ ಅಭಿಮಾನಿಗಳಿಗೆ ಈ ವರ್ಷ ನಾನೇ ಒಂದು ವಿಶೇಷವಾದ ಗುಡ್ ನ್ಯೂಸ್ ಕೊಡ್ತಾ ಇದೀನಿ. ಅದೇನು ಗುಡ್ ನ್ಯೂಸ್ ಅಂದ್ರೆ “ನಾನು ಸಿನೆಮಾವನ್ನು ನಿರ್ದೇಶನ ಮಾಡುತ್ತಿರುವೆ” ಎಂದು ಹೇಳಿದರು. ನಿರ್ದೇಶನ ಮಾಡುತ್ತಿರುವಂತಹ ಸಿನಿಮಾದ ಎಲ್ಲಾ ವಿಷಯಗಳನ್ನು ಅತಿ ಶೀಘ್ರದಲ್ಲಿಯೇ ನಿಮ್ಮೆಲ್ಲರ ಬಳಿಯೂ ಕೂಡ ನಾನು ಹಂಚಿಕೊಳ್ಳುತ್ತೇನೆ. ಒಟ್ಟಾರೆ ನಿರ್ದೇಶನ ಮಾಡುವುದಂತೂ ಖಚಿತ.

ಹಾಗೆಯೇ ಇದದೇ ಖುಷಿಯಲ್ಲಿ ಅತೀ ನಿರೀಕ್ಷಿತ ಆರ್. ಚಂದ್ರು ಅವರ ನಿರ್ದೇಶನದ ಸಿನಿಮಾ “ಕಬ್ಜ” ಸಿನೆಮಾದ ಟ್ರೈಲರ್ ಬಿಡುತ್ತಿದ್ದೇವೆ. ಅದನ್ನು ನೋಡಿ ಹರಸಿ ಹಾರೈಸಿ ಎಂದು ಕೂಡ ಹೇಳಿದರು. ಒಟ್ಟಾರೆಯಾಗಿ ಅವರು ಎರಡು ತುಂಬಾ ಸಂತೋಷವಾದ ವಿಷಯಗಳನ್ನು ಅಭಿಮಾನಿಗೆ ಹೇಳಿದರು. ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ಉಪ್ಪಿ. ನೀವು ಉಪೇಂದ್ರ ಅವರ ಅಭಿಮಾನಿಯಾಗಿದ್ದರೆ ಈ ಲೇಖನ ಹಂಚಿ. ಮತ್ತಷ್ಟು ಹೆಚ್ಚಿನ ಉಪ್ಡೇಟ್ಸ್ಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ. ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *