ಆರೋಗ್ಯ ಮಾಹಿತಿ

ಕೊ’ರೋನಾದಿಂದ ದೂರವಿರಲು ಈ ಮೂರು ವಸ್ತುವನ್ನು ಹೀಗೆಯೇ ಬಳಸಿ.

ಕೊರೋನಾ ಸಮಯದಲ್ಲಿ ತುಳಸಿ, ಬೇವು ಹಾಗು ಪುದೀನಾ ಮಹತ್ವ ತಿಳಿಯುವುದು ಅನಿವಾರ್ಯ. ಕೆಮ್ಮು ಹೆಚ್ಚಾಗಿದ್ದರೆ : ಜ್ವ’ರದಿಂದ ಕೂಡಿದ ಕೆಮ್ಮಿಗೆ ತುಳಸಿ ರಸದಲ್ಲಿ ಕಾಳುಮೆಣಸಿನ ಚೂರ್ಣವನ್ನು ಸೇರಿಸಿ ಕುಡಿಯುವುದರಿಂದ ಕೆಮ್ಮು ಗುಣವಾಗುತ್ತದೆ. ಮೈಕೈ ನೋವು : ಒಂದು ಲೋಟ ನೀರಿನಲ್ಲಿ ಹತ್ತು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಚೆನ್ನಾಗಿ ಕುದ್ದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳಬೇಕು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯಬೇಕು. ಮೈ ಕೈ ನೋ’ವು ಕಡಿಮೆಯಾಗುವವರೆಗೂ ಪ್ರತಿದಿನ ಈ ಕಷಾಯವನ್ನು ಬಳಸಬಹುದು. ಇದರ ಜೊತೆಗೆ ಅರ್ಧ ಗ್ರಾಂ ದಾಲ್ಚಿನ್ನಿ ಪುಡಿಯನ್ನು ಒಂದು ಟೀ ಚಮಚ ಜೇನು ತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ನೋವು ಬೇಗ ಗುಣವಾಗುತ್ತದೆ.

ಕಫ : ಕಫದ ಸಮಸ್ಯೆಗಳಿಗೆ ತುಳಸಿ ಹೂಗಳನ್ನು ಈರುಳ್ಳಿ ರಸ, ಶುಂಠಿ ರಸ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಬೇಗ ಗುಣವಾಗುತ್ತದೆ. ಅಸ್ವಸ್ಥತೆ : ತುಳಸಿ ಸೊಪ್ಪಿನ ರಸದ ಕಷಾಯ ತಯಾರಿಸಿ ದಿನಕ್ಕೆ 3 ಬಾರಿ ಸೇವಿಸುವುದರಿಂದ ಬೆಳಗ್ಗೆ ಎದ್ದಾಗ ಉಂಟಾಗುವ ಅಸ್ವಸ್ಥತೆ ದೂರವಾಗುತ್ತದೆ. ಜ್ವರ : ಮ’ಲೇರಿಯಾ ಜ್ವ’ರಕ್ಕೆ ಕೃಷ್ಣ ತುಳಸಿ ಸೊಪ್ಪಿನ ರಸವನ್ನು ತೆಗೆದು ಮೈಗೆ ತಿಕ್ಕಿ ಮಾಲೀಶು ಮಾಡುವುದರಿಂದ ಚಳಿ ನಿಲ್ಲುತ್ತದೆ. ಹಾಗೂ ತುಳಸಿ ರಸವನ್ನು ಕಾಳುಮೆಣಸಿನ ಚೂರ್ಣದೊಂದಿಗೆ ಸೇರಿಸಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.

ಚೇಳಿನ ವಿ’ಷ/ಕಿವಿಯಲ್ಲಿ ಹುಣ್ಣು : ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತೆಗೆದು ಚೇಳು ಕುಟುಕಿದ ಜಾಗಕ್ಕೆ ಲೇಪಿಸಬೇಕು. ಇದರಿಂದ ಚೇಳಿನ ವಿಷ ಇಳಿದುಹೋಗುತ್ತದೆ. ಕಿವಿಯೊಳಗೆ ಹುಣ್ಣು ಉಂಟಾಗಿದ್ದರೆ ತುಳಸಿ ಎಲೆಯ ರಸವನ್ನು ತೆಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದರಿಂದ ಶೀಘ್ರವೇ ಶಮನವಾಗುತ್ತದೆ. ಸೀನು : ಬೇವಿನ ಸೊಪ್ಪಿನ ರಸ ಹಿಂಡಿ ಅದರ ಹನಿಗಳನ್ನು ಮೂಗಿನ ಹೊಳ್ಳೆಗಳಿಗೆ ಬಿಟ್ಟರೆ ಅತಿಯಾದ ಸೀನು ಶಮನವಾಗುತ್ತದೆ. ವಾಕರಿಕೆ : ಬೇವಿನ ಸೊಪ್ಪನ್ನು ಜ’ಜ್ಜಿ ರಸ ತೆಗೆದು ಅದಕ್ಕೆ ನಿಂಬೆರಸ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ವಾಕರಿಕೆ ಕಡಿಮೆಯಾಗುತ್ತದೆ.

ಗಂಟಲು ನೋವು : ಬೇವಿನ ಸೊಪ್ಪಿನ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಬಿಸಿಮಾಡಿ ಗಂಟಲಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸಿದರೆ ಗಂಟಲು ಹುಣ್ಣು ವಾಸಿಯಾಗುತ್ತದೆ. ಕಿವಿನೋವು : ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಹಬೆ ಹೊರಡುತ್ತಿರುವಾಗ ಆ ಹಬೆಯನ್ನು ಕಿವಿಗೆ ಹಾಯಿಸಿದರೆ ಕಿವಿನೋವು ಕಡಿಮೆಯಾಗುತ್ತದೆ. ಗಂಟಲಿನ ಸಮಸ್ಯೆ/ಅಜೀರ್ಣ/ನೆಗಡಿ : ಪುದಿನ ಸೊಪ್ಪಿನ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ಒಡೆದಿರುವುದು ಶೀಘ್ರವೇ ಗುಣವಾಗುತ್ತದೆ. ಅಜೀರ್ಣ, ಹೊಟ್ಟೆನೋವು, ಹೊಟ್ಟೆ ಉಬ್ಬರ, ನೆಗಡಿ ಇದ್ದರೆ ಪುದಿನ ಸೊಪ್ಪಿನ ಟೀ ತಯಾರಿಸಿ ದಿನಕ್ಕೆರಡು ಬಾರಿ ಕುಡಿದರೆ ಬೇಗ ಗುಣವಾಗುತ್ತದೆ.

ಅರುಚಿ : ಪುದಿನವನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಅರುಚಿ ಉಂಟಾದಾಗ ಬೆಳಗ್ಗೆ ಮತ್ತು ರಾತ್ರಿ ಕಾಲದಲ್ಲಿ ಕಾಲು ಚಮಚ ಪುಡಿಯನ್ನು ಅರ್ಧ ಕಪ್ಪು ಬಿಸಿ ನೀರಿಗೆ ಸೇರಿಸಿ ಒಂದೆರಡು ದಿನ ಕುಡಿಯುವುದರಿಂದ ಆಹಾರ ಜೀರ್ಣವಾಗುತ್ತದೆ. ಆಹಾರ ಸೇವಿಸಲು ಬಾಯಿಗೆ ರುಚಿ ಉಂಟಾಗುತ್ತದೆ.ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *