ಆಪ್ತರಕ್ಷಕದ ನಟಿಯ ಈಗಿನ ಜೀವನ ಶೈಲಿ ಹೇಗಿದೆ ನೋಡಿ.
ವಿಷ್ಣುವರ್ಧನ್ ಅವರ ಪ್ರಖ್ಯಾತ ಹಾಗೂ ಕೊನೆಯ ಸಿನಿಮಾ ಆಪ್ತರಕ್ಷಕ ಚಿತ್ರದಲ್ಲಿ ಹುಚ್ಚಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಗುಣಮುಖರಾಗುವ ಪಾತ್ರವನ್ನು ಮಾಡಿದ್ದು ಕನ್ನಡದ ಖ್ಯಾತ ನಟಿ ಲಕ್ಷ್ಮಿ ಗೋಪಾಲಸ್ವಾಮಿ. ಲಕ್ಷ್ಮಿ ಗೋಪಾಲಸ್ವಾಮಿ ಅವರು ಹುಟ್ಟಿದ್ದು 1970 ರ ಜನವರಿ ಏಳರಂದು. ಈಕೆ ಹುಟ್ಟಿದ್ದು ಗೋಪಾಲಸ್ವಾಮಿ ಹಾಗೂ ಉಮಾ ಗೋಪಾಲಸ್ವಾಮಿ ಎಂಬ ದಂಪತಿಗೆ. ಈಕೆಯ ತಾಯಿ ಸಂಗೀತದಲ್ಲಿ ವಿದ್ವತ್ ಕಲಿಸಿದ್ದರಿಂದ ಈಕೆಯನ್ನು ಸಂಗೀತ ಹಾಗೂ ಭರತನಾಟ್ಯಕ್ಕೆ ಪ್ರೇರೇಪಿಸಿದ ಮೊದಲ ಗುರು ಈಕೆಯ ತಾಯಿ.
ಮೂಲತಹ ಕನ್ನಡತಿಯಾದರೂ ಈಕೆ ಹೆಚ್ಚು ಕಾಣಿಸಿಕೊಂಡಿರುವುದು ಮಲಯಾಳಂ ಚಿತ್ರಗಳಲ್ಲಿ. 2000 ನೇ ಇಸ್ವಿಯಲ್ಲಿ ಲೋಹಿತ ದಾಸ್ ಅವರ ನಿರ್ದೇಶನದ ಮಲಯಾಳಂ ಚಿತ್ರ ಆರ್ಯನಾಂಗಳುಡೇ ವೀಡು ಎಂಬ ಚಿತ್ರದಲ್ಲಿ ನಟಿಸಿದ ಲಕ್ಷ್ಮಿ ಗೋಪಾಲಸ್ವಾಮಿ ತನ್ನ ಮೊದಲ ಚಿತ್ರಕ್ಕೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿ ಅವರಿಗೆ 2007 ನೇ ಇಸವಿಯಲ್ಲಿ ದೊರಕಿತು. ನಂತರ ಮತ್ತೊಮ್ಮೆ ತನಿಯೆ ಎಂಬ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕೇರಳ ಸರ್ಕಾರದಿಂದ ಮತ್ತೊಮ್ಮೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತನಿಯೆ ಚಿತ್ರಕ್ಕೆ ಅಟ್ಲಾಸ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ನಂತರ 2010 ರಲ್ಲಿ ಪಿ ವಾಸು ಅವರ ನಿರ್ದೇಶನದ ಆಪ್ತರಕ್ಷಕ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ನಟಿಸುವುದಕ್ಕೆ ಈಕೆಗೆ ಪಾತ್ರವು ದೊರಕಿತು. ಮೂಲತಹ ನೃತ್ಯಗಾರ್ತಿಯಾಗಿರುವ ಈಕೆಗೆ ಈ ಪಾತ್ರವು ಸಲೀಸಾಗಿಯೇ ಒಪ್ಪುವಂತಿತ್ತು. ಸತತ 35 ವಾರಗಳು ಓಡಿದ ಈ ಚಿತ್ರ ಆಕೆಗೆ ಮೆಗಾಹಿಟ್ ಅನ್ನು ತಂದುಕೊಟ್ಟಿತು. ವಿಷ್ಣು ದಾದಾ ಅವರ ಜೊತೆ ನಟಿಸುತ್ತಿರುವುದಕ್ಕೆ ನನಗೆ ಸಂಪೂರ್ಣ ತೃಪ್ತಿ ಇದೆ. ಈ ಚಿತ್ರದಿಂದ ನನಗೆ ದೊರೆತಿರುವ ರೆಸ್ಪಾನ್ಸ್ ಇನ್ನೆಲ್ಲೂ ದೊರೆತಿಲ್ಲ ಎಂದು ಹೇಳಿದ್ದಾರೆ.
ತಮಿಳಿನ ಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಕೂಡ ಈಕೆಯು ನಟಿಸಿದ್ದಾರೆ. ಆಕೆಯ ಮಲಯಾಳಂ ಚಿತ್ರಗಳಿಗೆ ಬಂದ ಪ್ರಶಂಸೆಗೆ ಆಕೆಗೆ ಕನ್ನಡದಲ್ಲಿ ಹಲವಾರು ಚಿತ್ರಗಳನ್ನು ಆಫರ್ ಮಾಡಲಾಗಿದೆ. ನೃತ್ಯವು ನನಗೆ ಮೊದಲ ಪ್ರಾಮುಖ್ಯತೆ ಎಂದು ಹೇಳುವ ಲಕ್ಷ್ಮಿಯವರು, ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ಸ್ ಪ್ರಶಸ್ತಿ, ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕೇವಲ ಆಪ್ತರಕ್ಷಕ ಮಾತ್ರವಲ್ಲದೆ ವಿಷ್ಣುಸೇನಾ, ನಮ್ಮೆಜಮಾನ್ರು, ವಿದಾಯ, ಅಲ್ಲಮ ಹೀಗೆ ಕನ್ನಡ ಸೇರಿ ಸರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಈಕೆ ನಟಿಸಿದ್ದಾರೆ. ಮುಖ್ಯವಾಗಿ ಲಕ್ಷ್ಮಿ ಗೋಪಾಲಸ್ವಾಮಿಯವರು ಕನ್ನಡದ ಪ್ರಖ್ಯಾತ ಗಾಯಕಿ ನಂದಿತಾ ಅವರ ಸಂಬಂಧಿಯಾಗಿದ್ದು, ಇಬ್ಬರೂ ಸಹ ಸೋದರಿ ಸಂಬಂಧಿಯಾಗಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಮನೆ ಹೊಂದಿರುವ ಲಕ್ಷ್ಮಿ ಗೋಪಾಲಸ್ವಾಮಿಯವರು ತಂದೆ-ತಾಯಿಯೊಂದಿಗೆ ಆರಾಮವಾಗಿ ಬಿಡುವಿನ ಸಮಯದಲ್ಲಿ ಕಾಲಕಳೆಯುತ್ತಾರೆ.
ಮನೆಯ ಒಂದು ಭಾಗ ಪೂರ್ತಿ ನೃತ್ಯ ಶಾಲೆಗೆ ಮೀಸಲಾಗಿದ್ದು ಮಿಕ್ಕಂತೆ ಅದ್ಭುತವಾಗಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಪ್ರತಿದಿನವೂ ಮನೆಗೆ ಮಾವಳ್ಳಿ ಟಿಫನ್ ಸೆಂಟರ್ ನಿಂದ ಊಟ ತಿಂಡಿಯೂ ಬರುತ್ತದೆ. ತನ್ನ ಅಭಿನಯದಿಂದ ಮಾತ್ರವಲ್ಲದೆ ಅಮೋಘ ನೃತ್ಯಾಭ್ಯಾಸ ದಿಂದ ದೇಶ-ವಿದೇಶಗಳಲ್ಲಿ ಹಾಗೂ ಭಾರತದ ಹಲವಾರು ರಾಜ್ಯಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ಲಕ್ಷ್ಮಿ ಗೋಪಾಲಸ್ವಾಮಿ ಅವರು ನಮ್ಮ ಮಣ್ಣಿನ ಮಗಳು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಇದು ಆಪ್ತರಕ್ಷಕ ಚಿತ್ರದ ನಟಿಯ ಜೀವನ ಶೈಲಿ.