ಆನ್ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕ’ದ್ದ ಬಾಲಕ. ಪೊ’ಲೀಸರು ಮಾಡಿದ್ದೇನು ಗೊತ್ತಾ.
ದೇಶದಾದ್ಯಂತ ಕೊ’ರೋನಾ ಮಹಾಮಾ’ರಿಯು ತನ್ನ ಕೆನ್ನಾ’ಲಿಗೆಯನ್ನು ಚಾಚುತ್ತಾ ಸಾವಿರಾರು ಜನರ ಜೀವನವನ್ನು ಕಸಿದುಕೊಂಡಿದೆ. ಅಷ್ಟೇ ಅಲ್ಲದೆ ಇದೇ ವರ್ಷದ ಮಾರ್ಚ್ ತಿಂಗಳ ಮೊದಲಿನಿಂದಲೂ ಕೋ’ರೋನ ಹರಡುವ ಭೀ’ತಿಯಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಇನ್ನು ಮುಂದೆ ಹೇಗೆ ಎನ್ನುವಂತಹ ಪ್ರಶ್ನೆ ಎದುರಾಗಿದೆ. ಶಾಲಾ ಕಾಲೇಜುಗಳನ್ನು ಈಗಲೇ ತೆರೆದರೆ ಇನ್ನೂ ಹೆಚ್ಚಾಗಿ ಕೋ’ರೋನ ಹರಡುವ ಸಾಧ್ಯತೆಯಿದ್ದು ಈಗಲೇ ಶಾಲಾ-ಕಾಲೇಜು ತರುವುದು ಬೇಡ ಎಂದು ನಿರ್ಧರಿಸಲಾಗಿದೆ.
ಆದರೆ ಹಲವಾರು ಪ್ರತಿಷ್ಠಿತ ಶಾಲೆಗಳು ಆನ್ಲೈನ್ ಕ್ಲಾಸ್ ಮಾಡುವ ನಿರ್ಧಾರ ಮಾಡಿದ್ದು ಶ್ರೀಮಂತರ ಮಕ್ಕಳಿಗೆ ಮಾತ್ರ ಈ ಸೌಲಭ್ಯವು ದೊರಕುವುದು ಸುಲಭ. ಆದರೆ ಬಡವರ ಮಕ್ಕಳಿಗೆ ಆಂಡ್ರಾಯ್ಡ್ ಮೊಬೈಲ್ ಖರೀದಿಸುವುದು ಅಸಾಧ್ಯವಾದ ಮಾತು. ಅಂತೆಯೇ ತಮಿಳುನಾಡಿನ ಚೆನ್ನೈಯಲ್ಲಿ ಒಬ್ಬ ಬಡ ವಿದ್ಯಾರ್ಥಿಗೆ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲನ್ನು ಖರೀದಿಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅವನು ಹೇಗಾದರೂ ಮಾಡಿ ವಿದ್ಯೆ ಕಲಿಯಬೇಕೆಂದು ಕ’ಳ್ಳತನ ಮಾಡುವ ಯೋಜನೆಗೆ ಬಂದಿದ್ದು ಮೊಬೈಲ್ ಒಂದನ್ನು ಕ’ದ್ದುಬಿಟ್ಟಿದ್ದಾನೆ.
13 ವರ್ಷದ ಬಾಲಕ ಕಾರ್ಪೊರೇಷನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆತನ ತಂದೆಯು ಒಂದು ಬಿಸ್ಕತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೂ ತಾಯಿಯು ಪ್ರತಿದಿನವೂ ಮನೆಮನೆಯ ಕೆಲಸಗಳನ್ನು ಮಾಡುತ್ತಿದ್ದರು. ಈ ಮೂಲಕ ತಮ್ಮ ಪ್ರತಿದಿನದ ಪುಟ್ಟ ಜೀವನ ಸಾಗುತ್ತಿತ್ತು. ಆದರೆ ಶಿಕ್ಷಕರು ಅವನಿಗೆ ಆನ್ಲೈನ್ ಕ್ಲಾಸಿಗೆ ಹಾಜರಾಗುವುದಕ್ಕೆ ಬಲವಂತ ಮಾಡುತ್ತಿದ್ದರು. ಮೊದಲೇ ಕಡುಬಡತನ ಇದ್ದಿದ್ದರಿಂದ ಆತನಿಗೆ ಪೋಷಕರ ಕಡೆಯಿಂದ ಮೊಬೈಲ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಹಾಗಾಗಿ ಸ್ವಲ್ಪ ದಿನಗಳ ನಂತರ ಆತನ ಅಕ್ಕ ಪಕ್ಕದ ಮನೆಯಲ್ಲಿದ್ದ ವ್ಯಕ್ತಿಗಳು ಅವರ ಜೊತೆ ಕ’ಳ್ಳತನಕ್ಕೆ ಹೋದರೆ ಅವನಿಗೆ ಮೊಬೈಲನ್ನು ಕೊಡಿಸುವುದಾಗಿ ಆ’ಸೆ ತೋರಿಸಿದ್ದಾರೆ. ಏನಾದರೂ ಕ’ಳ್ಳತನ ನಡೆಸುವಾಗ ಸಿ’ಕ್ಕಿಹಾಕಿಕೊಂಡರೆ ಬಾಲಕನನ್ನು ಸಿ’ಕ್ಕಿಸುವ ಹುನ್ನಾರ ಆ ವ್ಯಕ್ತಿಗಳದಾಗಿತ್ತು. ಈ ಮುಗ್ಧ ಬಾಲಕನು ಅವರ ಮಾತುಗಳನ್ನು ನಂಬಿ ಅವನಿಗೆ ಮೊಬೈಲು ದೊರೆಯುತ್ತದೆ ಎಂಬ ಆಸೆಯಿಂದ ಕ’ಳ್ಳತನ ಮಾಡಲು ಹೋಗಿ ಪೊ’ಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆದರೆ ಬಾಲಕನು ತನ್ನ ಪರಿಸ್ಥಿತಿಯ ಬಗ್ಗೆ ಪರಿಪರಿಯಾಗಿ ಹೇಳಿಕೊಂಡು ಅತ್ತಿದ್ದರಿಂದ ಆತನಿಗೆ ಪೊಲೀಸರು ಒಂದು ಹೊಸ ಮೊಬೈಲ್ ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಆತನು ಕದ್ದಿದ್ದು ತಪ್ಪಾದರೂ ಕೂಡ ಆತನ ಉದ್ದೇಶ ಒಳ್ಳೆಯದಾದರಿಂದ ಪೊಲೀಸರು ಆತನಿಗೆ ಹೊಸ ಮೊಬೈಲ್ ಒಂದನ್ನು ಖರೀದಿಸಿ ಆತನ ಮುಂದಿನ ಓದಿಗೆ ನೆರವಾಗಿದ್ದಾರೆ. ಇದನ್ನು ಹಲವಾರು ಜನರು ಶ್ಲಾಘಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ಪ್ರಖ್ಯಾತ ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಕೂಡ ಇದರ ಬಗ್ಗೆ ವಿಚಾರ ಬಂದಿದೆ.