ಆರ್.ಸಿ.ಬಿ ಮೊದಲ ಪಂದ್ಯ ನೋಡಿ ನಿರ್ದೇಶಕ ಸಿಂಪಲ್ ಸುನಿ ಎನ್ ಹೇಳಿದ್ದಾರೆ ನೋಡಿ.
ನಮಸ್ತೇ ಪ್ರಿಯ ಓದುಗರೇ. ನೀವೆಲ್ಲರೂ ಐ.ಪಿ.ಎಲ್ ನೋಡ್ತಾ ಇದ್ದೀರಾ ಅಂದುಕೊಳ್ತೀವಿ. ಮೊನ್ನೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸಸ್ ಹೈದರಾಬಾದ್ ತಂಡದ ವಿರುದ್ಧ ಈ ಆವೃತ್ತಿಯ ಮೊದಲ ಪಂದ್ಯವನ್ನು ಆಡಿತು. ಪ್ರತಿ ಬಾರಿಯಂತೆ ಈ ಬಾರಿಯು ಸಾಕಷ್ಟು ನಿರೀಕ್ಷೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಂಬಲಿಗರು, ಅಭಿಮಾನಿಗಳು, ಕೋಚ್, ಆಟಗಾರರು ಹೊಂದಿದ್ದಾರೆ. ಈ ಬಾರಿ ಏನಾಗುತ್ತದೆಯೋ ಎನ್ನುವ ಕೌತುಕತೆಯೂ ಹೆಚ್ಚಾಗಿದೆ.
ಆದರೆ ಮೊದಲ ಪಂದ್ಯವನ್ನು ವೀಕ್ಷಿಸಿದ ಪ್ರತಿಯೋರ್ವ ಆರ್.ಸಿ.ಬಿ ಅಭಿಮಾನಿಗಳು ಸದ್ಯ ಖುಷಿಯನ್ನು ಹೊರಹಾಕಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಕ್ಷೇತ್ರ ರಕ್ಷಣೆ ಹೀಗೆ ಎಲ್ಲಾ ವಿಷಯದಲ್ಲೂ ಉತ್ತಮ ತಂಡ ಎಂದೆನಿಸುತ್ತದೆ. ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕರಾಗಿ ದೇವದತ್ತ್ ಪಡಿಕ್ಕಲ್ ಮತ್ತು ಆರೋನ್ ಅಮೋಘ ಆರಂಭ ತಂದು ಕೊಟ್ಟರು. ಅತ್ಯುತ್ತಮ ಜೊತೆಯಾಟವನ್ನು ಸಹಾ ಆಡಿದರು.
ಅದರಲ್ಲೂ ನಮ್ಮ ಕನ್ನಡದ ಪಡಿಕ್ಕಲ್ ಅದ್ಬುತ ಅರ್ಧ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಎಬಿಡಿ, ಪಿಂಚ್ ಕೂಡಾ ಉತ್ತಮ ಬ್ಯಾಟಿಂಗ್ ಆಡಿದರು. ಪಿಂಚ್ ಅವರು ದೇವದತ್ತ್ ಪಡಿಕ್ಕಲ್ ಅವರಿಗೆ ಸ್ಟ್ರೈಕ್ ಬದಲಾಯಿಸಿ ಕೊಡುತ್ತಾ ಜವಾಬ್ದಾರಿಯುತ, ತಾಳ್ಮೆಯುತ ಆಟವನ್ನು ಆಡಿದರು. ಎಬಿಡಿ ಕೂಡಾ ಅಮೋಘ ಆಟ ಆಡಿ ಭರ್ಜರಿ ಅರ್ಧಶತಕ ಬಾರಿಸಿದರು. ತಂಡ ಒಂದು ಪೈಪೋಟಿ ಸ್ಕೋರ್ ಕಲೆಹಾಕುವಲ್ಲಿ ಅವರ ಪಾತ್ರ ತುಂಬಾನೇ ಪ್ರಮುಖವಾಗಿತ್ತು ಎಂದು ಹೇಳಬಹುದು.
ಎಸ್.ಆರ್.ಎಚ್ ಕೂಡಾ ಉತ್ತಮ ಆಟ ಆಡಿದರು. ಡೇವಿಡ್ ವಾರ್ನರ್ ನ’ತದೃಷ್ಟದಿಂದ ರನ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇವರು ಔಟ್ ಅದ ಬಳಿಕ ಒಂದಾದ ಬ್ಯಾರಿಸ್ಟೋ ಮತ್ತು ಮನೀಶ್ ಪಾಂಡೆ ಉತ್ತಮ ಆಟವಾಡಿ ಪಂದ್ಯವನ್ನು ಪೂರ್ಣವಾಗಿ ಕಸಿಯಲು ಯತ್ನಿಸಿದರು. ಆದರೆ ಆರ್.ಸಿ.ಬಿಯಲ್ಲಿ ಚಹಲ್, ದುಬೆ ಅವರ ಉತ್ತಮ ಬೌಲಿಂಗ್ ಆಟವನ್ನು ಆಡಿದರು. ಈ ಪಂದ್ಯದಲ್ಲಿ ಚಹಲ್ 3 ವಿಕೆಟ್, ಶಿವಂ ದುಬೆ, ನವದೀಪ್ ಸೈನಿ ತಲಾ ಎರಡು ವಿಕೆಟ್ ಪಡೆದು ರೋಚಕ ಜಯವು ಬೆಂಗಳೂರಿನ ಪಾಲಾಗಲು ಕಾರಣವಾದರು.
ಈ ಪಂದ್ಯ ನೋಡಿದ ಚಂದನವನದ ಖ್ಯಾತ ನಿರ್ದೇಶಕ ಸಿಂಪನಲ್ ಸುನಿ ಅವರು ಎನ್ ಹೇಳಿದ್ರು ಎಂದು ನೋಡಲು ಮುನ್ನ ಈ ನಿರ್ದೇಶಕನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಬಜಾರ್, ಸಿಂಪಲಾಗ್ ಒಂದು ಲವ್ ಸ್ಟೋರಿ, ಚಮಕ್, ಬಹುಪಾರಾಕ್ ಹೀಗೆ ಒಂದಿಷ್ಟು ಒಳ್ಳೆಯ ಸಿನೆಮಾಗಳನ್ನು ಇವರು ನಿರ್ದೇಶಿಸಿದ್ದಾರೆ. ಸಿಂಪಲ್ ಸುನಿ ಅವರಿಗೆ ಕ್ರೀಡೆ ಎಂದರೆ ತುಂಬಾ ಇಷ್ಟ. ಅದರಲ್ಲೂ ಕಬ್ಬಡ್ಡಿ, ಕ್ರಿಕೆಟ್ ಅಂದ್ರೆ ಇವರಿಗೆ ತುಂಬಾನೇ ಇಷ್ಟ. ಇವರು ಆರ್.ಸಿ.ಬಿ ಯ ಪಕ್ಕಾ ಅಭಿಮಾನಿ ಆಗಿದ್ದಾರೆ. ಇವರು ಪದ್ಯ ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ದೇವರೆ ನಮ್ ಆರ್.ಸಿ.ಬಿ ಟೀಮ್ ನ ಕ್ಷಮಿಸಬಿಡಪ್ಪ. ಮೊದಲ ಮ್ಯಾಚ್ ನ ನಿನಗೆ ಕೊಡದೇ ಫ್ಯಾನ್ಸ್’ಗೆ ಅರ್ಪಿಸಿದ್ದಾರೆ. ಧನ್ಯೋಸ್ಮಿ. ಪಡಿಕ್ಕಳ್ : ಸೂಪರ್ಬ್ ಲೋಕಲ್. ಎ.ಬಿ.ಡಿ : ನೀವ್ ನಮ್ ದೇವ್ರು ಬಿಡಿ. ಚಾಹಲ್ : ಪುಲ್ ಕಮಾಲ್. ನವದೀಪ್ : ಕೀಪ್ ಇಟ್ ಅಪ್. ದುಬೆ : ಬ್ಯಾಟಿಂಗ್ ದ್ರಾಬೆ, ಬೌಲಿಂಗ್ ಗುಡ್ ಜಾಬೇ. ಕೊಹ್ಲಿ ಕ್ಯಾಪ್ಟನ್, ಫೈನಲಿ ವಿನ್. ಹ್ಯಾಷ್’ಟ್ಯಾಗ್ ಆರ್.ಸಿ.ಬಿ ಹೀಗೆ ಸಿಂಪಲ್ ಸುನಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಏನೇ ಇರಲಿ ಈ ಬಾರಿಯಾದರೂ ಆರ್.ಸಿ.ಬಿ ಕಪ್ ಗೆಲ್ಲಲಿ ಎಂಬುದೇ ನಮ್ಮ ಆಶಯ. ಆರ್.ಸಿ.ಬಿ ಅಭಿಮಾನಿಗಳೆಲ್ಲ ಇದನ್ನು ಶೇರ್ ಮಾಡಿ. ಈ ಸಲ ಕಪ್ ನಮ್ದೇ.