ಆರೋಗ್ಯ ಮಾಹಿತಿ

ನೆಗಡಿಯಿಂದ ತ್ವರಿತ ಮುಕ್ತಿಗಾಗಿ ಹೀಗೆ ಮಾಡಿ.

ಈಗಿನ ಕೊ’ರೋನಾ ಸಮಯದಲ್ಲಿ ನೆಗಡಿ ಕೊಡುವ ಉಪಟಳ ಬಹಳ ಹೆಚ್ಚು. ನಮಗೆ ಸಹಜವಾದ ಶೀತ ಬಂದರೂ ಸಹ ಕೊ’ರೋನಾ ಬಂದಿರಬಹುದೇನೋ ಎಂಬ ಭ’ಯ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಪ್ರಸ್ತುತ ವಾತಾವರಣವು ಸಹ ಶೀತಮಯವಾಗಿದೆ. ನೆಗಡಿಯಿಂದ ಮುಕ್ತಿಗಾಗಿ ಏನು ಮಾಡಿದರೆ ಪರಿಣಾಮಕಾರಿ ಎಂಬ ಯೋಚನೆ ಎಲ್ಲರಿಗೂ ಇರುತ್ತದೆ. ನೆಗಡಿಯ ಮುಕ್ತಿಗಾಗಿ ನಮ್ಮ ಆಯುರ್ವೇದದಲ್ಲಿ ಹಲವಾರು ನೈಸರ್ಗಿಕ ಚಿಕಿತ್ಸೆಗಳಿವೆ. ನೆಗಡಿಯಿಂದ ತ್ವರಿತ ಮುಕ್ತಿಗಾಗಿ ಹಲವಾರು ಮನೆಮದ್ದುಗಳು ಸಹ ಇವೆ. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಆರೈಕೆ ತೆಗೆದುಕೊಳ್ಳುವುದು ಬಹಳ ಅನಿವಾರ್ಯವಾಗಿದೆ.

ಹೆಚ್ಚು ತಣ್ಣಗಿರುವ ಪದಾರ್ಥಗಳನ್ನು ಸೇವಿಸಿದೇ, ಯಾವಾಗಲೂ ಬಿಸಿಯಾಗಿರುವ ಪದಾರ್ಥಗಳನ್ನು ಸೇವಿಸುವುದು ಎಲ್ಲರಿಗೂ ಒಳಿತು. ನೆಗಡಿಯು ಒಂದು ರೀತಿಯ ಅಂಟುರೋಗ ಎನ್ನಬಹುದು. ನೆಗಡಿಯು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು, ಮನೆಯಲ್ಲಿ ಇರುವವರನ್ನು ಕಾಡಿಸದೆ ಬಿಡುವುದಿಲ್ಲ. ನೆಗಡಿ ಬರಲು ಮುಖ್ಯ ಕಾರಣ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವುದು. ಹೀಗಾಗಿ ದೇಹದ ಶಕ್ತಿ ಕುಂಠಿತವಾಗಿ ನೆಗಡಿ ತುಂಬಾ ಉಪಟಳವನ್ನು ನೀಡುತ್ತದೆ.

ನೆಗಡಿಯಿಂದ ಪಾರಾಗಲು ಕೆಲವು ಸೂಚನೆಗಳು ಇಲ್ಲಿವೆ. ಮೂಲಂಗಿಯನ್ನು ನಾವೆಲ್ಲರೂ ಬಳಸುತ್ತಿರುತ್ತೇವೆ. ಶೀತದ ನಿವಾರಣೆಗೆ ಮೂಲಂಗಿಯನ್ನು ಹಸಿಯಾಗಿ ಅಥವಾ ಅಡುಗೆಯಲ್ಲಿ ಸೇರಿಸಿ ತಿನ್ನುವುದರಿಂದ ನೆಗಡಿಯನ್ನು ದೂರ ಮಾಡಬಹುದು. ಶುಂಠಿ ರಸದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ನೆಗಡಿಯ ಕಾಟವನ್ನು ತಪ್ಪಿಸಿಕೊಳ್ಳಬಹುದು. ಹಾಲಿಗೆ ಸ್ವಲ್ಪ ಅರಿಶಿಣ, ಬೆಲ್ಲ ಸೇರಿಸಿ ಕೆಂಪಗೆ ಕಾಯಿಸಿ ಕುಡಿಯಬೇಕು. ಇದರಿಂದ ನೆಗಡಿ ನಿವಾರಣೆ ಆಗುತ್ತದೆ. ನೆಗಡಿ ದೂರವಾಗಲು ಒಂದು ಲೋಟ ನೀರಿಗೆ ಸ್ವಲ್ಪ ದಾಲ್ಚಿನ್ನಿ ಚೂರ್ಣ, ಕಾಳುಮೆಣಸಿನ ಪುಡಿ ಎಲ್ಲವನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಕುದಿಸಬೇಕು. ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನೆಗಡಿ ದೂರ ಆಗುತ್ತದೆ.

ಮೆಣಸನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಕೊಳ್ಳಬೇಕು. ಅದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸಿ ದಿನವೂ ಸೇವಿಸುವುದರಿಂದ ನೆಗಡಿ ದೂರವಾಗುತ್ತದೆ. ನೆಗಡಿ ಅಂಟು ಕಾಯಿಲೆ. ಇದರ ಉಪಟಳವನ್ನು ಸಹಿಸುವುದು ತುಂಬಾ ಕಷ್ಟ ಸಾಧ್ಯ. ಕೆಂಡದ ಮೇಲೆ ಅರಿಶಿನ ಪುಡಿ ಹಾಕಿ ಅದರ ಹೊಗೆಯನ್ನು ಸೇವಿಸಿದರೆ ನೆಗಡಿ ಮಾಯವಾಗುತ್ತದೆ. ಬಿಸಿಯಾದ ಟೀ ಅನ್ನು ಮೊದಲು ತಯಾರಿಸಿಕೊಳ್ಳಬೇಕು. ಅದಕ್ಕೆ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ನೆಗಡಿ ದೂರವಾಗುತ್ತದೆ.

ದೊಡ್ಡಪತ್ರೆ, ತುಳಸಿ ಎಲೆಯ ರಸವನ್ನು ಸೇರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ನೆಕ್ಕುವುದರಿಂದ ನೆಗಡಿ ಕಡಿಮೆಯಾಗುತ್ತದೆ. ಮತ್ತೊಂದು ಸುಲಭವಾದ ಉಪಾಯವೆಂದರೆ ಪ್ರತಿದಿನ ಅಥವಾ ಆಗಾಗ ಶರೀರಕ್ಕೆ ಉಪ್ಪು ತಿಕ್ಕಿ ಸ್ನಾನ ಮಾಡುವುದರಿಂದ ನೆಗಡಿ ದೂರವಾಗುತ್ತದೆ. ಅದೇ ರೀತಿ ನಮ್ಮ ಸಹನೆಯು ಹೆಚ್ಚುತ್ತದೆ. ಪುದಿನ ಎಲೆಗಳಿಂದ ನೆಗಡಿಯನ್ನು ದೂರ ಮಾಡಬಹುದು. ಪುದೀನ ಎಲೆಗಳನ್ನು ಬಿಡಿಸಿಕೊಂಡು ಕುದಿಯುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದರ ಹೊಗೆಯನ್ನು ಮೂಗಿನ ಹೊಳ್ಳೆಗಳಿಂದ ಎಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಪುದಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ನೆಗಡಿಯನ್ನು ದೂರಮಾಡುತ್ತದೆ.

ನಾವೆಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶ ಒಂದಿದೆ. ಪುದಿನ ಎಲೆ, ಶುಂಠಿ, ದೊಡ್ಡಪತ್ರೆ ಮುಂತಾದ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಇದು ದೇಹವನ್ನು ಉಷ್ಣ ಗೊಳಿಸುವುದು. ಹಾಲು, ಕರಿಮೆಣಸು ಮುಂತಾದ ಪದಾರ್ಥಗಳಲ್ಲಿ ದೇಹವನ್ನು ಉಷ್ಣತೆಯ ಮಟ್ಟಕ್ಕೆ ತರುವ ಗುಣ ಇದೆ.
ಈ ಮಾಹಿತಿ ನಿಮಗೆಲ್ಲ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದೂ ಸಹ ಒಂದು ಪುಣ್ಯದ ಕೆಲಸ. ಹೆಚ್ಚಿನ ಉಪ್ಡೇಟ್ಸ್ ಗಳನ್ನು ಪಡೆಯಲು ನಮ್ಮ ಪೇಜ್ ಅನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *