ರಾಕ್ ಲೈನ್ ಸುಧಾಕರ್ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇನು ಗೊತ್ತಾ.
2020 ಈ ವರ್ಷ ನಮಗೆ ಅತ್ಯಂತ ಭೀ’ಕರವಾದ ವರ್ಷ, ಕ್ರೂ’ರವಾದಂತಹ ವರ್ಷ ಎನ್ನಬಹುದು. ನಾವು ಈಗಾಗಲೇ ಈ ಕೊ’ರೋನಾ ಭೀ’ತಿಯಿಂದ, ಭ’ಯದಿಂದ ಬದುಕುತ್ತಿದ್ದೇವೆ. ಅದೆಷ್ಟೋ ಜನರನ್ನು ನಾವು ಕೊ’ರೊನಾದಿಂದ ಕಳೆದುಕೊಂಡಿದ್ದೇವೆ. ಇನ್ನೂ ಕೂಡ ಔಷಧಿಯನ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಇನ್ನೂ ಕೂಡ ಉತ್ತಮ ಮಟ್ಟದ ಕೊ’ರೋನಾದ ಔಷಧಿ ಸಿಕ್ಕಿಲ್ಲ. ಈ ಕೋ’ರೊನಾ ಭೀ’ತಿ ಒಂದೆಡೆಯಾದರೆ, ಅದ್ಯಾಕೋ ಗೊತ್ತಿಲ್ಲ. ನಾವು ಚಂದನವನದ ಅನೇಕ ತಾರೆಯರನ್ನು ಈ ವರ್ಷ ಕಳೆದುಕೊಂಡೆವು.
ಅನೇಕ ಕಿರುತೆರೆ ನಟರನ್ನು, ಅನೇಕ ಹಿರಿತೆರೆ ನಟರನ್ನು ಹೀಗೆ ಅನೇಕ ನಟರನ್ನು ನಾವು ಕಳೆದುಕೊಂಡೆವು. ಈಗ ಪುನಃ ಅಂತದ್ದೇ ಒಂದು ದು’ರ್ಘಟನೆ ಸಂಭವಿಸಿದೆ ಅಂತ ಹೇಳಬಹುದು. ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ರಾಕ್‌ಲೈನ್ ಸುಧಾಕರ್ ಬನ್ನೇರುಘಟ್ಟ ರಸ್ತೆಯಲ್ಲಿ ‘ಶುಗರ್ ಲೆಸ್’ ಸಿನಿಮಾ ಚಿತ್ರೀಕರಣ ಮಾಡುತ್ತಿರುವಾಗಲೇ ಹೃದಯಾ’ಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಪುಷ್ಕರ್ ಮಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ‘ಶುಗರ್ ಲೆಸ್’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸುಧಾಕರ್ ಮೇಕಪ್ ಹಾಕಿಕೊಳ್ಳುತ್ತಿದ್ದಾಗ, ಕುಸಿದು ಬಿದ್ದಿದ್ದಾರೆ. ಸುಮಾರು 10 ಗಂಟೆಗೆ ನಿಧನರಾಗಿದ್ದಾರೆ ಎಂದು ಕೆಲ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಕಮಲನಗರ ನಿವಾಸಿಯಾಗಿದ್ದ ಸುಧಾಕರ್ ಎರಡು ತಿಂಗಳುಗಳ ಹಿಂದೆ ಕೊ’ರೋನಾ ಸೋಂಕಿನಿಂದ ಗುಣಮುಖರಾಗಿದ್ದರು. ದಿಗಂತ್ ನಟನೆಯ “ಪಂಚರಂಗಿ” ಸಿನೆಮಾದ ಮೂಲಕ ಚಿತ್ರರಂಗಕ್ಕೆ ಬಂದ ರಾಕ್ ಲೈನ್ ಸುಧಾಕರ್ ಅವರು ಇಲ್ಲಿಯವರೆಗೂ 200 ಸಿನೆಮಾಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದ ಸುಧಾಕರ್ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಪಂಚರಂಗಿ, ಅಧ್ಯಕ್ಷ, ಅಜಿತ್, ನಾ ಕೋಳಿಕೇರಂಗ.
ಅಲ್ಲದೇ ಅನೇಕ ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಇವರ ಸಾವಿನ ಕುರಿತು ಅನೇಕ ಜನ ಸಂತಾಪ ಸೂಚಿಸಿದ್ದಾರೆ. ಡಾಲಿ ಧನಂಜಯ್ ಅವರು ಪ್ರೀತಿಯ ಸುಬ್ಬಿ, ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳನ್ನು ತನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು. ಇಂತಿ ನಿನ್ನ ಪ್ರೀತಿಯ ಡಾಲಿ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಸಂತಾಪ ಸೂಚಿಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಸ್ಯ ಕಲಾವಿದರಲ್ಲೊಬರಾದ ರಾಕ್ ಲೈನ್ ಸುಧಾಕರ್ ರವರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಎಂದು ಸಂತಾಪ ಸೂಚಿಸಿದರು. ಹೀಗೆ ಅನೇಕ ತಾರೆಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಚಂದನವನದ ನಿರ್ದೇಶಕ ಸಿಂಪಲ್ ಸುನಿ ಅವರು ತಮ್ಮ ಟ್ವಿಟರ್ ಅಲ್ಲಿ 2020 ಯ ರೌ’ದ್ರಾವತಾರ ಮುಂದುವರೆದಿದೆ.
ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ರವರು ಇಂದು ಮೇಕಪ್ ಹಚ್ಚಿರುವಾಗಲೇ ಹೃ’ದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ. ಎಂದು ಬರೆದು ಸಂತಾಪ ಸೂಚಿಸಿದರು. ಇದು ಅತೀ ಕೆಟ್ಟ ಪರಮ ದರಿ’ದ್ರ ವರ್ಷ. ಈ ವರ್ಷದ ಸಾ’ವು ನೋ’ವುಗಳಿಗೆ ಕೊನೆಯೇ ಇಲ್ಲವೇನೋ. ಎಷ್ಟು ಜನರನ್ನು ಕಳೆದುಕೊಂಡುಬಿಟ್ಟೆವು. ಹೋಗಿ ಬನ್ನಿ ಸುಧಾಕರ್ ಜೀ. ನಿಮ್ಮ ಅಭಿನಯ ಮತ್ತು ಕೀರಲು ಕಂಠದ ಡೈಲಾಗ್ಸ್ ಇನ್ನು ಕೇಳಲು ಸಿಗಲಾರದು. ನೀವು ಅಭಿನಯಿಸಿದ ಕೆಲವೇ ಸಿನಿಮಾಗಳಾದರೂ ಅಭಿಮಾನಿಗಳ ಮನಸಿನಲ್ಲಿ ಸದಾ ಸ್ಮರಣೀಯವಾಗಿರುತ್ತದೆ. ಹೋಗಿ ಬನ್ನಿ ಕಲಾವಿದರೇ ಅಂತಿಮ ನಮನಗಳು.