ಪೂರ್ವಜರು ಉಲ್ಲೇಖಿಸಿರುವ ಈ 32 ತಪ್ಪುಗಳನ್ನು ಎಂದಿಗೂ ಮಾಡಬೇಡಿ.
ನಮ್ಮ ಪೂರ್ವಜರು ತಾವು ಮಾಡಿದ ಕೆಲವು ತ’ಪ್ಪುಗಳನ್ನು ಹಾಗೂ ಅದರಿಂದ ಆಗುವ ದು’ಷ್ಪರಿಣಾಮಗಳನ್ನು ಅರಿತು ಅದನ್ನು ತಮ್ಮ ಮಕ್ಕಳಿಗೆ ಉಪದೇಶಿಸುತ್ತಿದ್ದರು. ಈಗಿನ ಚಿಕ್ಕ-ಚೊಕ್ಕ ಕುಟುಂಬದಲ್ಲಿ ಗಂಡ, ಹೆಂ’ಡತಿ ಮತ್ತು ಮಗು ಮಾತ್ರ ಇರುತ್ತಾರೆ. ಹಿರಿಯರು ಬೇರೆಯ ಊರಲ್ಲಿ ಇರುತ್ತಾರೆ ಅಥವಾ ಕೆಲವೊಮ್ಮೆ ಹಿರಿಯರು ಮನೆಯಲ್ಲಿ ಇದ್ದರೂ ಸಹ ಅವರೊಂದಿಗೆ ಹೆಚ್ಚಿನ ಕಾಲವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮಗೆ ಎಷ್ಟೋ ವಿಷಯಗಳ ಅರಿವೇ ಇರುವುದಿಲ್ಲ. ಆಫೀಸ್ ಕೆಲಸಗಳಲ್ಲಿ ಬಿಜಿ ಆಗಿಬಿಟ್ಟಿರುತ್ತೇವೆ. ನಮ್ಮ ಹಿರಿಯರು ತಮಗಾದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೀಗೆ ಮಾಡಬಾರದು, ಹೀಗೆ ಮಾಡಬೇಕು ಎಂದಲ್ಲ ಹೇಳುತ್ತಿರುತ್ತಾರೆ. ಅಂಥವುಗಳಲ್ಲಿ ಕೆಲವನ್ನು ನಾವೆಂದು ತಿಳಿದುಕೊಳ್ಳೋಣ.
1) ಸೋಮವಾರ ತಲೆಗೆ ಎಣ್ಣೆ ಹಚ್ಚಬಾರದು. 2) ಒಂಟಿ ಕಾಲಲ್ಲಿ ನಿಲ್ಲಬಾರದು. 3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುದು ಬೇಡ. 4) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುದು ಬೇಡ. 5) ಇಡೀ ಕುಂಬಳಕಾಯಿ ಮನೆಗೆ ತರೋದು ಬೇಡ. 6) ಮನೆಯ ಒಳಗೆ ಉಗುರು ತೆಗಿಯಬಾರದು. 7) ಮಧ್ಯಾಹ್ನ ತುಳಸಿ ಕೊಯ್ಯಬಾರದು. 8) ಹೊತ್ತು ಮುಳುಗಿದ ಮೇಲೆ ಮನೆ ಹಾಗೂ ಅಂಗಳ ಗುಡಿಸಬಾರದು. 9) ಹೊತ್ತು ಮುಳುಗಿದ ಮೇಲೆ ತಲೆ ಬಾಚಬಾರದು. 10) ಉಪ್ಪು ಮೊಸರು ಸಾಲ ಕೊಡುವುದು ಬೇಡ.
11) ಬಿಸಿ ಅನ್ನಕ್ಕೆ ಮೊಸರು ಹಾಕಿಕೊಂಡು ತಿನ್ನುವುದು ಬೇಡ. 12) ಊಟ ಮಾಡುವಾಗ ಮಧ್ಯದಲ್ಲಿ ಊಟಬಿಟ್ಟು ಮೇಲೆ ಏಳಬಾರದು. 13) ತಲೆ ಕೂದಲು ಒಲೆಗೆ ಹಾಕಬೇಡ. 14) ಹೊಸಿಲನ್ನು ತುಳಿದು ದಾಟಬಾರದು. 15) ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ. 16) ಗೋಡೆ ಮೇಲೆ ಕಾಲಿಟ್ಟು ಮಲಗಬಾರದು. 17) ಒಡೆದ ಕೈ ಬಳೆ ದರಿಸಬಾರದು. 18) ಮಲಗಿ ಎದ್ದ ಚಾಪೆ ಮಡಿಸದೆ ಬಿಡಬಾರದು. 19) ಉಗುರು ಕಡಿಯುವುದು ಬೇಡ. 20) ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬಾರದು. 21) ಒಂಟಿ ಬಾಳೆಲೆ ತರಲೇಬಾರದು. 22) ಊಟ ಮಾಡಿದ ಮೇಲೆ ಕೈ ಒಣಗಿಸಬಾರದು. 23) ಮುಸಂಜೆ ಹೊತ್ತಲ್ಲಿ ಮಲಗಬಾರದು.
24) ಕಾಲು ತೊಳೆಯುವಾಗ ಹಿಮ್ಮಡಿ ತೊಳಿಯೋದು ಮರೀಬಾರದು. 25) ಹೊಸಿಲ ಮೇಲೆ ಕೂರಬಾರದು. 26) ತಿಂದ ತಕ್ಷಣ ಮಲಗಬಾರದು. 27) ಹಿರಿಯರ ಮುಂದೆ ಕಾಲು ಚಾಚಿ ಅಥವಾ ಕಾಲ ಮೇಲೆ ಕಾಲು ಹಾಕಿ ಕೂರಬಾರದು. 28) ಕೈ ತೊಳೆದು ನೀರನ್ನು ಒದರಬಾರದು. 29) ರಾತ್ರಿ ಊಟದ ತಟ್ಟೆ ತೊಳೆಯದೇ ಬಿಡಬಾರದು. 30) ಎಂಜಲ ಕೈಯಲ್ಲಿ ಊಟ ಬಡಿಸಬಾರದು 31) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬಾರದು. 32) ರಾತ್ರಿ ಹೊತ್ತಲ್ಲಿ ಬಟ್ಟೆ ಒಗಿಯಬಾರದು. ಇದೇ ರೀತಿ ಇನ್ನೂ ಹಲವಾರು ಮಾಡಬಾರದು ಎನ್ನುವ ವಿಷಯಗಳಿವೆ.
ಎಷ್ಟೋ ವಿಷಯಗಳನ್ನು ಏಕೆ ಮಾಡಬಾರದು ಎಂದು ನಮ್ಮ ಹಿರಿಯರಿಗೂ ಸಹ ಗೊತ್ತಿಲ್ಲದೆ ಇರಬಹುದು. ಆದರೆ ಅವರು ಕೂಡ ಅವರ ಹಿರಿಯರ ಮಾರ್ಗದರ್ಶನದಿಂದ ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಈ ಎಲ್ಲಾ ಮಾಡಬಾರದು ಎಂಬುವ ವಿಷಯಗಳಿಗೆ ಪ್ರತ್ಯೇಕವಾದ ಕಾರಣಗಳು ಇವೆ. ಇದಾವುದನ್ನೂ ನಮ್ಮ ಹಿರಿಯರು ಸುಮ್ಮನೆ ಹೆ’ದರಿಸಲು ಹೇಳಿಲ್ಲ ಅಥವಾ ಮೂ’ಢನಂಬಿಕೆಯೂ ಅಲ್ಲ. ವೈಜ್ಞಾನಿಕ ದೃಷ್ಟಿಯಿಂದ ಪ್ರತಿಯೊಂದು ವಿಷಯವನ್ನು ಏಕೆ ಮಾಡಬಾರದು ಎಂದು ಯೋಚಿಸುತ್ತಾ ಬಂದರೆ ನಮಗೆ ಉತ್ತರ ಸಿಗುತ್ತದೆ. ಶುಭವಾಗಲಿ ಎಲ್ಲರಿಗೂ.