ಆಧ್ಯಾತ್ಮಿಕ ಮಾಹಿತಿ

ಮಹಾಭಾರತದ ದೃತರಾಷ್ಟ್ರಾದಿ ಸಹೋದರರ ಜನ್ಮರ’ಹಸ್ಯ ಇಲ್ಲಿದೆ.

ಅಂಬೆ ಅಂಬಿಕೆ ಅಂಬಾಲಿಕೆ. ಈ ಮೂರು ಸೋದರಿಯರು ಕಾಶಿರಾಜ ಕೌಸಲ್ಯೆಯರ ಮಕ್ಕಳು. ಕಾಶಿರಾಜ ವಂಶದವರು ತಮ್ಮ ಹೆಣ್ಣು ಮಕ್ಕಳನ್ನು ಕುರುವಂಶದವರಿಗೆ ಕೊಡುವ ಸಂಪ್ರದಾಯ ಇತ್ತು. ಇದನ್ನು ಧಿ’ಕ್ಕರಿಸಿ ಕಾಶಿರಾಜನು ಭೀಷ್ಮರಿಗೆ ತಿಳಿಸದೆ, ಅವರಿಗೆ ಆಹ್ವಾನ ಕೂಡ ಕಳಿಸದೆ ತನ್ನ ಪುತ್ರಿಯರ ಸ್ವಯಂವರಕ್ಕೆ ಏರ್ಪಾಡು ಮಾಡಿದ್ದ. ಇದನ್ನು ತಿಳಿದು ಕೆರಳಿದ ಭೀಷ್ಮರು ಎದುರಿದ್ದ ರಾಜರುಗಳನ್ನೆಲ್ಲ ಸೋಲಿಸಿ ಆ ಮೂವರು ಸೋದರಿಯರನ್ನು ಸ್ವಯಂವರ ಮಂಟಪದಿಂದ ಕರೆತಂದು ವಿಚಿತ್ರವೀರ್ಯನಿಗೆ ಅಂಬಿಕೆ ಮತ್ತು ಅಂಬಾಲಿಕೆಯನ್ನು ಮದುವೆ ಮಾಡಿದರು.

ಅಂಬೆಯು ಬೇರೊಬ್ಬ ರಾಜನನ್ನು ಪ್ರೀತಿಸುತ್ತಿದ್ದೇನೆಂದು ಹೇಳಿದ್ದರಿಂದ ಅವಳನ್ನು ತಿರುಗಿ ಕಳಿಸಿ ಕೊಟ್ಟರು. ಆದರೆ ಏಳುವರ್ಷಗಳ ಕಾಲ ವಿಲಾಸ ಜೀವನ ನಡೆಸಿ ರೋಗಪೀಡಿತನಾಗಿ ವಿಚಿತ್ರವೀರ್ಯನು ಸತ್ತು ಹೋದ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಸಂತಾನವಿಲ್ಲದೆ ಕುರುವಂಶವು ಮುಂದುವರೆಯುವುದಿಲ್ಲ ಎಂಬುವುದು ಸತ್ಯವತಿಯ ಚಿಂತೆ. ಅದರ ಬಗ್ಗೆ ಭೀಷ್ಮನಲ್ಲಿ ಕೇಳಿದಳು. ಆದರೆ ಪ್ರತಿಜ್ಞೆಯನ್ನು ಜ್ಞಾಪಿಸಿ ಅದನ್ನು ನಿರಾಕರಿಸಿದರು ಭೀಷ್ಮರು. ಆಗ ಸತ್ಯವತಿಯು ‘ವಿಪತ್ತಿನಲ್ಲಿ ನೆನೆ’ ಎಂದು ಹೇಳಿದ್ದ ತನ್ನ ಮಗ ವ್ಯಾಸನನ್ನು ಆಹ್ವಾನಿಸಿದಳು.

“ವ್ಯಾಸರು” ಎಲ್ಲವನ್ನೂ ಕೇಳಿ ಅಂಬಿಕೆ, ಅಂಬಾಲಿಕೆಗೆ ಪುತ್ರದಾನ ಮಾಡಲು ಒಪ್ಪಿಕೊಂಡರು. ಸತ್ಯವತಿಯು ಸೊಸೆಯರಿಗೆ ಕರೆದು ಇಂದು ರಾತ್ರಿ ನಿಮ್ಮ ಬಳಿಗೆ ಭಾವ ಬರುತ್ತಾರೆ ಎಂದು ತಿಳಿಸಿದರು. ಭಾವ ಎಂದರೆ ಭೀಷ್ಮರೆಂದು ತಿಳಿದ ಅವರು ಸಡಗರದಿಂದ ಕಾದಿದ್ದರು. ಆದರೆ ಕಾಷಾಯವಸ್ರ್ತಧಾರಿಯಾದ ಗಡ್ಡದ ಕೊಳಕು ವ್ಯಕ್ತಿ ವ್ಯಾಸನನ್ನು ಕಂಡು ಅವರಿಗೆ ನಿರೀಕ್ಷಭಂ’ಗವಾಯಿತು. ಅವರೊಂದಿಗೆ ಕೂಡುವಾಗ ಒಬ್ಬಳಂತೂ ಜಿ’ಗುಪ್ಸೆಯಿಂದ ಕಣ್ಣು ಮುಚ್ಚಿದಳು. ಇನ್ನೊಬ್ಬಳು ಬಿಳಿಚಿಕೊಂಡು ನಿ’ಸ್ತೇಜಳಾದಳು.

ಇದೇ ಅ’ನಾಹುತಕ್ಕೆ ಕಾರಣ. ಇದರ ಫಲವಾಗಿ ಹುಟ್ಟಿದ ಮಕ್ಕಳು ಒಬ್ಬ ಕುರುಡು ಇನ್ನೊಬ್ಬ ಪಾಂಡು ವರ್ಣದವ. ಅಂತರ್ದೃಷ್ಟಿಯುಳ್ಳ ವ್ಯಾಸರಿಗೆ ಇದು ತಿಳಿಯದ ಸಂಗತಿಯೇನೂ ಆಗಿರಲಿಲ್ಲ. ಆದ್ದರಿಂದ ತಾಯಿಯನ್ನು ಕೂರಿಸಿಕೊಂಡು ನಡೆದ ಸಂಗತಿಗಳನ್ನು ಅದರ ಫಲವನ್ನು ವಿಸ್ತಾರವಾಗಿ ತಿಳಿಸಿದರು. ಸತ್ಯವತಿಗೆ ತುಂಬ ಆ’ಘಾತವಾಯಿತು. ಅದರ ಜೊತೆಗೆ ಆಗುವುದೆಲ್ಲ ಆಗಿ ಹೋಗಿದೆ. ಇನ್ನೊಂದು ಮಗುವಿಗೆ ಪ್ರಯತ್ನಿಸಬಾರದೇಕೆ ಎಂಬ ತಾಯಿಯ ಅನಿಸಿಕೆಗೆ ವ್ಯಾಸರು ಒಪ್ಪಿದರು.

ಆದರೆ ಆ ಗಡ್ಡದವನ ಬಳಿ ಹೋಗಲು ಅಂಬಿಕೆಗೆ ಇಷ್ಟವಿಲ್ಲ. ತನ್ನ ತಂಗಿಯನ್ನು ಅಲ್ಲಿ ಹೋಗಲು ಹೇಳಿದಳು ಅಂಬಾಲಿಕೆಯದು ಅದೇ ಸ್ಥಿತಿ. ಅವಳು ತನ್ನ ದಾಸಿಯೊಬ್ಬಳನ್ನು ತನ್ನಂತೆಯೇ ರಾಣಿಯ ಹಾಗೆ ಅಲಂಕರಿಸಿ. ವ್ಯಾಸರೊಂದಿಗೆ ಸ’ಮಾಗಮ ಮಾಡುವಂತೆ ಹೇಳಿ ಕಳುಹಿಸಿದಳು. ದಾಸಿಜನಕ್ಕೆ ಋಷಿಗಳ ಬಗ್ಗೆ ಬಹಳ ಗೌರವ. ಅವಳು ಶ್ರದ್ಧಾ ಭಕ್ತಿಯಿಂದ ವ್ಯಾಸರೊಂದಿಗೆ ಕೂಡಿದಳು. ಪರಿಣಾಮವಾಗಿ. “ವಿದುರ”ನಂಥಹ ಮಹಾತ್ಮ ಜನಿಸಿದರು. ಇಬ್ಬರು ತಾಯಿಯರು ಮಕ್ಕಳನ್ನು ಚೆನ್ನಾಗಿ ಬೆಳೆಸಿದರು.

ಅವರೆ “ಧೃತರಾಷ್ಟ್ರ ಮತ್ತು ಪಾಂಡು”. ವಯಸ್ಸಾದ ಅತ್ತೆ ಸತ್ಯವತಿಯು ಕಾಡಿನಲ್ಲಿ ಆಶ್ರಮ ಜೀವನ ನಡೆಸಿದ ನಂತರ ಸ್ವ’ರ್ಗಸ್ಥರಾದರು. ಮನೋಸಂಜನಿತ ದೈ’ಹಿಕ ವಿಕಾರಗಳ ಲಕ್ಷಣವನ್ನು ತಿಳಿಯಲು ಈ ಕಥೆ ಸುಂದರ ನಿದರ್ಶನವಾಗಿದೆ.‌ ಇದು ಮಹಾಭಾತದಲ್ಲಿ ಬರುವ ಒಂದು ಉಪಕಥೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *