ತಾಯಿ ಪಾರ್ವತಿಗೂ ಇತ್ತು ಬಂಗಾರದ ವಡವೆಗಳ ಮೋ’ಹ. ಅದಕ್ಕೆ ಪರಶಿವ ಮಾಡಿದ್ದೇನು ಗೊತ್ತಾ.
ಇಂದು ಭೂಲೋಕದಲ್ಲಿ ಕಾಡುತ್ತಿರುವ ಬಂಗಾರದ ಒಡವೆಗಳ ಮೋ’ಹ ದೇವತೆಗಳನ್ನೂ ಕಾಡಿದೆ ಎಂದರೆ ನೀವು ನಂಬಲೇಬೇಕು. ಹೌದು, ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಕಥೆ ತಾಯಿ ಪಾರ್ವತಿಗೆ ಬಂಗಾರದ ಮೋ’ಹ ಹುಟ್ಟಿದ್ದು ಹೇಗೆ ಹಾಗೂ ಅದಕ್ಕೆ ಪರಶಿವ ಮಾಡಿದ್ದಾದರೂ ಏನು ಎಂದು. ಮರೆಯದೆ ಈ ಪುಣ್ಯ ಕಥಾನಕವನ್ನು ಸಂಪೂರ್ಣವಾಗಿ ಓದಿ. ಮಾತೇ ಶ್ರೀ ಲಕ್ಷ್ಮಿ ಹಾಗೂ ಸರಸ್ವತಿ ಇಬ್ಬರು ಬಂಗಾರದ ಆಭರಣಗಳನ್ನು ತೊಟ್ಟಿರುತ್ತಾರೆ. ಇದನ್ನು ನೋಡಿದ ಪರಶಿವನ ಮಡದಿ ತಾಯಿ ಪಾರ್ವತಿಗೂ ಬಂಗಾರದ ಒಡವೆಗಳನ್ನು ತೊಡುವ ಆಸೆ ಹುಟ್ಟುತ್ತದೆ.
ತಕ್ಷಣ ಪರಶಿವನ ಬಳಿ ಬರುವ ತಾಯಿ ಪಾರ್ವತಿ ತಮಗೆ ಬಂಗಾರದ ಒಡವೆಗಳನ್ನು ಧರಿಸುವ ಆ’ಸೆ ಉಂಟಾಗಿದ್ದು ನನಗೂ ಕೊಡಿಸಿ ಎಂದು ಪರಶಿವನ ಬಳಿ ಕೇಳುತ್ತಾರೆ. ತಾಯಿ ಪಾರ್ವತಿಯ ಮಾತನ್ನು ಕೇಳಿದ ತಕ್ಷಣವೇ ಪರಶಿವನು ತಾಯಿ ಪಾರ್ವತಿಯ ಕೈಯಿಗೆ ಚುಕ್ಕಿಯಷ್ಟು ವಿಭೂತಿಯನ್ನು (ಬಸ್ಮ) ನೀಡುತ್ತಾರೆ ಹಾಗೂ ಇದನ್ನು ಕುಬೇರನ ಬಳಿ ತೆಗೆದುಕೊಂಡು ಹೋಗು ಹಾಗೂ ಆತನಿಗೆ ಇದರ ತೂಕಕ್ಕೆ ಸರಿಯಾಗಿ ಬಂಗಾರವನ್ನು ಕೊಡುವಂತೆ ಹೇಳು ಎಂದು ಹೇಳಿ ಕಳುಹಿಸಿಕೊಡುತ್ತಾರೆ.
ಪರಶಿವನ ಮಾತಿನಂತೆ ತಾಯಿ ಪಾರ್ವತಿ ಕೂಡ ಭಸ್ಮವನ್ನು ತೆಗೆದುಕೊಂಡು ಕನಕಪುರದಲ್ಲಿರುವ ಕುಬೇರನ ಬಳಿ ಹೋಗುತ್ತಾರೆ. ತಮ್ಮ ಬಳಿ ಇರುವ ಭಸ್ಮವನ್ನು ನೀಡಿ ಇದರ ತೂಕಕ್ಕೆ ಸರಿಯಾಗಿ ಬಂಗಾರವನ್ನು ಕೊಡಬೇಕು ಎಂದು ಪರಶಿವನ ಆಜ್ಞೆಯಾಗಿದೆ ಎಂದು ತಿಳಿಸುತ್ತಾರೆ. ಈ ಮಾತನ್ನು ಕೇಳಿದ ಕುಬೇರ ನಗುತ್ತಾ ತಾಯಿ ಪಾರ್ವತಿ ಭಸ್ಮದ ತೂಕಕ್ಕೆ ಎಷ್ಟು ಬಂಗಾರ ಬಂದಿತ್ತು. ನಿಮಗೆ ಎಷ್ಟು ಬೇಕೋ ಅಷ್ಟು ಬಂಗಾರವನ್ನು ಪಡೆಯಿರಿ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಪಾರ್ವತಿ ಭಸ್ಮದ ತೂಕಕ್ಕೆ ಬಂಗಾರವನ್ನು ನೀಡಿ ಎಂದು ಒತ್ತಾಯಿಸಿದಾಗ ಪಾರ್ವತಿಯ ಆಸೆಯಂತೆ ತಕ್ಕಡಿಯ ಒಂದು ಭಾಗಕ್ಕೆ ಕುಬೇರ ವಿಭೂತಿಯನ್ನು ಇಟ್ಟು ಮತ್ತೊಂದು ಭಾಗದಲ್ಲಿ ಬಂಗಾರದ ಒಡವೆಗಳನ್ನು ಇಡಲು ಶುರುಮಾಡುತ್ತಾನೆ.
ತಕ್ಕಡಿಯ ಮತ್ತೊಂದು ಭಾಗದಲ್ಲಿ ಅದೆಷ್ಟೇ ಬಂಗಾರದ ಒಡವೆಗಳನ್ನು ಇಟ್ಟರೂ ತಕ್ಕಡಿ ಒಂದು ಚೂರು ಮೇಲಕ್ಕೆ ಬರುವುದಿಲ್ಲ. ಇದನ್ನು ಕಂಡ ಕುಬೇರ ತನ್ನ ಮನೆಯಲ್ಲಿ ಇದ್ದ ಎಲ್ಲಾ ಬಂಗಾರವನ್ನುಹಾಕಿದರೂ ಒಂದು ಚೂರು ತಕ್ಕಡಿ ಮೇಲಕ್ಕೆ ಬರುವುದಿಲ್ಲ. ಇದನ್ನು ಗಮನಿಸಿದ ಕುಬೇರ ಏನು ಮಾಡಬೇಕು ಎಂದು ತೋಚದೆ ಹೆಂಡತಿಯ ಮೇಲೆ ಇದ್ದ ಬಂಗಾರವನ್ನು ಇಡುತ್ತಾನೆ. ಆಗಲು ಮೇಲಕ್ಕೆ ಬರುವುದಿಲ್ಲ. ಕೊನೆಯದಾಗಿ ತನ್ನ ಹೆಂಡತಿಯ ತಾಳಿ ಸರವನ್ನು ತಕ್ಕಡಿಯಲ್ಲಿ ಇಟ್ಟಾಗ ಸ್ವಲ್ಪ ಮೇಲಕ್ಕೆ ಬರುತ್ತದೆ.
ಇದನ್ನು ನೋಡಿದ ಕುಬೇರನ ಅಹಂಕಾರ ನಾ’ಶವಾಗುತ್ತದೆ. ನಂತರ ಸಂಪೂರ್ಣ ಬಂಗಾರವನ್ನು ತಾಯಿ ಪಾರ್ವತಿಗೆ ನೀಡಲು ನಿರ್ಧರಿಸುತ್ತಾನೆ. ಆದರೆ ತಾಯಿ ಪಾರ್ವತಿ ಬಂಗಾರಕ್ಕಿಂತ ಶಿವನ ವಿಭೂತಿಯೇ ಶ್ರೇಷ್ಠವೆಂದು ತಿಳಿದು ತಂದ ವಿಭೂತಿಯನ್ನು ಕುಬೇರನಿಗೆ ಕೊಡದೆ ಹಿಂತಿರುಗಿ ತೆಗೆದುಕೊಂಡು ಬರುತ್ತಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.