ಹೋಟೆಲಿನಲ್ಲಿ ನಡೆದ ಮೇಘನಾ ಸೀಮಂತ ಕಾರ್ಯದಲ್ಲಿ ಧ್ರುವ ಸರ್ಜರಿಗೆ ಕಾದಿತ್ತು ಅ’ಚ್ಚರಿ. ಚಿತ್ರಗಳನ್ನು ನೋಡಿ.

ನಮ್ಮೆಲ್ಲರ ಪ್ರೀತಿಯ ಮೇಘನಾ ರಾಜ್ ಅವರ ಸೀಮಂತ ಕಳೆದ ಭಾನುವಾರದಂದು ಅದ್ದೂರಿಯಾಗಿ ಮನೆಯಲ್ಲಿ ನಡೆದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಒಂದು ಸೀಮಂತದ ಕಾರ್ಯದಲ್ಲಿ ಕೇವಲ ಬಹಳ ಆಪ್ತರಿಗಷ್ಟೇ ಆಹ್ವಾನವನ್ನು ನೀಡಲಾಗಿದ್ದು ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಸೀಮಂತದ ಕಾರ್ಯವೂ ನಡೆಯಿತು. ಹಸಿರು ಹಾಗೂ ಪಿಂಕ್ ಬಣ್ಣದ ರೇಷ್ಮೆ ಸೀರೆಯಲ್ಲಿ ಮುದ್ದಾಗಿ ಅಲಂಕಾರಗೊಂಡಿದ್ದ ಮೇಘನಾ ರಾಜ್ ಅವರು ಅತ್ಯಂತ ಸರಳವಾಗಿ ಕೆಲವೇ ಕೆಲವು ಆಭರಣಗಳೊಂದಿಗೆ ಕಾಣಿಸಿಕೊಂಡಿದ್ದರು.

ಮನೆಯಲ್ಲಿಯೇ ಹಾಕಲಾಗಿದ್ದ ಅದ್ದೂರಿ ಸೆಟ್’ನಲ್ಲಿ ಸೀಮಂತ ಕಾರ್ಯ ಶಾಸ್ತ್ರೋಕ್ತವಾಗಿ ಹಿಂದೂ ಸಂಪ್ರದಾಯದಂತೆ ನಡೆಯಿತು. ಇದಾದ ನಂತರ ಹಲವು ಗಣ್ಯರು ಬಂದು ಮೇಘನಾ ರಾಜ್ ಅವರ ಹೊ’ಟ್ಟೆಯಲ್ಲಿ ಮತ್ತೊಮ್ಮೆ ಚಿರು ಹುಟ್ಟಲಿ ಎಂದು ಹಾರೈಸಿದರು. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದಲ್ಲಿ ಒಂದು ವಿಶೇಷತೆ ಇತ್ತು. ಅದೇನು ಅಂತೀರಾ. ಅದೇ ಚಿರಂಜೀವಿ ಸರ್ಜಾ ಅವರ ಬ್ಯಾನರ್. ಸೀಮಂತ ಕುರ್ಚಿಯ ಪಕ್ಕದಲ್ಲಿ ಚಿರಂಜೀವಿ ಸರ್ಜಾ ಅವರ ಕಟೌಟ್ ಅನ್ನು ನಿಲ್ಲಿಸಲಾಗಿತ್ತು.

ಹಿಂದೂ ಸಂಪ್ರದಾಯದಂತೆ ತನ್ನ ಸೀಮಂತವನ್ನು ನೆರವೇರಿಸಿಕೊಂಡ ಮೇಘನಾ ರಾಜ್ ಮಾರನೆಯ ದಿನ ಅಂದರೆ ಸೋಮವಾರದಂದು ಅದ್ದೂರಿಯಾಗಿ ಹೋಟೆಲೊಂದರಲ್ಲಿ ವಿದೇಶಿ ಸಂಪ್ರದಾಯದಂತೆ ತೆಳುವಾದ ಗುಲಾಬಿ ಬಣ್ಣದ ಗೌನನ್ನು ತೊಟ್ಟು ಹೆಜ್ಜೆ ಹಾಕಿದರು. ಈ ಕಾರ್ಯಕ್ರಮಕ್ಕೆ ಕೂಡ ಕೆಲವೇ ಕೆಲವು ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಒಂದು ಅಚ್ಚರಿಯ ಘಟನೆ ನಡೆಯಿತು. ಅದೇನೆಂದರೆ ಧ್ರುವ ಸರ್ಜಾ ಅವರ ಹುಟ್ಟುಹಬ್ಬವೂ ಅದೇ ಸಮಾರಂಭದಲ್ಲಿ ನಡೆಯಿತು.

ಅಣ್ಣನ ಸಾ’ವಿನಿಂದ ಧ್ರುವ ಅವರು ಇನ್ನೂ ಆಚೆ ಬಂದಿಲ್ಲ. ಹಾಗಾಗಿ ಅವರಿಗೆ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಳ್ಳುವ ಇಚ್ಛೆ ಇರಲಿಲ್ಲ. ಅಣ್ಣನ ಅ’ಗಲಿಕೆ ಹಾಗೂ ಈಗಿರುವ ಕೋ’ವಿಡ್ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಆಗದ ಕಾರಣ ನೀವು ಎಲ್ಲಿದ್ದೀರಿ ಅಲ್ಲಿಂದಲೇ ನನ್ನನ್ನು ಆಶೀರ್ವದಿಸಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಆದರೆ ಅಷ್ಟಕ್ಕೆ ಬಿಡದ ಮೇಘನಾ ಅವರ ಕುಟುಂಬ ಧ್ರುವ ಸರ್ಜಾ ರವರಿಗೆ ಹಳದಿ ಹಾಗೂ ಬಿಳಿ ಬಣ್ಣದ ವಿಶಿಷ್ಟ ಕೇಕ್ ಒಂದನ್ನು ತರಿಸಿ ವೇದಿಕೆಯ ಮೇಲೆಯೇ ಚಿರಂಜೀವಿ ಅವರ ಚಿತ್ರದ ಮುಂದೆ ಧ್ರುವ ಅವರ ಹುಟ್ಟುಹಬ್ಬವನ್ನು ಸಂ’ಭ್ರಮದಿಂದ ಸರಳವಾಗಿ ಆಚರಿಸಿದ್ದಾರೆ.

ತೆಳು ಗುಲಾಬಿ ಹಾಗೂ ನೀಲಿಬಣ್ಣದ ಗೌನನ್ನು ತೊಟ್ಟಿದ್ದ ಮೇಘನಾ ಚಿರಂಜೀವಿ ಸರ್ಜಾ ಅವರು ಇಲ್ಲೂ ಕೂಡ ಚಿರು ಅವರ ಭಾವಚಿತ್ರದೊಂದಿಗೆ ನಿಂತು ಪೋಸ್ ನೀಡಿದ್ದಾರೆ. ಖ್ಯಾತ ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ, ಧ್ರುವ ಸರ್ಜಾ ಅವರ ಕುಟುಂಬ ಹಾಗೂ ಮೇಘನಾ ರಾಜ್ ಅವರ ಕುಟುಂಬ ಹಾಗೂ ಆತ್ಮೀಯ ಬಂಧು ಮಿತ್ರರು ಎಲ್ಲರೂ ಒಳಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮೊದಲಿಗೆ ತಿಳಿಗುಲಾಬಿ ಬಣ್ಣದ ಧರಿಸಿದ್ದ ಮೇಘನಾ ರಾಜ್ ಅವರು ಕಾರ್ಯಕ್ರಮದಲ್ಲಿ 10 ಹೆಜ್ಜೆಯನ್ನು ಹಾಕಿದ್ದಾರೆ.

ಒಟ್ಟಾರೆ ಕನ್ನಡಿಗರೆಲ್ಲರೂ ಮನದುಂಬಿ ಹಾರೈಸಿರುವ ಮೇಘನಾಗೆ ಮತ್ತೊಮ್ಮೆ ಗ’ರ್ಭದಲ್ಲಿ ಚಿರು ಅವರು ಜನಿಸಿ ಬರಲಿ ಎಂದು ಕರುನಾಡು ಹಾರೈಸುತ್ತಿದೆ. ಜೊತೆಗೆ ಖ್ಯಾತ ಚಿತ್ರಕಾರ ಕರಣ್ ಆಚಾರ್ಯ ಅವರ ಕೈಯಲ್ಲಿ ಮೂಡಿಬಂದಿರುವ ಮೇಘನಾ ಹಾಗೂ ಚಿರು ಅವರ ಕಂಪ್ಯೂಟರ್ ಆಧಾರಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈ’ರಲ್ ಆಗಿದೆ. ವಿವಿಧೆಡೆ ಹಲವಾರು ಪುಟಗಳಲ್ಲಿ ಮೇಘನಾ ಅವರ ಬಗ್ಗೆ ಉತ್ತಮ ಅಭಿಪ್ರಾಯಗಳು ಹಾಗೂ ಹಾರೈಕೆಗಳು ಕೇಳಿಬರುತ್ತಿವೆ. ಕರುನಾಡ ಜನರಿಗೆ ಮೇಘನ ಅವರ ಸೀಮಂತದ ಕುರ್ಚಿಯ ಪಕ್ಕದಲ್ಲಿ ಇಟ್ಟಿರುವ ಚಿರು ಅವರ ಬಹಳ ಇಷ್ಟವಾಗಿದ್ದು ಲಕ್ಷಾಂತರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಹಾಗೂ ಅವರ ಅಭಿಮಾನಿಗಳ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಈ ಚಿತ್ರಗಳು ರಾರಾಜಿಸುತ್ತಿವೆ.

Leave a Reply

Your email address will not be published. Required fields are marked *