ಕೆಜಿಎಫ್ ತಂಡದಿಂದ ಈಗಷ್ಟೇ ಹೊರಬಿತ್ತು ಭರ್ಜರಿ ಸುದ್ದಿ.
ಕನ್ನಡ ಚಿತ್ರರಂಗದ ಇತ್ತೀಚಿನ ಬ್ಲಾಕ್ ಬರ್ಸ್ಟರ್ ಚಿತ್ರವೆಂದರೆ ಅದು ಕೆಜಿಎಫ್. ಕೆಜಿಎಫ್ ಚಾಪ್ಟರ್ ೧ ಇಡೀ ಕರುನಾಡೆ ಮೆಚ್ಚಿ ಹಾಡಿಹೊಗಳಿದ ಚಿತ್ರ. ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಅವರು ಕೂಡ ಇದ್ದರು. ಇನ್ನು’ಳಿದಂತೆ ಅನಂತನಾಗ್, ಮಾಳವಿಕ ಅವಿನಾಶ್, ಅಚ್ಯುತಕುಮಾರ್, ರಾಮಚಂದ್ರ ರಾಜು, ಅರ್ಚನಾ ಜೋಯಿಸ್, ವಸಿಷ್ಠ ಎನ್ ಸಿಂಹ, ತಮನ್ನಾ, ಮೌನಿ ರಾಯ್, ಟಿ ಎಸ್ ನಾಗಾಭರಣ, ವಿನಯ್ ಬಿಡಪ್ಪ, ರಮೇಶ್ ಇಂದಿರಾ ಸೇರಿದಂತೆ ಹಲವು ಗಣ್ಯರು ಈ ಚಿತ್ರದಲ್ಲಿ ಪಾತ್ರವನ್ನು ವಹಿಸಿದ್ದಾರೆ.
ಕಲರ್ಸ್ ಕನ್ನಡ ಮೂವಿ ಚಿತ್ರದ ಬ್ರಾಡ್ಕಾಸ್ಟಿಂಗ್ ಹ’ಕ್ಕನ್ನು ಪಡೆದುಕೊಂಡಿದೆ. ಎರಡು ಗಂಟೆ 50 ನಿಮಿಷವಿರುವ ಈ ಚಿತ್ರವು ನವೆಂಬರ್ 9 ರಂದು ಕೆಜಿಎಫ್ ಭಾಗವನ್ನು ರಿಲೀಸ್ ಮಾಡಿತ್ತು. ಟೈಮ್ಸ್ ಆಫ್ ಇಂಡಿಯಾ ಇದಕ್ಕೆ 3.5 ರೇಟಿಂಗ್ ಅನ್ನು ನೀಡಲಾಗಿತ್ತು. ಐ.ಎಂ.ಡಿ.ಬಿ ಯಲ್ಲಿ ಇದಕ್ಕೆ 8.2 ರೇಟಿಂಗ್ ಅನ್ನು ನೀಡಲಾಗಿತ್ತು. ಸರಿಸುಮಾರು ಆರು ಹಾಡುಗಳಿರುವ ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದರು. ಹಾಗೂ ಚಿತ್ರದ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಅವರು ಕೆಲಸ ಮಾಡಿದ್ದರು.
2018 ರ ಡಿಸೆಂಬರ್ 21 ರಂದು ಬಿಡುಗಡೆಗೊಂಡಿದ್ದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಗೂಗಲ್ನಲ್ಲಿ ಸರಿಸುಮಾರು 95 ಪರ್ಸೆಂಟ್ ಜನ ಈ ಚಿತ್ರವನ್ನು ಉತ್ತಮ ಚಿತ್ರವನ್ನು ಕೊಟ್ಟಿದ್ದಾರೆ. ಚಿತ್ರದ ನಾಯಕನೊಬ್ಬ ಆ’ಡಳಿತ ಹಾಗೂ ಆ’ಸ್ತಿಗೋಸ್ಕರ ತನ್ನ ತಾಯಿಗೆ ತಾನೊಬ್ಬ ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಪ್ರಮಾಣ ಮಾಡುತ್ತಾನೆ. ನಂತರ ಅವನು ನಟೋ’ರಿಯಸ್ ಬಂಗಾರದ ಮಾ ಫಿ’ಯಾದಲ್ಲಿ ಒಳಹೊಕ್ಕುತಾನೆ. ಈ ರೀತಿಯಲ್ಲಿ ಕಥಾಹಂದರ ಸಾಗುತ್ತದೆ ನಂತರ ಚಿತ್ರದ ಕೊನೆಯಲ್ಲಿ ಗರುಡನ ಸಾ’ವಿನೊಂದಿಗೆ ಈ ಚಿತ್ರವು ಮುಗಿಯುತ್ತದೆ.
ಆದರೆ ಅಷ್ಟಕ್ಕೇ ಚಿತ್ರ ಮುಗಿದಿಲ್ಲ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಧೀರನ ಪಾತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ನಟಿಸಿದ್ದಾರೆ. ಅಷ್ಟೇ ಅಲ್ಲ, ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಕಿರಗಂದೂರು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಚಿತ್ರ ಎಂಬ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ಪ್ರೊಡ್ಯೂಸ್ ಆಗಿದೆ. 2018 ರಲ್ಲಿ ನಡೆದ ಜೀ ಕನ್ನಡದ ಒಂದು ಕಾರ್ಯಕ್ರಮದಲ್ಲಿ ಯಶ್ ಅವರು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತೇನೆ ಎಂದು ಕನ್ನಡಿಗರಿಗೆ ಭಾಷೆ ನೀಡಿದ್ದರು.
ಕೊಟ್ಟ ಭಾಷೆಯಂತೆ ಇಡೀ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಜಿಎಫ್ ಭಾಗ-2 ಚಿತ್ರಕ್ಕಾಗಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಕಾ’ತುರದಿಂದ ಕಾಯುತ್ತಿದ್ದಾರೆ. ಆದರೆ ಮಧ್ಯದಲ್ಲಿ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದ ಈ ಚಿತ್ರವು ಇಂದಿನಿಂದ ಅಂದರೆ ಅಕ್ಟೋಬರ್ ಎಂಟರಿಂದ ಮತ್ತೆ ಚಿತ್ರೀಕರಣವು ಪ್ರಾರಂಭವಾಗಿದೆ. ಹೀಗೆಂದು ಸ್ವತಹ ಕೆಜಿಎಫ್ ಅಫೀಷಿಯಲ್ ಪುಟದಲ್ಲಿ ಹಾಗೂ ಹೊಂಬಾಳೆ ಚಿತ್ರದ ಅಫೀಷಿಯಲ್ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಅವರ ಒಂದು ಚಿತ್ರವನ್ನು ಅಪ್ಲೋಡ್ ಮಾಡಿ ಇಂದಿನಿಂದ ಕೆಜಿಎಫ್ ಭಾಗ-2 ಚಿತ್ರೀಕರಣವೂ ಪ್ರಾರಂಭವಾಗುತ್ತದೆ ಎಂದು 30 ನಿಮಿಷಗಳ ಹಿಂದೆಯಷ್ಟೇ ಹಾಕಿದ್ದಾರೆ. ಸತತವಾಗಿ ಹಲವಾರು ಏಳುಬೀ’ಳುಗಳ ನಂತರ ಕೆಜಿಎಫ್ ಚಾಪ್ಟರ್ ಟು ಭಾಗದ ಚಿತ್ರೀಕರಣವು ಮತ್ತೊಮ್ಮೆ ಶುರುವಾಗಿದೆ ನಂತರ ಇದೇ ಮೊದಲ ಬಾರಿಗೆ ಮತ್ತೊಮ್ಮೆ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. ಕೆಲವು ತಿಂಗಳ ಹಿಂದೆ ಚಿತ್ರದ ಕೆಲವು ಶಾಟ್ಸ್ ಗಳನ್ನು ಮೈಸೂರಿನ ಪ್ರಖ್ಯಾತ ಐಟಿ ಕಂಪನಿ ಇನ್ಫೋಸಿಸ್ ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಗಿತ್ತು. ಹೊರಗಿನ ಜನಗಳಿಗೆ ಇಲ್ಲಿ ಪ್ರವೇಶವಿಲ್ಲದೆ ಕೇವಲ ಅವಕಾಶವಿದ್ದ ಜನರಿಗಷ್ಟೇ ಒಳಗೆ ಬಿಟ್ಟುಕೊಂಡು ಶೂಟಿಂಗನ್ನು ಮಾಡಲಾಗಿತ್ತು.