ದ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ.
ನಮ್ಮ ಕನ್ನಡ ಚಿತ್ರರಂಗದ ಆಕ್ಷ’ನ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ದ್ರುವ ಸರ್ಜಾ ಅವರ ಅಭಿಮಾನಿಗಳಿಗೆಲ್ಲ ಇಲ್ಲಿದೆ ಒಂದು ಸಿಹಿಸುದ್ದಿ. ಆಂಜನೇಯ ಸ್ವಾಮಿಯ ಪರಮ ಭಕ್ತರಾದ ಧ್ರುವ ಸರ್ಜಾ ರವರು ಚಿತ್ರರಂಗದಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ಹೆಚ್ಚು ಫ್ಯಾನ್ ಫಾಲೋವರ್ಸ್ ಹಾಗೂ ಅಭಿಮಾನಿಗಳ ಪ್ರೀತಿಯನ್ನು ಗಳಿಸಿರುವ ಮೊದಲ ವ್ಯಕ್ತಿ ಎಂದೇ ಹೇಳಬಹುದು. ಇವರು ತಮ್ಮ ಅಭಿಮಾನಿಗಳನ್ನು ತಮ್ಮ ಸ್ನೇಹಿತರಂತೆ ಹಾಗೂ ದೇವರಂತೆ ಕಾಣುತ್ತಾರೆ.
ಎಷ್ಟೇ ಎತ್ತರಕ್ಕೆ ಬೆಳೆಯುತ್ತಿದ್ದರೂ ಬಹಳ ಸರಳವಾದ ಜೀವನ ಇವರದು. ಅವರು ತಮ್ಮ ಅಭಿಮಾನಿಗಳಿಗೆ ಬಹಳ ಗೌರವವನ್ನು ಹಾಗು ಪ್ರೀತಿಯನ್ನು ತೋರಿಸುತ್ತಾರೆ. ಇವರು ಇದುವರೆಗೂ ಮೂರು ಚಿತ್ರಗಳನ್ನು ಮಾಡಿದ್ದು ಆ ಮೂರು ಚಿತ್ರಗಳು ಕೂಡ ಭರ್ಜರಿ ಯಶಸ್ಸನ್ನು ಕಂಡಿವೆ. ಅವರ ಪೊ’ಗರು ಚಿತ್ರವು ರಿಲೀಸ್ ಗೆ ತಯಾರಾಗಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಪೊ’ಗರು ಚಿತ್ರವು ಸದ್ಯದಲ್ಲೇ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದರ ಜೊತೆಗೆ ಧ್ರುವ ಸರ್ಜಾ ಅವರು ಮತ್ತೆ ಹೊಸ 4 ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಸದ್ಯದಲ್ಲಿ ಧ್ರುವ ಅವರು ತಮ್ಮ ಪೊಗರು ಚಿತ್ರದ ಉಳಿದಿರುವ ದೃಶ್ಯಗಳ ಶೂ’ಟಿಂಗ್ ಮುಗಿಸುತ್ತಿದ್ದಾರೆ. ಇದಾದ ನಂತರ ಒಂದರಮೇಲೊಂದು ಎಂಬಂತೆ ಸತತವಾಗಿ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಪ್ರೀತಿಯ ಅಣ್ಣನ ಅ’ಗಲಿಕೆಯ ನೋ’ವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಧ್ರುವ ಅವರು ಇಂದಿಗೂ ಹೇಳುತ್ತಿರುತ್ತಾರೆ. ತನ್ನ ಅಣ್ಣ ಇಲ್ಲದ ಈ ಹುಟ್ಟುಹಬ್ಬದ ಆಚರಣೆ ನನಗೆ ಬೇಡ ಎಂದು ಧ್ರುವ ಸರ್ಜಾ ಅವರು ತೀರ್ಮಾನಿಸಿದರಂತೆ.
ಆದರೆ ತನ್ನ ಮೈದುನನ ಖುಷಿಯನ್ನೇ ಸದಾ ಬಯಸುವ ಮೇಘನಾ ಚಿರಂಜೀವಿ ಸರ್ಜಾ ರವರು ಧ್ರುವ ಸರ್ಜಾ ರವರ ಹುಟ್ಟುಹಬ್ಬದ ಆಚರಣೆಗಾಗಿ ಎಲ್ಲವನ್ನು ಸಜ್ಜು ಮಾಡಿ ತನ್ನ ಮೈದುನನಿಗೆ ಸರ್ಪ್ರೈಸ್ ಕೊಟ್ಟಿದ್ದರು. ಮಂಗಳವಾರದಂದು ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಖ್ಯಾತ ನಿರ್ದೇಶಕರಾದ ಎ ಪಿ ಅರ್ಜುನ್ ರವರು ಅದ್ದೂರಿ ಸಿನಿಮಾದ ನಂತರ ನಾವಿಬ್ಬರೂ ಶೀಘ್ರದಲ್ಲೇ ಮತ್ತೊಂದು ಸಿನಿಮಾ ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಮಂಗಳವಾರದಂದು ಅನೌನ್ಸ್ ಮಾಡಿದ್ದರು.
ಆದರೆ ಮಾಹಿತಿಗಳ ಪ್ರಕಾರ ಇದಕ್ಕೆ ಸ್ವಲ್ಪ ಕಾಲವಕಾಶ ಬೇಕಾಗಿದೆ. ಇದು ಸ್ವಲ್ಪ ತಡವಾಗಬಹುದು. ಸದ್ಯದಲ್ಲಿ ಪೊಗರು ಸಿನಿಮಾದ ನಂತರ ಧ್ರುವ ಅವರು ಉದಯ್ ಮೆಹತಾ ಅವರ ಜೊತೆಗೂಡಿ ಸಿನಿಮಾ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಜಗ್ಗುದಾದ ಖ್ಯಾತಿಯ ರಾಘವೇಂದ್ರ ಹೆಗಡೆ ಅವರೊಟ್ಟಿಗೆ ಧ್ರುವ ಸರ್ಜಾ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಬಿ ಕೆ ಗಂಗಾಧರ್ ಹಾಗೂ ಶಿವಾರ್ಜುನ್ ಅವರೊಟ್ಟಿಗೆ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿದೆ.
ಖ್ಯಾತ ನಿರ್ದೇಶಕ ಅರ್ಜುನ್ ಅವರೊಟ್ಟಿಗೆ ಮಾಡುತ್ತಿರುವ ಸಿನಿಮಾದ ಶೂಟಿಂಗ್ ಸುಮಾರು ಎರಡು ವರ್ಷದ ನಂತರ ಶುರುವಾಗಲಿದೆ ಎನ್ನುತ್ತಿದ್ದಾರೆ. ಆದರೆ ಈ ಎಲ್ಲಾ ಮಾಹಿತಿಗಳನ್ನು ತಿಳಿದಮೇಲೆ ಒಂದು ವಿಷಯ ಮಾತ್ರ ಸ್ಪಷ್ಟವಾಗುತ್ತದೆ. ಅದೇನೆಂದರೆ ಮುಂಬರುವ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಧ್ರುವ ಸರ್ಜಾ ಅವರ ಸಿನಿಮಾ ಬರುತ್ತಿದೆ. ಇದು ಅವರ ಎಲ್ಲಾ ಫಾಲ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ ಎಂದೇ ಹೇಳಬಹುದು.