ಸಿನಿಮಾ ಮಾಹಿತಿ

ಗಳಗಳನೆ ಅತ್ತ ಸೋನು ನಿಗಮ್, ಎಸ್.ಪಿ.ಬಿ ಬಗ್ಗೆ ಹೇಳಿದ್ದೇನು ಗೊತ್ತಾ. ವಿಡಿಯೋ ನೋಡಿ.

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಸತತ 50 ದಿನಗಳ ನಂತರ ಮತ್ತೊಮ್ಮೆ ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರ ಬರುತ್ತಾರೆ ಎಂದು ದೇಶದಾದ್ಯಂತ, ರಾಜ್ಯದ್ಯಂತ, ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಮಹಾ ದು ರಂ’ತವೆಂಬಂತೆ ಕೋ ರೋನ ಮ’ಹಾಮಾ’ರಿಯ ಒಂದು ಕಾರಣದಿಂದ ಎಸ್.ಪಿ.ಬಿ ಅವರು ಅಸುನೀಗಿದರು. ಭಾರತದ ಚಿತ್ರರಂಗವೇ ಎಸ್.ಪಿ.ಬಿ ಅವರ ಅ’ಗಲಿಕೆಯ ದುಃ’ಖದಿಂದ ಮ’ರುಗುತ್ತಿತ್ತು.

ನೂರಾರು ಕಲಾವಿದರು ದೇಶಾದ್ಯಂತ ಅ’ಗಲಿದ ಮಹಾನ್ ಗಾನ ಜ್ಯೋತಿಗೆ ಕಂ’ಬನಿ ಮಿಡಿದರು. ಎಷ್ಟು ಜನರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಬಂದು ಅವರಿಗೋಸ್ಕರ ಗಾನ ಸಮರ್ಪಣೆ ಮಾಡುತ್ತಿದ್ದಾರೆ. ಈ ರೀತಿಯಾಗಿ ಬಾಲಿವುಡ್ನ ಖ್ಯಾತ ಗಾಯಕ ಸೋನು ನಿಗಮ್ ಅವರು ತಮ್ಮ ಅಫೀಷಿಯಲ್ ಯೂಟ್ಯೂಬ್ ಖಾತೆಯಲ್ಲಿ 13 ಲಕ್ಷ ಸಬ್ಸ್ಕ್ರಿಬರ್ಸ್ ಗಳನ್ನು ಹೊಂದಿದ್ದಾರೆ. ತಮ್ಮ ಅಫೀಷಿಯಲ್ ಖಾತೆಯಲ್ಲಿ ಅವರು ಆಗಾಗ ತಾವು ಮಾಡಿರುವ ಗಾಯನದ ವಿಡಿಯೋಗಳನ್ನು ಹಾಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಖ್ಯಾತ ಗಾಯಕ ಸೋನು ನಿಗಮ್ ಅವರು ಈ ಬಾರಿ ಎಸ್.ಪಿ.ಬಿ ಅವರ ಬಗ್ಗೆ ಬಹಳಷ್ಟು ಕಂ’ಬನಿ ತುಂಬಿದ ಮಾತುಗಳನ್ನು ಆಡಿದ್ದಾರೆ. ಏನು ಹೇಳಿದ್ದಾರೆ ಬನ್ನಿ ನೋಡೋಣ. ಎಸ್.ಪಿ.ಬಿ ಅವರ ಬಗ್ಗೆ ಮನದಾಳದ ಮಾತುಗಳನ್ನು ಆಡುತ್ತಿದ್ದ ಸೋನು ನಿಗಮ್ ಅವರು ಒಂದು ಮಹತ್ವದ ವಿಚಾರವನ್ನು ಇಲ್ಲಿ ತಿಳಿಸಿದ್ದಾರೆ, ಅದೇನೆಂದರೆ ಖ್ಯಾತ ಗಾಯಕ ಸೋನು ನಿಗಮ್ ಹಾಗೂ ಮತ್ತೊಬ್ಬ ಮಹಾನ್ ಚೇತನ ಎಸ್ ಪಿ ಬಾಲಸುಬ್ರಮಣ್ಯ ಇಬ್ಬರಿಗೂ ಒಬ್ಬರೇ ಮಾನಸ ಗುರುವಂತೆ.

ಆ ಮಾನಸ ಗುರುವೇ ಖ್ಯಾತ ಗಾಯಕ ಮೊಹಮ್ಮದ್ ರಫಿ. ಮೊಹಮ್ಮದ್ ರಫಿ ಅವರನ್ನು ಎಸ್.ಪಿ.ಬಿ ಅವರು ಬಹಳಷ್ಟು ಆರಾಧಿಸುತ್ತಿದ್ದರು. ಅದೇ ರೀತಿಯಾಗಿ ನಾನು ಕೂಡ ಮೊಹಮ್ಮದ್ ರಫಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ ಹಾಗೂ ಅವರನ್ನು ಬಹಳಷ್ಟು ಅನುಸರಿಸುತ್ತಿದೆ. ಈ ಕಾರಣದಿಂದಾಗಿ ಎಸ್.ಪಿ.ಬಿ ಅವರು ಕೂಡ ನನಗೆ ಮಾನಸ ಗುರುವಾಗಿ ಕಾಣಸಿಗುತ್ತಾರೆ. ಮಾನಸ ಗುರು ಎಂದು ಹೇಳುವುದಕ್ಕಿಂತಲೂ ಅವರು ನನಗೆ ಗುರು ವಾಗಿಯೇ ಇದ್ದಾರೆ. ಎಸ್.ಪಿ.ಬಿ ಅವರು ಆದಷ್ಟು ಸಾಮಾಜಿಕ ಜಾಲತಾಣಗಳಲ್ಲಿ ದೂರವಿರುತ್ತಿದ್ದರೂ ಸಹ ಅವರು ಇತ್ತೀಚೆಗಷ್ಟೇ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಿಗೆ ಹೆಜ್ಜೆ ಇಟ್ಟಿದ್ದರು.

ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ತಾವು ಕೇಳುತ್ತಿದ್ದ ಉತ್ತಮ ಗೀತೆಗಳನ್ನು ತಮ್ಮ ಸಂಗಡಿಗರಿಗೆ ಹಾಗೂ ಖ್ಯಾತ ಗಾಯಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದೇ ರೀತಿಯಾಗಿ ಸೋನು ನಿಗಮ್ ಅವರಿಗೂ ಕೂಡ ವಿಶೇಷವಾಗಿ ಕೆಲವೊಂದು ಹಾಡುಗಳನ್ನು ಫಾರ್ವರ್ಡ್ ಮಾಡಿ ಹಾಡಿನ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಿದ್ದರು. ಅಷ್ಟೇ ಅಲ್ಲದೆ ಎಸ್.ಪಿ.ಬಿ ಅವರು ವಾಟ್ಸಾಪ್ನಲ್ಲಿ ಸೋನು ನಿಗಮ್ ಅವರಿಗೆ ಹಾಡನ್ನು ಕಳಿಸಿದ ಮೇಲೆ ಈ ಹಾಡು ಬಹಳ ಚೆನ್ನಾಗಿದೆ ಇದನ್ನು ಮಿಸ್ ಮಾಡದೆ ಒಮ್ಮೆ ಕೇಳಿ ಅಂತ ಹೇಳುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಎಸ್.ಪಿ.ಬಿ ಅವರು ಸಾವಿರಾರು ಕಾನ್ಸರ್ಟ್ ಗಳಲ್ಲಿ ಹಾಡಿದ್ದಾರೆ.

ಅದೇ ರೀತಿ ಕೆಲವೊಂದು ವಿಶಿಷ್ಟ, ವಿಭಿನ್ನ, ವಿಶೇಷ ರೀತಿಯಲ್ಲಿ ತಮ್ಮ ಗಾಯನವನ್ನು ಪ್ರಸ್ತುತ ಪಡಿಸುತ್ತಿದ್ದರು. ಯಾವುದೊ ಒಂದೆರೆಡು ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರಿಗೆ ನಿಮಗೆ ಈಗಿನ ಯುವ ಗಾಯಕರಲ್ಲಿ ಯಾರ ಗಾಯನ ಇಷ್ಟವಾಗುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಎಸ್.ಪಿ.ಬಿ ಅವರು ನನಗೆ ಈಗಿನ ಒಂದು ಟ್ರೆಂಡ್ ನಲ್ಲಿ ಇಷ್ಟವಾಗುವ ಗಾಯಕ ಎಂದರೆ ಅದು ಸೋನು ನಿಗಮ್ ಎಂದು ಹೇಳುತ್ತಿದ್ದರಂತೆ. ಅಲ್ಲಿಗೆ ಖಾತ್ರಿ ಆಗುವ ವಿಷಯವೇನೆಂದರೆ ಎಸ್.ಪಿ.ಬಿ ಅವರ ಮನಸ್ಸಿನಲ್ಲಿ ಈಗಿನ ಕಾಲದ ಇಷ್ಟವಾಗುವ ಗಾಯಕ ಮನಸ್ಸಿನಲ್ಲಿ ಇರುತ್ತಿದ್ದುದು ಸೋನು ನಿಗಮ್.

ಇಷ್ಟೆಲ್ಲಾ ವಿಷಯಗಳನ್ನು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿರುವ ಸೋನು ನಿಗಮ್ ಅವರು ಎಸ್ಪಿಬಿ ಅವರನ್ನು ನೆನೆದು ಗ’ಳಗಳನೆ ಅತ್ತಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಇದ್ದ ವಿಶಿಷ್ಟ ರೀತಿಯ ಧ್ವನಿ ಶೈಲಿಗಳನ್ನು ಅಳವಡಿಸಿಕೊಂಡು ಪ್ರಾಣಿಗಳ, ಮಹಿಳೆಯರ ಈ ರೀತಿಯಾದಂತಹ ವಿಶಿಷ್ಟ ಧ್ವನಿಗಳನ್ನು ಎಸ್.ಪಿ.ಬಿ ಯವರು ಮಾಡಿ ನಮ್ಮೆಲ್ಲರಿಗೂ ಪ್ರೇರಣೆ ಆಗುತ್ತಿದ್ದರು ಎಂದು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಗಾಯನದಿಂದ ಅವರು ಲಕ್ಷಾಂತರ ಜನರನ್ನು ತಮ್ಮ ಸ್ಟೇಜ್ ಶೋಗಳಲ್ಲಿ ನಗಿಸಿದ್ದಾರೆ, ಅಳಿಸಿದ್ದಾರೆ, ಕುಣಿಸಿದ್ದಾರೆ, ಸಂತೋಷ ಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ಒಮ್ಮೆ ಎಸ್.ಪಿ.ಬಿ ಅವರ ಜೊತೆ ಹಾಡನ್ನು ಹಾಡುವುದಕ್ಕೆ ನನಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಸುಮಧುರ ಘಟನೆಗಳಲ್ಲಿ ಒಂದು ಎಂದು ಸೋನು ನಿಗಮ್ ಅವರು ಹೇಳಿದ್ದಾರೆ. ಎಸ್.ಪಿ.ಬಿ ಅವರು ನಮ್ಮನ್ನು ಅಗಲಿರುವುದು ಚಿತ್ರರಂಗಕ್ಕೆ ಆದ ಬಹಳ ದೊಡ್ಡ ನ’ಷ್ಟವೆಂದು ಬಹಳವೇ ದುಃ’ಖದಿಂದ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *