ಆರ್.ಸಿ.ಬಿ ಅದೃಷ್ಟವನ್ನು ಹೆಚ್ಚಿಸಿದ ಈ ಬೌಲರ್ ಯಾರು. ನೀವೇ ನೋಡಿ.

ಆ ಒಬ್ಬ ಆರ್.ಸಿ.ಬಿ ಬೌಲರ್ ನಮ್ಮ ಬೆಂಗಳೂರು ತಂಡಕ್ಕೆ ಕಾಲಿಟ್ಟ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟವೇ ಬದಲಾಯಿತು ಎನ್ನುವ ಮಾತು ಎಲ್ಲೆಲ್ಲೂ ಕೇಳಿಬರುತ್ತಿದೆ. ಮೊದಲಿಗೆ ಈ ಬೌಲರ್ ನ ಬಗ್ಗೆ ಹಲವಾರು ಟ್ರೋಲ್’ಗಳು ಕಾಣಲು ಸಿಗುತ್ತಿದ್ದವು. ಈ ಬೌಲರನ್ನು ಬಹಳ ಹೆಚ್ಚಿನ ಮೊತ್ತಕ್ಕೆ ತಂಡದವರು ಖರೀದಿಸಿದ್ದಾರೆ. ಆದರೂ ಯಾಕೆ ಅವರನ್ನು ತಂಡವು ಪರಿಗಣಿಸುತ್ತಿಲ್ಲ ಎಂದೆಲ್ಲ ಪ್ರಶ್ನೆಗಳು ಏಳುತ್ತಿದ್ದವು. ಇವರು ಯಾರು ಅಂತೀರಾ. ಅವರೇ ಸೌತ್ ಆಫ್ರಿಕಾದ ಕ್ರಿಸ್ ಮೋರಿಸ್.

ಇವರು ಉತ್ತಮ ಬೌಲರ್ ಮಾತ್ರ ಅಲ್ಲದೆ ತಮ್ಮ ಬ್ಯಾಟಿಂಗ್ನಲ್ಲಿ ಅತ್ಯುತ್ತಮವಾದ ಕಲೆಯನ್ನು ಪ್ರದರ್ಶಿಸಿ ತಮ್ಮ ತಂಡಕ್ಕೆ ಸಮಬಲವನ್ನು ನೀಡುತ್ತಾರೆ. ಆದರೂ ಅವರನ್ನು ಪ್ಲೇಯಿಂಗ್ ಇಲೆವೆನ್ ಗೆ ಏಕೆ ಪರಿಗಣಿಸುತ್ತಿಲ್ಲ ಎಂದೆಲ್ಲಾ ಹಲವಾರು ಪ್ರಶ್ನೆಗಳು ಮೂಡುತ್ತಿದ್ದವು. ಮೊದಲ ಐದು ಪಂದ್ಯಗಳಿಗೆ ಇಂತಹ ಅತ್ಯುನ್ನತ ಬೌಲರ್ ನನ್ನು ಏಕೆ ಆಡಿಸುತ್ತಿಲ್ಲ ಎಂಬ ಪ್ರಶ್ನೆ ಕ್ಯಾಪ್ಟನ್ ಆದ ವಿರಾಟ್ ಕೊಹ್ಲಿ ಅವರಿಗೆ ಹಲವಾರು ಬಾರಿ ಇಂಟರ್ವ್ಯೂನಲ್ಲಿ ಸಹ ಕೇಳುತ್ತಿದ್ದರು.

ಆದರೆ ಕೊಹ್ಲಿ ಅವರು ಇದಕ್ಕೆ ಕಾರಣವನ್ನು ನೀಡದೇ ಮುಂದಿನ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ನೀಡುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಕ್ರಿಸ್ ಮೋರಿಸ್ ರವರು ತಮ್ಮ ಚ’ಮತ್ಕಾರಿ ಬೌಲಿಂಗ್ ಪ್ರದರ್ಶಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಪವರ್ ಪ್ಲೇ ನಲ್ಲಿ ಇವರು ಚೆಂಡನ್ನು ಉತ್ತಮವಾಗಿ ಸ್ವಿಂಗ್ ಮಾಡುತ್ತಿದ್ದರು ಮತ್ತು ಬ್ಯಾಟ್ಸ್ಮನ್ ಗಳನ್ನು ತಮ್ಮ ಬಾಲ್ ನತ್ತ ಸೆಳೆದು ಬಟ್ಸ್ಮನ್ ನ ಯೋಜನೆಗಳನ್ನು ವಿಫಲಗೊಳಿಸುತ್ತಿದ್ದರು.

ಡೆ’ತ್ ಓವರ್’ನಲ್ಲೂ ವಿಕೆಟ್’ಗಳನ್ನು ಪಡೆದಿದ್ದು ಅಷ್ಟೇ ಅಲ್ಲದೆ ರನ್’ಗಳನ್ನೂ ಕೂಡ ಹೆಚ್ಚು ಕೊಡುತ್ತಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕೂಡ ಇದೇ ರೀತಿಯ ಉತ್ತಮವಾದ ಆಟವನ್ನು ಮುಂದುವರಿಸಿದ ಮೋರಿಸ್ ನಮ್ಮ ಕರಾರುವಕ್ಕಾದ ಬೌಲಿಂಗ್ ನಿಂದ ಕೊಲ್ಕತ್ತಾ ತಂಡದ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕಿದರು. ಇವರ ಉತ್ತಮ ಬೌಲಿಂಗ್ ಸರಾಸರಿ 7.2. ಈವರೆಗಿನ ಐಪಿಎಲ್ ನ ಬೇರೆಲ್ಲ ಬೌಲರ್ ಗಳ ಪೈಕಿ ಇವರೇ ಮೊದಲ ಸ್ಥಾನವನ್ನು ಬಾಚಿಕೊಂಡಿದ್ದಾರೆ.

ಇದಲ್ಲದೆ ಉತ್ತಮ ಬೌಲಿಂಗ್ ಎಕಾನಮಿಯಲ್ಲಿಯೂ ಕೂಡ ಇವರೇ ಪ್ರಪ್ರಥಮ ಸ್ಥಾನವನ್ನು ಬಾಚಿಕೊಂಡಿದ್ದಾರೆ. ಇವರ ಉತ್ತಮ ಬೌಲಿಂಗ್ ಎಕಾನಮಿ 4.5. ಆರ್ಸಿಬಿ ತಂಡದಲ್ಲಿ ದು’ರ್ಬಲವಾಗಿದ್ದ ಬೌಲಿಂಗ್ ವಿಭಾಗಕ್ಕೆ ಮೋರಿಸ್ ರವರು ಶ’ಕ್ತಿಯನ್ನು ತುಂಬಿದ್ದಾರೆ. ಬಿಗ್ ಬ್ಯಾಷ್ ಲೀಗ್’ನಲ್ಲೂ ಸಿಡ್ನಿ ಥಂಡರ್ ತಂಡದ ಒಳ್ಳೆಯ ಬೌಲರ್ ಗಳ ಪೈಕಿ ಒಬ್ಬರಾಗಿದ್ದರು. ಐಪಿಎಲ್ ಲೀಗ್ ನಲ್ಲಿ ಅತ್ಯಂತ ಬಲಿಷ್ಠ ಬೌಲಿಂಗ್ ಹೊಂದಿರುವ ತಂಡಗಳ ಪೈಕಿ ಆರ್ ಸಿ ಬಿ ಕೂಡ ಒಂದು.

ಆರ್ ಸಿ ಬಿ ತಂಡದ ಬೌಲಿಂಗ್ ನ ಬೆನ್ನೆಲುಬಾಗಿರುವ ಮೊರಿಸ್ ತಂಡಕ್ಕೆ ಒಂದು ಹೊಸ ಶ’ಕ್ತಿ ಹಾಗೂ ಭ’ರವಸೆಯನ್ನು ಮೂಡಿಸಿದ್ದಾರೆ. ಕಳೆದ ಎರಡು ಆಟಗಳನ್ನು ನೋಡಿದ ಎಲ್ಲರೂ ಈ ಸಲ ಪಕ್ಕ ಕಪ್ ನಮ್ದೇ ಎಂದು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಆರ್ ಸಿ ಬಿ ಪ್ರಿಯರು ಎಲ್ಲರೂ ಈ ಮಾಹಿತಿಯನ್ನು ಶೇರ್ ಮಾಡಿ. ಮತ್ತು ಹೇಳಿ ಈ ಸಲ ಕಪ್ ನಮ್ದೇ ಎಂದು.

Leave a Reply

Your email address will not be published. Required fields are marked *