ಇನ್ನೊಬ್ಬ ಬಾಯ್ಫ್ರೆಂಡ್ ಬಗ್ಗೆ ಹೇಳಿದ ಮೇಘನಾ. ಚಿರು ಮೇಲೆ ಕೋ’ಪ ಬರುತ್ತಿದ್ದ ಒಂದು ವಿಷಯ ಯಾವುದು ಗೊತ್ತಾ.
ಕನ್ನಡದ ಹೆಸರಾಂತ ನಟಿ ಮೇಘನಾ ಚಿರು ಸರ್ಜಾ ಅವರು ತಮ್ಮ ಮನದಾಳದ ಮಾತುಗಳನ್ನು ಇತ್ತೀಚೆಗೆ ಒಂದು ಖಾಸಗಿ ವಾಹಿನಿಯಲ್ಲಿ ಆಡಿದ್ದರು. ಅದರ ಪ್ರಕಾರ ಅವರು ಚಿರು ಸರ್ಜಾ ಅವರ ಬಗ್ಗೆ ಹಲವಾರು ವಿಚಾರಗಳನ್ನು ಮನದುಂಬಿ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಕಾರ ಹಬ್ಬಗಳ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಮೇಘನ ಅವರನ್ನು ಕೇಳಿದಾಗ ಅವರು ಚೆನ್ನಾಗಿ ಲಕ್ಷಣವಾಗಿ ಅಲಂಕಾರ ಮಾಡಿಕೊಳ್ಳಬೇಕು ಹಾಗೂ ಕುಟುಂಬದವರ ಜೊತೆ ಬೆರೆತು ಮಾತನಾಡುತ್ತ ಉತ್ತಮ ಸಮಯವನ್ನು ಕಳೆಯಬೇಕು ಎಂದು ಹೇಳಿದ್ದಾರೆ.
ನಿಮಗೆ ಇಷ್ಟವಾದ ಹಬ್ಬ ಯಾವುದು ಎಂದು ಕೇಳಿದಾಗ ನನಗೆ ದೀಪಾವಳಿ ಹಾಗೂ ಕ್ರಿಸ್ಮಸ್ ಎರಡು ಹಬ್ಬಗಳು ಸಹ ಇಷ್ಟ ಎಂದು ಹೇಳಿದ್ದಾರೆ. ಚಿರು ಹಾಗೂ ಮೇಘನಾ ಅವರು ಇಬ್ಬರು ಸೇರಿ ಆಚರಿಸಿದ ಮೊದಲ ಹಬ್ಬ ವರಮಹಾಲಕ್ಷ್ಮಿ ಎಂದು ಸಹ ಹೇಳಿದ್ದಾರೆ. ಹಬ್ಬಗಳಲ್ಲಿ ಚಿರಂಜೀವಿ ಸರ್ಜಾ ಏನು ಗಿಫ್ಟ್ ಕೊಡುತ್ತಾರೆ ಎಂದು ಕೇಳಿದಾಗ ಸಾಮಾನ್ಯವಾಗಿ ಸೀರೆ ಅಥವಾ ಒಡವೆಗಳನ್ನು ಕೊಡುತ್ತಾರೆ ಎಂದು ಹೇಳಿದರು. ಚಿರಂಜೀವಿ ಬಿಟ್ರೆ ನಿಮಗೆ ಮತ್ತೊಬ್ಬರು ಬಾಯ್ಫ್ರೆಂಡ್ ಇದ್ದಾರಂತಲ್ಲ ಎಂದು ಪ್ರಶ್ನೆ ಕೇಳಿದಾಗ ಹೌದು ನನಗೆ ಚಿರು ಬಿಟ್ಟರೆ ಇನ್ನೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅದು ನನ್ನ ಪ್ರೀತಿಯ ನಾಯಿ ಬ್ರೂನೋ ಎಂದು ಹೇಳಿದ್ದಾರೆ.
ಗಂಡ ಅಂತ ನಿಮ್ಮ ತಲೆಗೆ ಪ್ರಶ್ನೆ ಬಂದ ತಕ್ಷಣ ಯಾವ ವಿಷಯಗಳು ನಿಮ್ಮ ತಲೆಗೆ ಹೊಳೆಯುತ್ತದೆ ಎಂದು ಕೇಳಿದಾಗ ಮೊದಲನೆಯದಾಗಿ ಅವರಿಗೆ ಬಿರಿಯಾನಿ ಬಹಳ ಇಷ್ಟ. ಜೊತೆಗೆ ಅವರು ಕಾರ್ ಓಡಿಸುವುದರಲ್ಲಿ ಎಕ್ಸ್ಪರ್ಟ್. ಹಾಗೂ ಅವರು ಬಹಳ ಸೈಲೆಂಟ್. ಸಿನಿಮಾ ನೋಡುವ ಹು’ಚ್ಚು. ಬಹಳ ಜಾಸ್ತಿ ಬೆಳಿಗ್ಗೆಯಿಂದ ಸಂಜೆವರೆಗೂ ಕುಳಿತುಕೊಂಡು ಸಿನಿಮಾ ಹಾಕಿದರೆ ನೋಡುತ್ತಾರೆ. ಬೇಗ ಕೆ’ಟ್ಟ ಗಳಿಗೆಗಳನ್ನ ಅಥವ ಯಾವುದೇ ಬೇಡವಾದ ವಿಚಾರಗಳನ್ನು ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ
ನಿಮಗೆ ಬಹಳ ಇಷ್ಟವಾದ ನಟಿ ಯಾರು ಎಂದು ಕೇಳಿದಾಗ ಮೇಘನ ಸರ್ಜಾ ಅವರು ನನಗೆ ಎಂದಿಗೂ ಬಹಳ ಇಷ್ಟವಾದ ನಟಿ ಎಂದರೆ ಅದು ನನ್ನ ತಾಯಿ ಹಾಗೂ ಬಾಲಿವುಡ್ನ ಖ್ಯಾತ ನಟಿ ಕರೀನಾ ಕಪೂರ್ ಎಂದು ಹೇಳಿದ್ದಾರೆ. ಬಹಳ ಇಷ್ಟವಾದ ತಿನಿಸು ಯಾವುದು ಎಂದು ಕೇಳಿದಾಗ ನನಗೆ ಚಿಕನ್ ಮಾಡಿಕೊಟ್ಟರೆ ಸಾಕು ಎಷ್ಟು ಬೇಕಾದರೂ ಚಿಕನ್ ತಿನ್ನುತ್ತೇನೆಂದು ಹೇಳಿದ್ದಾರೆ. ಯಾವ ಒಂದು ಗುಣ ಚಿರು ಅವರಲ್ಲಿ ಹೆಚ್ಚಾಗಿ ಇರಬೇಕಾಗಿತ್ತು ಎಂದು ಕೇಳಿದಾಗ ಮೇಘನಾ ಅವರು ಏನು ಹೇಳುತ್ತಾರೆಂದರೆ, ಚಿರು ರವರು ಸಾಮಾನ್ಯವಾಗಿ ಏನನ್ನು ಸರಿಯಾಗಿ ಮಾಡುವುದಿಲ್ಲ.
ಇದ್ದಕ್ಕಿದ್ದ ಹಾಗೆ ಕೂತಿರುವ ಸಮಯದಲ್ಲಿಯೇ ಅಲ್ಲಿಗೆ ಹೋಗೋಣ ಇದನ್ನು ಮಾಡೋಣ ಎಂದು ಸಡನ್ನಾಗಿ ಪ್ಲಾನ್ ಮಾಡಿ ಬಿಡುತ್ತಾರೆ. ಆದರೆ ನಾನು ಹಾಗಲ್ಲ. ಬೆಳಿಗ್ಗೆ ಈ ಸಮಯದಿಂದ ಈ ಸಮಯ ಇಂತಹ ಕೆಲಸ ಅಂತ ಇಡೀ ದಿನವನ್ನು ಪ್ಲಾನ್ ಮಾಡಿ ಇಟ್ಟುಕೊಂಡಿರುತ್ತೇನೆ. ಯಾವ ಒಂದು ವಿಷಯಕ್ಕೆ ಚಿರು ಅವರ ಮೇಲೆ ಸಕ್ಕತ್ತು ಕೋ’ಪ ಬರುತ್ತದೆ ಎಂದು ಕೇಳಿದಾಗ, ಯಾವುದಾದರೂ ಒಂದು ಪ್ರಶ್ನೆ ಅಥವಾ ಏನಾದರೂ ಒಂದು ಕೆಲಸಕ್ಕೆ ಅವರನ್ನ ಕರೆದರೆ ಅವರು ತಕ್ಷಣವಾಗಿ ಅದಕ್ಕೆ ಉತ್ತರ ನೀಡುವುದಿಲ್ಲ.
ಆಮೇಲೆ ಹೇಳುತ್ತೇನೆ, ನಾಳೆ ಹೇಳುತ್ತೇನೆ ಎಂದು ಸತಾಯಿಸುತ್ತಾರೆ. ಅದು ನನಗೆ ಹೆಚ್ಚಾಗಿ ಕೋ’ಪ ಬರುತ್ತದೆ ಎಂದು ಮೇಘನಾ ರವರು ಹೇಳುತ್ತಾರೆ. ಯಾವ ಒಂದು ವಿಷಯಕ್ಕೆ ನಿಮಗೆ ಹೆಚ್ಚು ಕೋ’ಪ ಬರುತ್ತದೆ ಎಂದು ಕೇಳಿದಾಗ ನನಗೆ ಸಾಮಾನ್ಯವಾಗಿಯೇ ಎಲ್ಲ ವಿಷಯಕ್ಕೂ ಸ್ವಲ್ಪ ಮುಂ’ಗೋ’ಪ ಹೆಚ್ಚು ಎಂದು ಹೇಳುತ್ತಾರೆ. ಯಾವ ಒಂದು ವಿಷಯಕ್ಕೆ ಚಿರು ನಿಮಗೆ ಬಹಳ ಇಷ್ಟ ಎಂದು ಕೇಳಿದಾಗ ಅವರಿಗೆ ಇರುವ ತಾಳ್ಮೆ ನೋಡಿದರೆ ತಾಳ್ಮೆ ನನಗೂ ಬರಬೇಕು ಎಂದು ಅನಿಸುತ್ತದೆ. ಅವರಲ್ಲಿ ತಾಳ್ಮೆ ಹೆಚ್ಚು ಎಂದು ಹೇಳುತ್ತಾರೆ.