ಸಿನಿಮಾ ಮಾಹಿತಿಸುದ್ದಿ

ಸರಿಗಮಪ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಾಲ್ ಅನ್ನು ಸೋಲಿಸಿ ಗೆದ್ದ ಕನ್ನಡದ ಗಾಯಕಿ ಇವರೇ.

ಕನ್ನಡ ಚಿತ್ರರಂಗದಲ್ಲಿ ಎಷ್ಟು ಪ್ರಖ್ಯಾತ ಗಾಯಕರು ತಮ್ಮ ಗಾಯನವನ್ನು ಪ್ರಸ್ತುತಪಡಿಸುತ್ತಾರೆ ಇಂದಿಗೂ ಅಜರಾಮರವಾಗಿದ್ದಾರೆ. ಅದೇ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಹಲವಾರು ವಾಹಿನಿಗಳಾದ ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ, ಕಸ್ತೂರಿ ಹೀಗೆ ಹಲವಾರು ವಾಹಿನಿಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ಹೊಸ ರಿಯಾಲಿಟಿ ಶೋಗಳು ಬರುತ್ತಿರುತ್ತವೆ. ಇದೇ ರೀತಿಯಾಗಿ ನ್ಯಾಷನಲ್ ಮೀಡಿಯಾ ಗಳಾದ ಸೋನಿ, ಕಲರ್ಸ್, ಸ್ಟಾರ್ ಪ್ಲಸ್ ಹೀಗೆ ದೇಶಾದ್ಯಂತ ಲಕ್ಷಾಂತರ ಜನರು ನೋಡುವ ವಾಹಿನಿಗಳಲ್ಲಿಯೂ ಕೂಡ ಪ್ರಖ್ಯಾತ ಗಾಯನ ರಿಯಾಲಿಟಿ ಶೋಗಳು ಬರುತ್ತಿರುತ್ತವೆ.

ಅದೇ ರೀತಿಯಾಗಿ ಹಿಂದಿಯಲ್ಲಿ ಬರುತ್ತಿದ್ದ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸ್ಪರ್ಧೆಯ ಬಗ್ಗೆ ಒಂದು ಮಹತ್ತರವಾದ ಮಾಹಿತಿ ನಿಮಗಾಗಿ ಇಲ್ಲಿದೆ. ನಿಮಗೆಲ್ಲ ತಿಳಿದಿರುವ ಹಾಗೆ ಕನ್ನಡ ಹಾಗೂ ಹಿಂದಿ ಎರಡು ವಾಹಿನಿಗಳಲ್ಲಿಯೂ ಕೂಡ ಪ್ರಖ್ಯಾತ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಸರಿಗಮಪ ಸೀನಿಯರ್ ರಿಯಾಲಿಟಿ ಶೋಗಳು ಒಂದರ ಹಿಂದೊಂದರಂತೆ ಪ್ರಸಾರವಾಗುತ್ತಿರುತ್ತದೆ. ಗತಕಾಲದ ಹಾಡುಗಳಿಂದಲೂ ಹಿಡಿದು ಇತ್ತೀಚಿಗಿನ ಪಾಪ್ ಸಾಂಗ್ ವರೆಗೂ ಎಲ್ಲ ರೀತಿಯ ಹಾಡುಗಳನ್ನು ಹಾಡುವ ಗಾಯಕರು ಈ ಕಾರ್ಯಕ್ರಮದಲ್ಲಿ ಕಾಣಸಿಗುತ್ತಾರೆ.

ಇದೇ ರೀತಿಯಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ರಿಯಾಲಿಟಿ ಶೋ 2000 ನೇ ಇಸ್ವಿಯಲ್ಲಿ ಪ್ರಸಾರವಾಗುತ್ತಿತ್ತು. ಈ ವಾಹಿನಿಯಲ್ಲಿ ಭಾರತದ ಪ್ರಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ಒಬ್ಬ ಕಂಟೆಸ್ಟೆಂಟ್ ಆಗಿ ಇದರಲ್ಲಿ ಭಾಗವಹಿಸಿದ್ದರು. ಇಡೀ ದೇಶವೇ ಮೆಚ್ಚಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಆದರೆ ಈ ಅದ್ಭುತ ಗಾಯಕಿಯೂ ಸರಿಗಮಪ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಒಬ್ಬ ಕನ್ನಡ ಗಾಯಕಿಯ ಸಹಭಾಗಿತ್ವದಲ್ಲಿ ಎಂಬುದು ಆಶ್ಚರ್ಯಕರ ವಿಚಾರ.

ಹೌದು ಶ್ರೇಯಾ ಘೋಷಲ್ ಭಾಗವಹಿಸಿದ್ದ ಸರಿಗಮಪ ಫೈನಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪ.ಅರ್ಚನಾ ಉಡುಪ ಹಾಗೂ ಶ್ರೇಯಾ ಘೋಶಾಲ್ ಅವರ ಮಧ್ಯೆ ಹಣಾಹಣಿ ನಡೆದು ನಂತರ ಅಂತಿಮವಾಗಿ ಶ್ರೇಯಾ ಘೋಶಾಲ್ ಅವರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು ಅರ್ಚನಾ ಉಡುಪ ರವರು ಪ್ರಥಮಸ್ಥಾನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತಾರು ಗೀತೆಗಳನ್ನು ಹಾಡಿದ ಅರ್ಚನ ಉಡುಪ ರವರು ಆಗಿನ ಕಾಲದಲ್ಲಿ ಶ್ರೇಯಾ ಘೋಷಲ್ ರಂತಹ ಗಾಯಕಿಯನ್ನು ದ್ವಿತೀಯ ಸ್ಥಾನಕ್ಕೆ ಇಳಿಸಿ ತಾವು ಪ್ರಥಮ ಸ್ಥಾನಕ್ಕೇರಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಆದರೆ ಇಂದು ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದ ಅರ್ಚನಾ ಉಡುಪ ರವರು ತಮ್ಮ ವಿವಾಹದ ನಂತರ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದ ಅರ್ಥವಾಗುವ ವಿಷಯವೇನೆಂದರೆ ನಾವು ಯಾವುದೇ ಕಾರ್ಯಕ್ರಮವಾಗಲಿ ಅಥವಾ ಜೀವನವಾಗಲಿ ಪ್ರಥಮ ದ್ವಿತೀಯ ಅಥವಾ ತೃತೀಯ ಎಂಬುದು ಲೆಕ್ಕಕ್ಕೆ ಬರುವುದಿಲ್ಲವಾದರೂ ನಮ್ಮ ಪ್ರತಿಭೆ ಮಾತ್ರ ಲೆಕ್ಕಕ್ಕೆ ಬರುತ್ತದೆ.

Leave a Reply

Your email address will not be published. Required fields are marked *