ಮನೆಯಲ್ಲಿನ ನೆಮ್ಮದಿಗೆ ಇಷ್ಟಾರ್ಥ ಸಿದ್ಧಿಗೆ ದೇವರಿಗೆ ಹೀಗೆಯೇ ಆರತಿ ಮಾಡಿ.
ದೇವರಿಗೆ ಮಾಡುವ ಆರತಿಯ ಬಗ್ಗೆ ನಾವೆಲ್ಲ ತಿಳಿಯಲೇ ಬೇಕಾದ ಕೆಲವು ವಿಷಯಗಳನ್ನು ಇಂದು ನಾವು ನೋಡೋಣ. ಪ್ರತಿದಿನ ದೇವರಿಗೆ ಆರತಿ ಮಾಡುತ್ತೇವೆ. ಯಾಕೆ ಆರತಿ ಮಾಡಬೇಕು ಏನು ಫಲ. ಆರತಿ ಮಾಡುವುದು ಶುಭ ಸಂಕೇತ. ಅದರಿಂದ ಮನೆಯಲ್ಲಿ ಅಭಿವೃದ್ಧಿ, ಸಂತಾನ ,ಸಂತೋಷ, ದಾರಿದ್ರ್ಯ ದೂರವಾಗುತ್ತವೆ. ಏಕಾರತಿ (ಒಂದು) - ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. ಏಕಾರತಿ ಅಂದರೆ ದೇವರಿಗೆ ಧೂಪದ ನಂತರ ದೀಪ ಸಮರ್ಪಣೆ. ದ್ವಿ ಆರತಿ (ಎರಡು) – ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.
ದ್ವಿ ಆರತಿ ಅಂದರೆ ನೈವೇದ್ಯದ ನಂತರ ಎರಡು ನೀಲಾಂಜನ ಇಟ್ಟು, ಅಥವಾ ಹೂರಣದ ಆರತಿ, ಗೋದಿ ಹಿಟ್ಟನ್ನು ಹಾಲಿನಲ್ಲಿ ಕಲಿಸಿ ಆರತಿ ಒಟ್ಟು ಎರಡು ಆರತಿ ಎಂದರೆ ಲಕ್ಷ್ಮೀನಾರಾಯಣ ಸಂಕೇತ, ಶಿವ-ಪಾರ್ವತಿಯರ ಸಂಕೇತ, ಅದಕ್ಕೆ ಮನೆಯಲ್ಲಿ ದಾಂಪತ್ಯ ಚೆನ್ನಾಗಿರುತ್ತದೆ. ಪಂಚ ಆರತಿ (ಐದು) – ಪಂಚ ಆರತಿ ಅಂದರೆ ನಾನು ಹಾಕಿರುವ ಚಿತ್ರದಲ್ಲಿರುವಂತೆ ಹಬ್ಬ ಹರಿದಿನಗಳಲ್ಲಿ ಮಾಡುವ ಆರತಿ ಇದರಿಂದ ಲಕ್ಷ್ಮಿ ಪ್ರೀತಳಾಗುತ್ತಾಳೆ. ನವ ಆರತಿ (ಒಂಬತ್ತು) – ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ. ಏಕಾದಶ ಆರತಿ (ಹನ್ನೊಂದು) – ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
ದ್ವಾದಶ ಆರತಿ (ಹನ್ನೆರಡು) – ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ. ಲಕ್ಷ್ಮೀನಾರಾಯಣರು ಪ್ರೀತರಾಗುತ್ತಾರೆ. ಷೋಡಶ ಆರತಿ (ಹದಿನಾರು) – ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ. ಮಂಗಳಕಾರ್ಯಗಳು ನೆರವೇರುತ್ತವೆ. ಏಕವಿಂಶತಿ (ಇಪ್ಪತ್ತೊಂದು) ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ. ಚತುರ್ವಿಂಶತಿ ಆರತಿ (ಇಪ್ಪತ್ನಾಲ್ಕು) – ಉತ್ತಮ ಮಳೆ ಬೆಳೆ ಉಂಟಾಗುತ್ತದೆ. ನಕ್ಷತ್ರ ಆರತಿ (ಇಪ್ಪತ್ತೇಳು)- ಸಕಲ ದೇವತೆಗಳು ಅನುಗ್ರಹಿಸುತ್ತಾರೆ. ಕೂರ್ಮ ಆರತಿ – ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
ನಾಗ ಆರತಿ ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ. ಅಷ್ಟೋತ್ತರ ದೀಪಗಳಿಂದ ಸಹ ಆರತಿ ಭಗವಂತನಿಗೆ ಬಹಳ ಶ್ರೇಷ್ಠ. ನೆಲ್ಲಿಕಾಯಿಯ ಆರತಿ , ಫಲಗಳ ಮೇಲೆ ಆರತಿಕೂಡ ಶ್ರೇಷ್ಠ ವಾದದ್ದು. ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು. ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ (ಜನ್ಮ ಕುಂಡಲಿ) ಯನ್ನು ಪಡೆಯಲು ಸಂಪರ್ಕಿಸಿ. 95350 04448 ಜೋತಿಷ್ಯ ಸಲಹೆ ಹಾಗು ಪರಿಹಾರ ವಾಟ್ಸಪ್ ಕೂಡ ಮಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.