ಮೇಘನಾಗೆ ಸಿಕ್ತು ಧ್ರುವ ಕಡೆಯಿಂದ ಬೆಲೆಬಾಳುವ ಉಡುಗೊರೆ.
ಕನ್ನಡ ಚಲನಚಿತ್ರದ ಖ್ಯಾತ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಅವರ ಕುಡಿ ಇನ್ನೇನು ಪ್ರಪಂಚಕ್ಕೆ ಕಾಲಿಡುತ್ತಿದೆ. ಇದೇ ಡಿಸಂಬರ್ ತಿಂಗಳಲ್ಲಿ ಸೀಮಂತ ಮಾಡಿಕೊಂಡಿದ್ದ ನಟಿ ಮೇಘನಾ ಸರ್ಜಾ, ಕೇವಲ ಆಪ್ತರು ಹಾಗೂ ಬಂಧು ಮಿತ್ರರೊಂದಿಗೆ ಸುಸಮಯ ಕಳೆದಿದ್ದು, ಸಾಮಾಜಿಕ ಜಾಲತಾಣದಲ್ಲೀ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ಅಕ್ಟೋಬರ್ನಲ್ಲಿ ಅದ್ದೂರಿಯಾಗಿ ಮನೆಯಲ್ಲಿಯೂ ಹಾಗೂ ಹೋಟೆಲಿನಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ಮೊದಲಿಗೆ ಮನೆಯಲ್ಲಿಯೇ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿಕೊಂಡು ಮೇಘನಾ ಚಿರಂಜೀವಿ ಸರ್ಜಾ ರವರು ನಂತರ ಮಾರನೆಯದಿನ ಹೋಟೆಲ್ಲಿನಲ್ಲಿ ಅದ್ದೂರಿಯಾಗಿ ಸೀಮಂತ ಸಂಭ್ರಮ ಮಾಡಿಕೊಂಡಿದ್ದಾರೆ. ಮೇಘನಾ ಅವರ ಮದುವೆಯಲ್ಲಿ ಹಾಕಿದ್ದಂತೆಯೇ ಚಿರು ಸರ್ಜಾ ನೆನಪಿನಲ್ಲಿ ಧ್ರುವ ಸರ್ಜಾ ರವರು ಅದೇ ರೀತಿಯಾದ ಸೆಟ್ ಹಾಕಿಸಿ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ.
ಕ್ಲಾಸಿ ಕ್ಯಾಪ್ಚರೆಸ್ ನವರು ಸೆರೆಹಿಡಿದ ಬಹುತೇಕ ಚಿತ್ರಗಳು ಎಲ್ಲ ಕಡೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಕೇವಲ ಹತ್ತಿರದ ಸಂಬಂಧಿಕರು ಹಾಗೂ ಗೆಳೆಯರೊಂದಿಗಿನ ಚಿತ್ರಗಳು ಮಾತ್ರ ಎಲ್ಲೆಡೆ ವೈರಲ್ ಆಗಿದೆ. ಹಸಿರು ಸೀರೆ ಹಾಗೂ ಪಿಂಕ್ ಬ್ಲೌಸ್ ನಲ್ಲಿ ಮಿಂಚಿದ ಮೇಘನಾ ಸರ್ಜಾ ರವರು ಸಿಂಪಲ್ಲಾಗಿ ತಮ್ಮ ಸೀಮಂತಕ್ಕೆ ರೆಡಿಯಾಗಿದ್ದರು. ಹಾಗೂ ಮಾರನೆಯ ದಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಹಸಿರು ಹಾಗೂ ತಿಳಿ ಪಿಂಕ್ ಬಣ್ಣದಲ್ಲಿ ಕಂಗೊಳಿಸಿದ್ದರು. ಇದೀಗ ಇನ್ನೇನು ಕೆಲವೇ ದಿನಗಳಲ್ಲಿ ಜೂನಿಯರ್ ಚಿರು ಸರ್ಜಾ ಬರುವ ನಿರೀಕ್ಷೆಯಿದ್ದು ಧ್ರುವ ಸರ್ಜಾ ರವರು ಅವರಿಗಾಗಿ ಒಂದು ವಿಶೇಷ ಉಡುಗೊರೆಯೊಂದನ್ನು ಸಿದ್ಧಪಡಿಸಿದ್ದಾರೆ.
ಮೇಘನಾ ಚಿರು ಸರ್ಜಾ ರವರಿಗೆ ಪ್ರೀತಿಯ ಉಡುಗೊರೆಯಾಗಿ ದ್ರುವ ಸರ್ಜಾ ರವರು ಆಯ್ಕೆ ಮಾಡಿರುವ ಹುಡುಗರು ಎಂದರೆ ಅದು ಬೆಳ್ಳಿಯ ತೊಟ್ಟಿಲು. ಹೌದು ಖಾಸಗಿ ಒಡವೆಯ ಅಂಗಡಿಯೊಂದಕ್ಕೆ ಆರ್ಡರ್ ನೀಡಿರುವ ದೃವ ಸರ್ಜಾ ರವರು ಭಾರವಾದ ಒಂದು ಬೆಳ್ಳಿಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲು ಇಷ್ಟ ಪಟ್ಟಿದ್ದಾರೆ. ಅವರು ಬೆಳ್ಳಿಯ ತೊಟ್ಟಿಲಿನೊಂದಿಗೆ ನಿಂತಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೂ ಇದರ ಬೆಲೆಯು ಸರಿ ಸುಮಾರು 20 ರಿಂದ 25 ಲಕ್ಷ ಎಂದು ಅಂದಾಜಿಸಲಾಗುತ್ತಿದೆ.