ಸಿನಿಮಾ ಮಾಹಿತಿ

ಗಂಡು ಮಗುವಿಗೆ ಜನ್ಮವಿತ್ತ ಮೇಘನ. ಜೊತೆಗೆ ಮತ್ತೊಂದು ವಿಶೇಷ ಏನು ಗೊತ್ತಾ.

ಕನ್ನಡದ ಖ್ಯಾತ ಚಲನಚಿತ್ರ ನಟ ನಟಿಯರಾದ ಚಿರಂಜೀವಿ ಸರ್ಜಾ ಹಾಗೂ ಅವರ ಪತ್ನಿ ಮೇಘನಾ ಸರ್ಜಾ ರವರ ಮನೆಯಲ್ಲಿ ಇಂದು ಸಂತಸದ ವಾತಾವರಣ ಸೃಷ್ಟಿಯಾಗಿದೆ. ಇಂದು ಮೇಘನಾ ರವರ ಹೆರಿಗೆಯಾಗಿದೆ. ಇವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇದರಿಂದ ಚಿರಂಜೀವಿ ಸರ್ಜಾ ಹಾಗೂ ಪ್ರಮೀಳಾ ಜೋಷಾಯಿ ಅವರ ಕುಟುಂಬದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಚಿರು ಸರ್ಜಾ ಅವರ ಮಗ ಜೂನಿಯರ್ ಸರ್ಜಾ ಬರುವಿಕೆಯ ಕುರಿತು ಅಕ್ಟೋಬರ್ 16 ರಂದು ಧ್ರುವ ಸರ್ಜಾ ರವರು ಒಂದು ವಿಡಿಯೋ ಮಾಡಿ ಅವರಿಗೆ ಸ್ವಾಗತ ಎಂದು ಕೋರಿದರು.

ಅವರ ಅಪೇಕ್ಷೆಯಂತೆ ಚಿರಂಜೀವಿ ಸರ್ಜಾ ಅವರ ಹೆಂಡತಿ ಮೇಘನಾ ರಾಜ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.ಆದರೆ ಇಲ್ಲಿ ಒಂದು ವಿಶೇಷತೆಯಿದೆ ಅದೇನೆಂದರೆ ಮೇಘನಾ ಚಿರಂಜೀವಿ ಸರ್ಜಾ ರವರ ನಿಶ್ಚಿತಾರ್ಥವು ಇದೇ ದಿನ ನಡೆದಿತ್ತು. ವಿಶೇಷವೆಂಬಂತೆ ಹಿಂದೆ ಜೂನಿಯರ್ ಚಿರು ಸರ್ಜಾ ಆಗಮನವಾಗಿದ್ದು ಕುಟುಂಬ ಸದಸ್ಯರು ತಮ್ಮ ಹರ್ಷಕ್ಕೆ ಪಾರವೇ ಇಲ್ಲ ಎಂದು ಹೇಳುತ್ತಿದ್ದಾರೆ. ಇಡೀ ಕುಟುಂಬದ ಎಲ್ಲ ಸದಸ್ಯರು ಕೂಡ ಬಹಳ ಸಂತೋಷದಲ್ಲಿದ್ದಾರೆ. ಕಳೆದ ಜೀವನ ಏಳರಂದು ಅಚಾನಕ್ಕಾಗಿ ಹೃ’ದಯಾಘಾ’ತದಿಂದ ಚಿರಂಜೀವಿ ಸರ್ಜಾ ಅವರು ನಿ’ಧನರಾಗಿದ್ದರು.

ಆದರೆ ಅವರು ವಿಧಿವಶರಾದ ದಿನವೇ ಮೇಘನಾ ಸರ್ಜಾ ರವರು ಗರ್ಭವತಿಯಾಗಿರುವ ಕುರಿತು ಸುದ್ದಿ ಹೊರಬಿದ್ದಿತ್ತು. ವಿಷಯ ತಿಳಿದ ಬಳಿಕ ಮೇಘನಾ ರವರು ಮನೆಯಲ್ಲೇ ಆರೈಕೆ ಮಾಡಿಕೊಳ್ಳುವುದಕ್ಕೆ ಮುಂದಾದರು. ಇದೇ ವಿಚಾರವಾಗಿ ಚಂದನವನದ ಹಲವಾರು ನಟಿಯರು ನಟರು, ಗಣ್ಯವ್ಯಕ್ತಿಗಳು, ಸ್ನೇಹಿತರು ಎಲ್ಲರೂ ಸೇರಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ಕುರಿತು ವಿಚಾರಿಸಿ ಅವರಿಗೆ ಧೈರ್ಯ ಹೇಳಿದ್ದರು. ಈಗ ಮುದ್ದಾದ ಗಂಡು ಮಗು ಹುಟ್ಟಿರುವುದರಿಂದ ಇಡೀ ಚಂದನವನದಲ್ಲಿ ಖುಷಿಯು ಮನೆಮಾಡಿದೆ. ಕೆಲವು ದಿನಗಳ ಹಿಂದೆ ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ ಒಂದು ವಿಡಿಯೋ ಮೂಲಕ ಸುಳಿವು ನೀಡಿದ್ದರು.

ಮರಿ ಚಿರು ಆಗಮನದ ಕುರಿತು ವಿಷಯ ತಿಳಿಸಿದ ಅವರು ಅವರಿಗಾಗಿ ಭರ್ಜರಿ ಸ್ವಾಗತ ವಿಡಿಯೋನ ಸಹ ಅಪ್ಲೋಡ್ ಮಾಡಿದ್ದರು. ಕೇವಲ ಚಿರಂಜೀವಿ ಸರ್ಜಾ ಕುಟುಂಬದ ಆಪ್ತರ ನಡುವೆ ಅಲ್ಲಿ ಮಾತ್ರ ಇದನ್ನು ತೋರಿಸಲಾಗಿತ್ತು. ಈ ವಿಡಿಯೋ ಕುರಿತು ಬಹಳಷ್ಟು ಚರ್ಚೆಯೂ ಸಹ ಆಗಿತ್ತು. ಅಕ್ಟೋಬರ್ 17 ಚಿರಂಜೀವಿ ಸರ್ಜಾ ರವರ ಹುಟ್ಟಿದ ದಿನವಾದ್ದರಿಂದ ಇಂದಿನ ದಿನವೇ ಏನಾದರೂ ಮೇಘನಾ ರವರು ಮರುಜನ್ಮ ನೀಡಲಿದ್ದಾರೆ ಎಂಬ ಹರಿದಾಡಿತ್ತು. ಇದೆಲ್ಲದಕ್ಕೆ ಉತ್ತರವೆಂಬಂತೆ ಇಂದು ಸರ್ಜಾ ಕುಟುಂಬದಲ್ಲಿ ಮುದ್ದಾದ ಯುವರಾಜನ ಆಗಮನವಾಗಿದೆ.

Leave a Reply

Your email address will not be published. Required fields are marked *