ಆಧ್ಯಾತ್ಮಿಕ ಮಾಹಿತಿಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ದೇವರಿಗೆ ನೈವೇದ್ಯ ಮಾಡುವಾಗ ತುಳಸಿ ದಳವನ್ನು ಬಳಸುವುದು ಏಕೆ.

ದೇವರಿಗೆ ನೈವೇದ್ಯ ಮಾಡುತ್ತೇವೆ. ನೈವೇದ್ಯದ ಸಮಯದಲ್ಲಿ ದೇವರಿಗೆಂದು ಮಾಡಿರುವ ಎಲ್ಲಾ ತಿಂಡಿತಿನಿಸುಗಳಿಗೆ ತುಳಸಿ ದಳವನ್ನು ಹಾಕುತ್ತೇವೆ. ದೇವರಿಗೆ ನೈವೇದ್ಯ ಮಾಡುವಾಗ ತುಳಸಿ ದಳವನ್ನು ಬಳಸುವುದು ಏಕೆ. ಹಿಂದೂ ಧಾರ್ಮಿಕ ಆಚರಣೆಯ ಪ್ರಮುಖ ಭಾಗವಾಗಿ ಪೂಜೆಯ ವೇಳೆ ನೈವೇದ್ಯ ಅರ್ಪಿಸುವ ವೇಳೆ ತುಳಸಿ ದಳ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಯಾಕೆ ಈ ರೀತಿಯ ತುಳಸಿ ದಳವನ್ನೇ ಬಳಸುತ್ತಾರೆ ಎಂಬುದಕ್ಕೆ ಇಲ್ಲಿದೆ ಕಾರಣ.

1. ತುಳಸಿಯ ವೈಶಿಷ್ಟ್ಯಗಳು : ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ. 2. ಲಾಭಗಳು : ಅ. ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ.

ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗಳಿಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ. ಆ. ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇ. ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ಅದರ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ.

ಇಂತಹ ನೈವೇದ್ಯವನ್ನು ಸೇವಿಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ. ಈ ಮಾಹಿತಿಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *