ರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸುದ್ದಿ

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ. ಅಂಬಾರಿ ಅರಮನೆಗೆ ಬಂದ ರೋ’ಚಕ ಕಥೆ.

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ. ಅಂಬಾರಿ ಅರಮನೆಗೆ ಬಂದ ರೋ’ಚಕ ಕಥೆ. ಮೈಸೂರು ದಸರ ಎಂದರೆ ಅದು ಕನ್ನಡ ನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ. ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹು ಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ‌. ಜಂಬೂ ಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ.

ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ. ಅಂಬಾರಿಯ ಇತಿಹಾಸ ಬಹಳ ರೋ’ಚಕವಾಗಿದೆ. ಮೂಲತಃ ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು.

ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ. ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲ ರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ.

ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನು ರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀರಂಗಪಟ್ಟಣ್ಣವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ. ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.

Leave a Reply

Your email address will not be published. Required fields are marked *