ಆಧ್ಯಾತ್ಮಿಕ ಮಾಹಿತಿಉಪಯುಕ್ತ ಮಾಹಿತಿ

ಶಮೀ ಸ್ವೀಕರಿಸಿ ಬಂಗಾರದಂತೆ ಒಳ್ಳೆಯ ಮಾತನಾಡಿ.

ಶಮೀಪೂಜ : ವಿಜಯ ದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು. ಸರ್ವೇ ಜನಃ ಸುಖಿನೋ ಭವಂತು. ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನಿ ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ. ಈ ಮಂತ್ರದಿಂದ ಶಮೀ ವೃಕ್ಷಕ್ಕೆ (ಬನ್ನಿ) ಪೂಜಿಸಿ, ಹಿರಿಯರಿಗೆ ಶಮೀ ಎಲೆಗಳನ್ನು ದಕ್ಷಿಣ ಸಹಿತ ಕೊಟ್ಟು, ನಮಿಸುವ ವಾಡಿಕೆಯಿದೆ. ಶಮೀ ವೃಕ್ಷ ಪಾಂಡವರ ಅಜ್ಞಾತವಾಸ ಕಾಲದಲ್ಲಿ ಅವರ ಶಸ್ತ್ರಾಯುಧಕ್ಕೆಲ್ಲಾ ಆಶ್ರಯ ನೀಡಿತ್ತು. ಇದೇ ದಿನ ಅರ್ಜುನ ತನ್ನ ಶಸ್ತ್ರಗಳನ್ನು ತೆಗೆದು ವಿರಾಟರಾಜನ ವಿರುದ್ಧ ಯುದ್ಧಕ್ಕೆ ಬಂದ ಕೌರವರನ್ನು ಸೋಲಿಸಿ ಕಳಿಸಿದನು. (ಉತ್ತರ ಗೋಗ್ರಹಣ).

ಶಮೀ ಪತ್ರವನ್ನು ಈದಿನ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ. ಶಮೀ ಪತ್ರವು ಬಂಗಾರದ ಸಂಕೇತವೆನ್ನುತ್ತಾರೆ. ಹಿಂದೆ ಅಯೋಧ್ಯೆಯಲ್ಲಿ ಕೌತ್ಸ್ಯ ಎಂಬ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಗುರುಗಳನ್ನು ಏನಾದರೂ ಗುರುದಕ್ಷಿಣೆ ಸ್ವೀಕರಿಸಿ ಎಂದು ಕೇಳಿದನು. ಗುರುಗಳು ನನಗೆ ಏನೂ ಬೇಡವೆನ್ನಲು ಕೌತ್ಸನು ಪದೇ ಪದೇ ಗುರುದಕ್ಷಿಣೆ ಏನನ್ನಾದರೂ ಕೇಳಬೇಕೆಂದು ಹಿಂಸಿಸಿದ ಶಿಷ್ಯನನ್ನು ಹೇಗಾದರೂ ಸುಮ್ಮನಾಗಿಸಲು ನನಗೆ 14 ಕೋಟಿ ಬಂಗಾರದ ನಾಣ್ಯಗಳು ಬೇಕು ಎಂದನು.

ಕೌತ್ಸನಾದರೋ ಶ್ರೀ ರಾಮಚಂದ್ರನ ಬಳಿ ಬಂದು ನನಗೆ ಗುರುದಕ್ಷಿಣೆ ನೀಡಲು ಬಂಗಾರದ ಕಾಸು ಬೇಕೆನ್ನಲು ರಾಮಚಂದ್ರನು ಅವನನ್ನು ಶಮೀ ವೃಕ್ಷದ ಬಳಿಯಲ್ಲಿ ನಿಲ್ಲಲು ಹೇಳಿದನು. ಮುಂದಿನ ಮೂರು ದಿನದಲ್ಲಿ ರಾಮಚಂದ್ರನ ಇಚ್ಛೆಯಿಂದ ಕುಬೇರನು ಆ ಮರದ ಎಲೆಗಳನ್ನು ಬಂಗಾರವಾಗಿಸಿದನು. ಕೌತ್ಸನು ತನಗೆ ಅವಶ್ಯವಿದ್ದ ೧೪ ಕೋಟಿ ಧಾನ್ಯಗಳನ್ನು ತೆಗೆದುಕೊಂಡು ಅದನ್ನು ತನ್ನ ಗುರುಗಳಿಗೆ ದಕ್ಷಣೆಯಾಗಿ ನೀಡಿದನು. ಉಳಿದದ್ದನ್ನು ಉಳಿದವರಿಗೆ ಹಂಚಿದನು. ಇದು ನಡೆದದ್ದು ವಿಜಯದಶಮಿ ದಿನ. ಅದರಂತೆ ಈದಿನ ಪರಸ್ಪರ ಶಮೀ ವಿತರಣೆ ಸಂಪ್ರದಾಯವಿದೆ.

ಈ ದಿನ ಶಮೀ ಪತ್ರವನ್ನು ದೇವರ ಪೂಜೆಗೆ ಉಪಯೋಗಿಸಿ ನಂತರ ಶಮೀ ಪತ್ರವನ್ನು ದಕ್ಷಿಣೆಯೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ. ಶಮೀ ಸ್ವೀಕರಿಸಿ ಬಂಗಾರದಂತೆ ಒಳ್ಳೆಯ ಮಾತನಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *