ದತ್ತನ ಪರಿವಾರದ ಭಾವಾರ್ಥವನ್ನು ನಾವು ತಿಳಿದುಕೊಳ್ಳೋಣ. ಪುಣ್ಯ ಪ್ರಾಪ್ತಿಗೆ ಇದನ್ನು ತಪ್ಪದೇ ಓದಿ.
ನೀವೆಲ್ಲರೂ ದತ್ತಾತ್ರೇಯ ಸ್ವಾಮಿಯ ಕಥೆಗಳನ್ನು ಕೇಳಿರುತ್ತೀರಿ. ದತ್ತಾತ್ರೇಯ ಸ್ವಾಮಿಯ ಕೃಪೆಗೆ ಪಾತ್ರರಾಗಲು ಹಲವಾರು ವ್ರತ ನಿಯಮಗಳನ್ನ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಗುರುಚರಿತ್ರೆ ಓದುವುದರಿಂದ ನಾವು ಹಿಂದೆ ಮಾಡಿದ ಎಲ್ಲಾ ಪಾಪಗಳು ನಾಶವಾಗುತ್ತದೆ. ನಮ್ಮ ಮನಸ್ಸು ತಿಳಿಯಾಗಿ ಮುಂಬರುವ ದಿನಗಳಲ್ಲಿ ನಾವು ಒಳ್ಳೆಯ ದಾರಿಯಲ್ಲಿ ನಡೆಯಲು ನೆರವಾಗುತ್ತದೆ. ಗುರುಚರಿತ್ರೆಯಲ್ಲಿ ಬರುವ ಒಂದೊಂದು ಕಥೆಯೂ ಸಹ ನಮ್ಮ ಜೀವನಕ್ಕೆ ಪಾಠವಾಗಿದೆ.
ಗುರುಹಿರಿಯರ ಮಹತ್ವ ಏನೆಂದು ಇದರಲ್ಲಿ ನಾವು ತಿಳಿದುಕೊಳ್ಳಬಹುದು. ಗುರುಚರಿತ್ರೆಯಲ್ಲಿ ಬರುವ ಎಲ್ಲಾ ಪಾತ್ರಗಳು ಒಂದೊಂದು ಅರ್ಥಗರ್ಭಿತವಾದ ಸಂದೇಶವನ್ನು ನಮಗೆ ನೀಡುತ್ತದೆ. ದತ್ತನ ಪರಿವಾರದ ಭಾವಾರ್ಥ : ಅ. ಹಸು : ದತ್ತನ ಹಿಂದೆ ಇರುವ ಹಸು ಪೃಥ್ವಿ ಮತ್ತು ಕಾಮಧೇನುವಿನ ಪ್ರತಿರೂಪವಾಗಿದೆ. ಕಾಮಧೇನು ನಮಗೆ ಬೇಕಾಗುವ ಎಲ್ಲವನ್ನೂ ನೀಡುತ್ತದೆ. ಪೃಥ್ವಿ ಹಾಗೂ ಹಸು ನಮಗೆ ಎಲ್ಲವನ್ನೂ ನೀಡುತ್ತವೆ.
ಆ. ನಾಲ್ಕು ನಾಯಿಗಳು : ಇವುಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಇವುಗಳ ಪ್ರತಿರೂಪವಾಗಿವೆ. ಇ. ಔದುಂಬರ ( ಅತ್ತಿ ) : ದತ್ತನ ಪೂಜನೀಯ ರೂಪ. ಈ ವೃಕ್ಷದಲ್ಲಿ ದತ್ತ ತತ್ತ್ವ ಹೆಚ್ಚು ಪ್ರಮಾಣದಲ್ಲಿರುತ್ತದೆ. ಮೂರ್ತಿವಿಜ್ಞಾನ : ದತ್ತನ ಮೂರ್ತಿಯಲ್ಲಿನ ವಸ್ತುಗಳ ಭಾವಾರ್ಥ ಈ ಮುಂದಿನಂತಿದೆ. ಅ. ಕಮಂಡಲ ಮತ್ತು ಜಪಮಾಲೆ : ಇದು ಬ್ರಹ್ಮದೇವನ ಪ್ರತಿರೂಪವಾಗಿದೆ. ಆ. ಶಂಖ ಮತ್ತು ಚಕ್ರ : ಶ್ರೀವಿಷ್ಣುವಿನ ಪ್ರತಿರೂಪವಾಗಿದೆ. ಇ. ತ್ರಿಶೂಲ ಮತ್ತು ಡಮರು (ಚರ್ಮವಾದ್ಯ) : ಶಂಕರನ ಪ್ರತಿರೂಪವಾಗಿದೆ.
ಈ. ಜೋಳಿಗೆ : ಇದು ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದುಕೊಂಡು ಮನೆಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.