ಹಣ ಉಳಿಸಲು ವಾಸ್ತು ಬಹಳ ಸಹಾಯಕಾರಿ. ಆರ್ಥಿಕ ಅಭಿವೃದ್ಧಿಗಾಗಿ ಇದನ್ನು ತಪ್ಪದೆ ಪಾಲಿಸಿ.
ಹಣ ಉಳಿಸಲು ವಾಸ್ತು ಬಹಳ ಸಹಾಯಕಾರಿ. ಆರ್ಥಿಕ ಅಭಿವೃದ್ಧಿಗಾಗಿ ಇದನ್ನು ತಪ್ಪದೆ ಪಾಲಿಸಿ. ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು. ಪಿರಮಿಡ್ ಮಾದರಿಯನ್ನು ಮನೆಯಲ್ಲಿ ಇರಿಸುವುದರಿಂದ ಅನುಕೂಲವಾಗುತ್ತದೆ. ಇದನ್ನು ಯಾವುದಾದರೂ ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಡಬೇಕು.
ಮನೆಯ ಮಂದಿ ಶಾಂತಿ, ಅನ್ಯೋನ್ಯವಾಗಿ ಇರುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಕೊರತೆ ಇರಬಾರದು ಎಂದರೆ, ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು. ಮನೆಯ ಒಂದೇ ಕೋಣೆಗೆ ಎರಡು ಬಾಗಿಲು ಇದ್ದರೆ, ಅದು ಎದುರು ಬದುರು ಇರಬಾರದು. ಹೀಗಿದ್ದರೆ ಹಣ ಬಂದ ಹಾಗೆ ಹೋಗುತ್ತದೆ. ಹಣದ ಲಾಕರ್‌ನ ಮುಂಭಾಗದಲ್ಲಿ ಕನ್ನಡಿಯನ್ನು ಇಡಿ.
ಕನ್ನಡಿಯಲ್ಲಿ ಲಾಕರ್ ಬಿಂಬ ಕಾಣುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಅಕ್ವೇರಿಯಂ ಅನ್ನು ಲಿವಿಂಗ್ ರೂಮ್‌ನ ಈಶಾನ್ಯ ದಿಕ್ಕಿನಲ್ಲಿರಿಸಿ. ಅದು ಸದಾ ಸ್ವಚ್ಛವಾಗಿರುವಂತೆ ಎಚ್ಚರ ವಹಿಸಿ. ನೇರಳೆ ಬಣ್ಣದ ಹೂ ಬಿಡುವ ಗಿಡಗಳನ್ನು ಮನೆಯಲ್ಲಿ ಇರಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ನೇರಳೆ ಬಣ್ಣದ ಕುಂಡದಲ್ಲಿ ಮನಿಪ್ಲಾಂಟ್ ಬೆಳೆಯಿರಿ.
ಪಿರಮಿಡ್ : ಒಂದು ವೇಳೆ ಮನೆಯಲ್ಲಿ ಬೆಳ್ಳಿಯ, ಕಂಚಿನ ಅಥವಾ ತಾಮ್ರದ ಪಿರಮಿಡ್ ಒಂದನ್ನು ಮನೆಯವರೆಲ್ಲಾ ಹೆಚ್ಚು ಕಾಲ ಕಳೆಯುವ ಕೋಣೆಯಲ್ಲಿ ಇರಿಸಿದರೆ ಮನೆಯ ಎಲ್ಲಾ ಸದಸ್ಯರ ಆದಾಯ ಹೆಚ್ಚುತ್ತದೆ. ಹೀಗೆ ಹಲವಾರು ಸರಳ ಉಪಾಯಗಳು ನಮ್ಮ ವಾಸ್ತು ಶಾಸ್ತ್ರದಲ್ಲಿ ಅಡಗಿದೆ. ಅದಕ್ಕಾಗಿಯೇ ನಮ್ಮ ಹಿರಿಯರು ಹೇಳಿರುವುದು, ಯಾವುದೇ ಕಟ್ಟಡ ನಿರ್ಮಾಣವಾಗುವ ಮೊದಲು ವಾಸ್ತುವನ್ನು ತಲೆಯಲ್ಲಿಟ್ಟುಕೊಂಡೇ ಶುರು ಮಾಡಬೇಕು ಎಂದು.