ಅಂದವಾದ ತ್ವಚೆ ಪಡೆಯಲು ಹೋಗಿ ಈ ತಪ್ಪುಗಳನ್ನು ಮಾಡಲೇಬೇಡಿ. ಕಾಂತಿಯುತ ತ್ವಚೆಗೆ ಕೆಲವು ಸಲಹೆಗಳು.
ನೀವು ಮಾಡಬಾರದ ತಪ್ಪುಗಳು. ಯಾರೋ ಹೇಳಿದ ಬ್ಯೂಟಿ ಟಿಪ್ಸ್ ಗಳನ್ನು ಹಿಂದೆ ಮುಂದೆ ನೋಡದೆ ನೀವು ಫಾಲೋ ಮಾಡಬೇಡಿ. ಗೆಳತಿಯಿಂದ ಹಿಡಿದು ಮಕ್ಕಳ ಸ್ಕೂಲಿನ ವಾಟ್ಸಪ್ ಗ್ರೂಪ್ ನವರಿಗೆ ಎಲ್ಲೆಡೆ ಮೇಕಪ್ ಬಗ್ಗೆ ಮಹಿಳೆಯರಿಗೆ ಸಲಹೆಗಳು ಬರುತ್ತಲೇ ಇರುತ್ತದೆ. ಆದರೆ ಅವುಗಳಲ್ಲಿ ಎಲ್ಲವೂ ನಿಜವಾಗಿ ಇರುವುದಿಲ್ಲ. ಯಾರೋ ಹೇಳಿದ ಬ್ಯೂಟಿ ಟಿಪ್ಸ್ ಗಳನ್ನು ಹಿಂದೆ ಮುಂದೆ ನೋಡದೆ ನೀವು ಫಾಲೋ ಮಾಡಬೇಡಿ. ಅದರಿಂದ ಏನು ಪ್ರಯೋಜನವಿಲ್ಲ. ಹಣವೂ ಸಹ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಚರ್ಮದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.
ಕ್ಲಿಂಜಿಂಗ್ ಮಿಲ್ಕ್ ಮತ್ತು ಫೇಶಿಯಲ್ ಪ್ಯಾಕ್ ನಿಂದ ಚರ್ಮ ಸುಂದರವಾಗುತ್ತದೆ. ಹಾಗೂ ಹೊಳೆಯುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಸತ್ಯವಾದ ಸಂಗತಿ ಏನೆಂದರೆ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುವುದು ಸಾಬೂನು. ಇದು ತ್ವಚೆಯನ್ನು ಡೀಪ್ ಕ್ಲೀನಿಂಗ್ ಮಾಡುತ್ತದೆ. ಎಲ್ಲಾ ಮನೆ ಮದ್ದುಗಳು ಒಳ್ಳೆಯವು. ಅವುಗಳಿಂದ ಚರ್ಮದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ ಎಂಬ ಭ್ರಮೆ ಬಹಳ ಜನರಲ್ಲಿದೆ. ಅದು ಕೂಡ ತಪ್ಪು. ಮನೆಮದ್ದನ್ನು ನೀವು ಉಪಯೋಗ ಮಾಡಿಕೊಂಡು ಬಂದಿರಬಹುದು. ಆದರೆ ಇದರಿಂದ ಎಲ್ಲಾ ಸಲವೂ ಉತ್ತಮ ಪರಿಣಾಮವೇ ಸಿಗಬೇಕು ಎಂದೇನೂ ಇಲ್ಲ.
ವಿಟಮಿನ್ ಎ ಮತ್ತು ವಿಟಮಿನ್ ಇ ಇರುವ ಸ್ಕಿನ್ ಕ್ರೀಂ ಹಚ್ಚುವುದರಿಂದ ಮುಖ ಸುಕ್ಕುಗಟ್ಟುವುದಿಲ್ಲ ಎಂದು ಬಹಳ ಜನರು ಮೇಕಪ್ ವೇಳೆ ಇವೆರಡನ್ನು ಬಳಸುತ್ತಾರೆ. ಆದರೆ ಅದು ಪೂರ್ತಿ ನಿಜವಲ್ಲ. ಸ್ಕಿನ್ ಕ್ರೀಮ್ ನಲ್ಲಿರುವ ಮಾಯಿಶ್ಚರೈಸರ್ ಮುಖದ ಮೇಲಿನ ಸುಕ್ಕನ್ನು ಸ್ವಲ್ಪ ಸಮಯದವರೆಗೆ ದೂರ ಮಾಡಬಹುದು. ಆದರೆ ಪೂರ್ತಿಯಾಗಿ ದೂರ ಮಾಡಲು ಸಾಧ್ಯವಿಲ್ಲ. ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದಪ್ಪವಾದ ಮೇಕಪ್ ನಿಂದ ಅವುಗಳನ್ನು ಮರಿ ಮಾಡಿಕೊಳ್ಳಬೇಕು ಅಷ್ಟೇ.
ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದ ಐಬ್ರೋ ಬೆಳೆಯುತ್ತದೆ ಎಂದು ಕೆಲ ಮಹಿಳೆಯರು ಪ್ರತಿದಿನ ಅದನ್ನು ಹಚ್ಚುತ್ತಾರೆ. ಆದರೆ ಯಾವುದೇ ಎಣ್ಣೆಯನ್ನು ಹಚ್ಚಿದ ಮಾತ್ರಕ್ಕೆ ಕೂದಲು ಉದ್ದ ಬೆಳೆಯುವುದಿಲ್ಲ. ಬದಲಾಗಿ ಮಸಾಜ್ ಮಾಡಿದರೆ ಅದು ಕೂದಲಿನ ಆಳದವರೆಗೆ ಹೋಗಿ ಕೂದಲಿಗೆ ಪ್ರೋಟೀನ್ ನೀಡುತ್ತದೆ. ಇವು ಮೇಕಪ್ ಮಾಡಿಕೊಳ್ಳುವಾಗ ಒಂದು ಮುಖ್ಯವಾದ ಸಮಸ್ಯೆ ಉಂಟಾಗುತ್ತದೆ. ನೀನೆಂದರೆ ಮುಖಕ್ಕೆ ಹಾಕುವ ಫೌಂಡೇಶನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುವುದು.
ಮುಖಕ್ಕೆ ಹಾಕುವಂತಹ ಫೌಂಡೇಶನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ ಎಂಬ ದೂರು ಎಷ್ಟು ಮಹಿಳೆಯರು ಹೇಳುತ್ತಿರುತ್ತಾರೆ. ಇದರಿಂದ ಮೇಕಪ್ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಫೌಂಡೇಶನ್ ಹರಡಲು ಒಳ್ಳೆಯ ಮೇಕಪ್ ನ ಮೂಲ ಒದಗಿಸಿ ಕೊಡಿ. ಫೌಂಡೇಶನ್ ಬಳಸುವ ಮೊದಲು ನೀವು ಒಳ್ಳೆಯ ಪ್ರೈಮರ್ ಬಳಸಿ. ಸಿಲಿಕಾನ್ ಪ್ರೈಮರ್ ಒಳ್ಳೆಯದು. ಇದು ಮೇಕಪ್ ನ ಮೂಲವಾಗಿರಲಿ. ಇದನ್ನು ಹಚ್ಚಿಕೊಂಡರೆ ಫೌಂಡೇಶನ್ ಅಸ್ತವ್ಯಸ್ತವಾಗುವುದು ತಪ್ಪುತ್ತದೆ.
ಮತ್ತೊಂದು ಸಮಸ್ಯೆಯೆಂದರೆ ಕಣ್ಣಿನ ಮೇಕಪ್ ಮಾಡಿಕೊಳ್ಳುವ ವೇಳೆಯಲ್ಲಿ ಕಣ್ಣಿನಿಂದ ನೀರು ಬರುವುದು. ಇದು ಪ್ರತಿಯೊಬ್ಬರಿಗೂ ಆಗುತ್ತದೆ. ಇದಕ್ಕೆ ಪರಿಹಾರವೆಂದರೆ ಕಾಟನ್ ಬಡ್ಸ್. ಕಾಟನ್ ಬಡ್ ಅನ್ನು ಮೂಗಿನ ಹತ್ತಿರ ಕಣ್ಣಿನ ಬದಿಯಲ್ಲಿ ತುಂಬಾ ಎಚ್ಚರಿಕೆಯಿಂದ ಮೆತ್ತಗೆ ಇಟ್ಟುಕೊಳ್ಳಿ. ಹತ್ತಿಯು ಕಣ್ಣಿನ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ಕಣ್ಣನ್ನು ಆರಾಮವಾಗಿ ತೆರೆಯಬಹುದು.
ಮೇಕಪ್ ಕೂಡ ಹಾಳಾಗುವುದಿಲ್ಲ. ಈ ಮಾಹಿತಿಯ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಬಹಳಷ್ಟು ಉಪಾಯ ಕಾರಿ ಮಾಹಿತಿಯನ್ನು ಮತ್ತಷ್ಟು ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ. ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು. ಹಾಗಾಗಿ ಮತ್ತಷ್ಟು ಉಪಯುಕ್ತ ಲೇಖನಗಳನ್ನು ನಾವು ಪ್ರತಿದಿನ ನಿಮಗೆ ನೀಡುತ್ತಿರುತ್ತೇವೆ. ನೀವು ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಓದಲು ತಿಳಿಸಿ.