ನನ್ನ ದಾರಿ ಸುಗಮವಾಗಲಿ ಎಂದು ಕೇಳಿಕೊಂಡರೆ ನೀವು ನಿಮ್ಮ ಜೀವನದಲ್ಲಿ ಅರ್ಧ ಸೋತಂತೆ.
ನನ್ನ ದಾರಿ ಸುಗಮವಾಗಲಿ. ಹಾಗಂತ ಕೇಳಿಕೊಂಡರೆ ನೀವು ನಿಮ್ಮ ಜೀವನದಲ್ಲಿ ಅರ್ಧ ಸೋತಂತೆ. ತುಂಬಾ ನೇರವಾಗಿರುವ ಯಾವುದೇ ಏರುಪೇರುಗಳು ಇಲ್ಲದ, ತಿರುವುಗಳೇ ಇಲ್ಲದ ಹಾದಿಯಲ್ಲಿ ಕಾರ್ ಆಗಲಿ ಅಥವಾ ಕಾರನ್ನು ಓಡಿಸುವವನಿಗೇ ಆಗಲಿ, ಯಾವ ಸವಾಲುಗಳು ಇಲ್ಲ. ರಸ್ತೆ ಮುಗಿಯುವ ತನಕ ಸಾಗುತ್ತಿದ್ದರೆ ಮುಗೀತು. ಪಯಣದ ಕೊನೆ ಸಿಕ್ಕೇ ಬಿಡುತ್ತದೆ. ಒಮ್ಮೆ ಪ್ರಯಾಣ ಮುಗಿಯಿತೆಂದರೆ ಮತ್ತೊಂದು ಊರು, ಮತ್ತಷ್ಟು ಮಂದಿ, ಮತ್ತಷ್ಟು ಮಾತುಗಳು.
ಜೀವಿಸುವ ಆಸೆ ಹೊಂದಿದವನಿಗೆ ದಾರಿ ಸುಗಮ ವಾಗಿ ಇರಕೂಡದು. ದುರ್ಗಮವಾದ ದಾರಿ ನನ್ನದಾಗಲಿ ಎಂದು ಕೇಳಿಕೊಂಡರು ಕಷ್ಟ ತಪ್ಪಿದ್ದಲ್ಲ. ಆ ಹಾದಿ ಕಷ್ಟದ್ದೇ ಆಗಿರುತ್ತದೆ. ಪುಣೆ ಮುಟ್ಟುವ ಭರವಸೆಯಲ್ಲಿರುವುದಿಲ್ಲ. ಕೊನೆ ಮುಟ್ಟುವುದು ಗುರಿ ಅಂದುಕೊಂಡವರು ಈ ಹಾದಿಯನ್ನು ಹಿಡಿಯಲೇ ಬಾರದು. ದಾರಿಯ ಪ್ರತಿಯೊಂದು ತಿರುವಲ್ಲೂ ನಿಂತು, ಆಗಾಗ ಹಿಂದಕ್ಕೆ ತಿರುಗಿ, ಸುತ್ತಲಿನ ಬೆಟ್ಟ ಕಣಿವೆಗಳ ಕಡೆ ಕಣ್ಣುಗಳನ್ನು ಹಾಯಿಸಿ, ಅಗೋ ಅಲ್ಲೊಂದು ಹಕ್ಕಿ ಹಾರಿತು.
ಇಲ್ಲೊಂದು ಚಿಟ್ಟೆ ಜಿಗಿಯಿತು. ನಡು ರಾತ್ರಿಯಲ್ಲಿ ರಸ್ತೆಯನ್ನು ಸರಕ್ಕನೆ ದಾಟಿದ್ದು ಮುಂಗುಸಿಯಾ ಇಲ್ಲ ಕಾಡುಬೆಕ್ಕು ಎಂದು ಬೆರಗಾಗಿ, ದೂರದಲ್ಲಿ ಕೆಂಪಗೆ ದಿಟ್ಟಿಸಿ ನೋಡುತ್ತಿರುವ ಹಳ್ಳಿಗಾಡಿನ ರೈತನ ಸುಡುತ್ತಿರುವ ಬೀಡಿಯೋ, ಬೆಳಗಿನ ಮೊದಲ ಕಣ್ಣ ಅಂತ ಆಶ್ಚರ್ಯ ಪಟ್ಟು, ಕೆಟ್ಟುಹೋದ ರಸ್ತೆಯಲ್ಲಿ ಏರಿಳಿಯುತ್ತಾ ಸಾಗಿದರೆ ಮಾತ್ರ ಹಾದಿಯ ಸುಖ. ನಡೆದ ದಾರಿಯನ್ನು ಸುಖಿಸದವನು, ಗುರಿ ತಲುಪಿದ ಮೇಲೆ ಸಂತೋಷದಿಂದ ಇರಲಾರನು.
300 ಮೈಲಿ, 5:30 ಗಂಟೆಯಲ್ಲಿ ಮುಟ್ಟಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವನ ಹತ್ತಿರ ಕೇಳಿ ನೋಡಿ. ಆಮೇಲೆ ಏನು ಮಾಡಿದೆ ಎಂಬ ಪ್ರಶ್ನೆ ಕೇಳಿ. ಇದಕ್ಕೆ ಅವನ ಉತ್ತರ ಏನೆಂದರೆ ಅವನು ನಿದ್ದೆ ಹೊಡೆದಿರುತ್ತಾನೆ. ಇದರ ಬಗ್ಗೆ ಅನೇಕರು ಅನೇಕ ಕಥೆಗಳನ್ನು ಹೇಳುತ್ತಾರೆ. ದಾರಿಯೇ ಮುಖ್ಯ ಎಂದು ವಾದಿಸುವವರು, ಗುರಿ ಸೇರುವುದೇ ಅಂತಿಮ ಎನ್ನುವವರು ನೆನೆಯಬೇಕಾದ ಪದ್ಯವೆಂದರೆ ಸ್ಟಾಪಿಂಗ್ ಬೈ ವುಡ್ಸ್ ಆನ್ ಎ ಸ್ನೋವಿ ಈವನಿಂಗ್.
ಈ ಪದ್ಯದ ನಾಯಕ ಕುದುರೆ ಮೇಲೆ ಕೂತು ಸಾಗಿದ್ದಾನೆ. ಅಕ್ಕ-ಪಕ್ಕದ ದಟ್ಟ ಕಾಡುಗಳು ಮುಂದಕ್ಕೆ ಅಡಿಯಿಡಬೇದ ಎನ್ನುವಷ್ಟು ಸೊಗಸಾಗಿವೆ. ಆದರೆ ಅವನು ತಲುಪಲೇಬೇಕು. ಅವನಿಗೆ ಒಂದಿಷ್ಟು ಜವಾಬ್ದಾರಿಗಳಿವೆ. ಯಾರಿಗೂ ಅವನು ಬರುತ್ತೇನೆಂದು ಮಾತು ಕೊಟ್ಟಿರುತ್ತಾನೆ. ಕೊಟ್ಟ ಮಾತು ಕೂಡದ ಮಾತು ಎರಡರ ನಡುವೆ ಸಂದಿಗ್ಧ ಪರಿಸ್ಥಿತಿ. ಜೀವಕ್ಕೆ ಕೊಟ್ಟ ಮಾತು ಕೊನೆಗೂ ಬಿದ್ದೇ ಹೋಗುತ್ತದೆ. ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ ಅಂತ ಕವಿ ಕೇಳುತ್ತಾನಲ್ಲ.
ಹಾಗೆಯೇ ಕೇಳಿಕೊಳ್ಳಲಾದರೂ ದಾರಿ ಕಷ್ಟಕರವಾಗಿರಲಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.